ETV Bharat / sports

ಈ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಗದಿದ್ದರೆ, ಮುಂದೆಂದು ಸಿಗುವುದಿಲ್ಲ: ಬಿಬಿಎಲ್ ಸ್ಟಾರ್ ಮೆಕ್​ಡರ್ಮಟ್​ - ಐಪಿಎಲ್ ಮೆಗಾ ಹರಾಜು

ಐಪಿಎಲ್​ನಲ್ಲಿ ಒಮ್ಮೆಯಾದರೂ ಕಾಣಿಸಿಕೊಳ್ಳಬೇಕೆಂಬ ಬಯಕೆ ವಿಶ್ವದ ಯಾವುದೇ ದೇಶದ ಕ್ರಿಕೆಟಿಗನಿಗೂ ಇದ್ದೇ ಇರುತ್ತದೆ. ಇಲ್ಲಿ ಆಡಿದರೆ ಕೇವಲ ದುಡ್ಡು ಸಿಗುವುದು ಮಾತ್ರವಲ್ಲದೆ ವಿಶ್ವ ಕ್ರಿಕೆಟ್​ನಲ್ಲಿ ಉತ್ತಮ ಗುರುತನ್ನು ಪಡೆಯಲಿದ್ದಾರೆ ಎನ್ನುವುದು ಅತಿಶಯೋಕ್ತಿಯಲ್ಲ. ಈಗಾಗಲೇ ಡೇವಿಡ್​ ವಾರ್ನರ್​, ಮ್ಯಾಕ್ಸ್​ವೆಲ್, ಶಾನ್ ಮಾರ್ಶ್​ ಅಂತಹ ಆಟಗಾರರು ಐಪಿಎಲ್​ನಲ್ಲಿ ಆಡಿದ ಬಳಿಕ ಹೆಚ್ಚು ಪ್ರಸಿದ್ಧವಾಗಿದ್ದರು..

McDermott on IPL auction
ಮೆಕ್​ಡರ್ಮಟ್​ ಐಪಿಎಲ್ 2022
author img

By

Published : Jan 25, 2022, 7:08 PM IST

ಮೆಲ್ಬೋರ್ನ್ ​: ಬಿಗ್​ಬ್ಯಾಶ್ ಲೀಗ್​ನಲ್ಲಿ ರನ್​ಗಳ ಹೊಳೆಹರಿಸಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ಸೇರಿಕೊಂಡಿರುವ ಬೆನ್​ ಮೆಕ್​ರ್ಮಟ್​ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುವುದಕ್ಕೆ ಕನಸು ಕಾಣುತ್ತಿದ್ದಾರೆ. ಬಿಬಿಎಲ್​ನಲ್ಲಿ ನೀಡಿರುವ ಪ್ರದರ್ಶನ ಮುಂಬರುವ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯನ್​ ಬ್ಯಾಟರ್​ ಕಡೆ ಫ್ರಾಂಚೈಸಿಗಳು ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ.

2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು13ರಂದು ನಡೆಯಲಿದೆ. ಈಗಾಗಲೇ ಬಿಬಿಎಲ್​ನಲ್ಲಿ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿರುವ ಮೆಕ್​ಡರ್ಮಟ್ ಐಪಿಎಲ್​ ಹರಾಜಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ನನಗೆ ಅವಕಾಶ ಸಿಗದಿದ್ದರೆ, ಯಾವಾಗ ಸಿಗುಬಹುದು ಎನ್ನವುದರ ಕುರಿತು ನನಗೆ ಖಾತ್ರಿಯಿಲ್ಲ. ಈಗ ನಾನು ನೀಡಿರುವ ಪ್ರದರ್ಶನಕ್ಕಿಂತಲೂ ಇನ್ನೂ ಉತ್ತಮವಾಗಿ ಏನೂ ಮಾಡಲು ನನ್ನಿಂದ ಆಗುವುದಿಲ್ಲ ಎಂದು ಇಎಸ್​ಪಿನ್​ಗೆ ನೀಡಿರುವ ಸಂದರ್ಶನದಲ್ಲಿ ಮೆಕ್​ಡರ್ಮಟ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಯುಎಇಗಿಂತಲೂ ಕಡಿಮೆ ವೆಚ್ಚದಲ್ಲಿ ಐಪಿಎಲ್​ ಆಯೋಜಿಸಲು ಆಫರ್ ನೀಡಿದ ದಕ್ಷಿಣ ಆಫ್ರಿಕಾ

ಐಪಿಎಲ್​ನಲ್ಲಿ ಒಮ್ಮೆಯಾದರೂ ಕಾಣಿಸಿಕೊಳ್ಳಬೇಕೆಂಬ ಬಯಕೆ ವಿಶ್ವದ ಯಾವುದೇ ದೇಶದ ಕ್ರಿಕೆಟಿಗನಿಗೂ ಇದ್ದೇ ಇರುತ್ತದೆ. ಇಲ್ಲಿ ಆಡಿದರೆ ಕೇವಲ ದುಡ್ಡು ಸಿಗುವುದು ಮಾತ್ರವಲ್ಲದೆ ವಿಶ್ವ ಕ್ರಿಕೆಟ್​ನಲ್ಲಿ ಉತ್ತಮ ಗುರುತನ್ನು ಪಡೆಯಲಿದ್ದಾರೆ ಎನ್ನುವುದು ಅತಿಶಯೋಕ್ತಿಯಲ್ಲ. ಈಗಾಗಲೇ ಡೇವಿಡ್​ ವಾರ್ನರ್​, ಮ್ಯಾಕ್ಸ್​ವೆಲ್, ಶಾನ್ ಮಾರ್ಶ್​ ಅಂತಹ ಆಟಗಾರರು ಐಪಿಎಲ್​ನಲ್ಲಿ ಆಡಿದ ಬಳಿಕ ಹೆಚ್ಚು ಪ್ರಸಿದ್ಧವಾಗಿದ್ದರು.

ಬಿಬಿಎಲ್​ನಲ್ಲಿ ಹೋಬರ್ಟ್​ ಹರಿಕೇನ್ಸ್ ಪರ ಆಡುವ ಮೆಕ್​ಡರ್ಮಟ್​ 11 ಪಂದ್ಯಗಳಲ್ಲಿ 48ರ ಸರಾಸರಿ ಮತ್ತು 153ರ ಸ್ಟ್ರೈಕ್​ರೇಟ್​ನಲ್ಲಿ 577 ರನ್​ಗಳಿಸಿದ್ದಾರೆ. ಇದೇ ಪ್ರದರ್ಶನ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ದದ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಅಯ್ಕೆ ಮಾಡುವಂತೆ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.