ಹೈದರಾಬಾದ್ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ, ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್ ಪರ ಕಣಕಿಳಿದಿಯಲಿದ್ದಾರೆ. ಈ ಋತುವಿನಲ್ಲಿ ರಹಾನೆ ಹೊಸ ಲುಕ್ನಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.
ಹಲವು ಸೀಸನ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಬೀಸಿದ್ದ ರಹಾನೆ, ಕಳೆದ ಆವೃತ್ತಿಯಿಂದ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಕಳೆದ ಬಾರಿಯ ಐಪಿಎಲ್ ಸೀಸನ್ನಲ್ಲಿ ಇವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಬಂದಿಲ್ಲ. ಕೆಲವೇ ಕೆಲವು ಪಂದ್ಯಗಳಲ್ಲಿ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆದಿದ್ದರು.
-
New season 👉🏽 New look 😎
— Delhi Capitals (@DelhiCapitals) March 26, 2021 " class="align-text-top noRightClick twitterSection" data="
Rate @ajinkyarahane88's new look on a scale of 1️⃣ to 🔥#YehHaiNayiDilli #IPL2021 #VIVOIPL pic.twitter.com/1mWdCvdgOz
">New season 👉🏽 New look 😎
— Delhi Capitals (@DelhiCapitals) March 26, 2021
Rate @ajinkyarahane88's new look on a scale of 1️⃣ to 🔥#YehHaiNayiDilli #IPL2021 #VIVOIPL pic.twitter.com/1mWdCvdgOzNew season 👉🏽 New look 😎
— Delhi Capitals (@DelhiCapitals) March 26, 2021
Rate @ajinkyarahane88's new look on a scale of 1️⃣ to 🔥#YehHaiNayiDilli #IPL2021 #VIVOIPL pic.twitter.com/1mWdCvdgOz
ಕಳೆದ ಬಾರಿಯ ಋತುವಿನಲ್ಲಿ ದೆಹಲಿ ಪರ 9 ಪಂದ್ಯಗಳನ್ನಾಡಿದ್ದ ಅಜಿಂಕ್ಯ, 14.12 ರ ಸರಾಸರಿಯಲ್ಲಿ ಕೇವಲ 113 ರನ್ಗಳಿಸಿದ್ದರು. ಒಂದು ಪಂದ್ಯದಲ್ಲಿ ಮಾತ್ರ 60 ರನ್ ಸಿಡಿಸಿ ಮಿಂಚಿದ್ದು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಪ್ಲಾಪ್ ಆಗಿದ್ದರು. ಇದು ದೆಹಲಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಓದಿ : ವಿರಾಟ್ ಕೊಹ್ಲಿ ರಶೀದ್ಗೆ ಎಷ್ಟು ಬಾರಿ ವಿಕೆಟ್ ಒಪ್ಪಿಸಿದ್ದಾರೆ ಗೊತ್ತಾ..?
ಕಳೆದ ಬಾರಿಯ ಕಳಪೆ ಫಾರ್ಮ್ನಿಂದ ಹೊರ ಬರಲು ತಯಾರಿ ನಡೆಸಿರುವ ರಹಾನೆ ಈ ಬಾರಿಯ ಐಪಿಎಲ್ನಲ್ಲಿ ಮಿಂಚು ಹರಿಸಲು ಸಜ್ಜಾಗುತ್ತಿದ್ದಾರೆ. ಅದರಂತೆ ಅವರ ಲುಕ್ನಲ್ಲೂ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ರಹಾನೆ 2021ರ ಐಪಿಎಲ್ನಲ್ಲಿ ಕ್ಲೀನ್-ಶೇವ್ ಲುಕ್ ನಲ್ಲಿ ಆಡಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಅಂಜಿಕ್ಯ ರಹಾನೆ ಕ್ಲೀನ್-ಶೇವ್ ಲುಕ್ನಲ್ಲಿ ಇರುವ ಪೋಟೋವನ್ನ ತಮ್ಮ ಅಧಿಕೃತ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದೆ. ಅಂಜಿಕ್ಯ ರಹಾನೆ ನ್ಯೂ ಲುಕ್ನ್ನು ರೇಟ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದೆ.