ಮುಂಬೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ಕೊನೆ ವಾರದಿಂದ ಆರಂಭಗೊಳ್ಳಲಿದ್ದು, ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ ಇಂದು ಐಪಿಎಲ್ನ ಎಲ್ಲ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿತು. ಇದಾದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಜಯ್ ಶಾ ಮಾತನಾಡಿದರು. ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಬೇಕೆಂದು ಅನೇಕ ತಂಡದ ಮಾಲೀಕರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೀಗಾಗಿ, ಭಾರತದಲ್ಲೇ ಮಹಾಟೂರ್ನಿ ನಡೆಸಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
-
I am delighted to confirm that the 15th season of the IPL will start in the last week of March and will run until May end. A majority of the team owners expressed their wish that the tournament be held in India: BCCI Secretary Jay Shah#IPL2022
— ANI (@ANI) January 22, 2022 " class="align-text-top noRightClick twitterSection" data="
(File photo) pic.twitter.com/dUabG1p14h
">I am delighted to confirm that the 15th season of the IPL will start in the last week of March and will run until May end. A majority of the team owners expressed their wish that the tournament be held in India: BCCI Secretary Jay Shah#IPL2022
— ANI (@ANI) January 22, 2022
(File photo) pic.twitter.com/dUabG1p14hI am delighted to confirm that the 15th season of the IPL will start in the last week of March and will run until May end. A majority of the team owners expressed their wish that the tournament be held in India: BCCI Secretary Jay Shah#IPL2022
— ANI (@ANI) January 22, 2022
(File photo) pic.twitter.com/dUabG1p14h
ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಐಪಿಎಲ್ನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದು, 2022ರ ಆವೃತ್ತಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ದೇಶದಲ್ಲಿ ಕೋವಿಡ್ ಹೊಸ ರೂಪಾಂತರ ಕಾಣಿಸಿಕೊಂಡಿರುವ ಕಾರಣ ಇದೀಗ ಟೂರ್ನಿ ನಡೆಸಲು ಪ್ಲಾನ್ ಬಿ ರೂಪಿಸಲಾಗಿದೆ ಎಂದರು.
ಇದನ್ನೂ ಓದಿರಿ: 2022 ಐಪಿಎಲ್ ಭಾರತದಲ್ಲೇ ನಡೆಸಲು ತೀರ್ಮಾನ, ಅನಿವಾರ್ಯವಾದರೆ ಮಾತ್ರ ಯುಎಇ
ಐಪಿಎಲ್ ಮೆಗಾ ಹರಾಜು ನಡೆಸಲು ಫೆಬ್ರವರಿ 12-13 ನಿಗದಿಗೊಳಿಸಿದ್ದು, ಅದಕ್ಕೂ ಮುಂಚಿತವಾಗಿ ಐಪಿಎಲ್ ನಡೆಸುವ ಸ್ಥಳಗಳನ್ನ ಖಚಿತ ಪಡಿಸುತ್ತೇವೆ ಎಂದರು. ಬಿಸಿಸಿಐ ಪ್ರಕಾರ 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 27ರಿಂದ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ