ನವದೆಹಲಿ: ಕೆಕೆಆರ್ ಮತ್ತು ಸಿಎಸ್ಕೆ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಬಯೋಬಬಲ್ನಲ್ಲಿದ್ದರೂ ಕೋವಿಡ್ 19 ಪಾಸಿಟಿವ್ ಬಂದಿರುವುದು ಐಪಿಎಲ್ಗೆ ಆಘಾತ ತಂದಿದೆ. ಆದರೂ ಲೀಗ್ ಯೋಜನೆಯಂತೆ ಮುಂದುವರಿಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಾಸಗಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಕೋಲ್ಕತ್ತಾ ನೈಟ್ರೈಡರ್ಸ್ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ಗೆ ಕೊರೊನಾ ದೃಢಪಟ್ಟಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಹಾಗೂ ಬಸ್ ಕ್ಲೀನರ್ ಒಬ್ಬನಿಗೆ ಪಾಸಿಟಿವ್ ದೃಢಪಟ್ಟಿದೆ.
-
Just spoke to a BCCI official , he says no other match has to be rescheduled as of now. Also said that if the players are being tested daily there is no need for isolation for the players who may have come in contact with a positive person. #IPL2021 #KKRvRCB #CovidIndia
— Meha Bhardwaj (@Bhardwajmeha) May 3, 2021 " class="align-text-top noRightClick twitterSection" data="
">Just spoke to a BCCI official , he says no other match has to be rescheduled as of now. Also said that if the players are being tested daily there is no need for isolation for the players who may have come in contact with a positive person. #IPL2021 #KKRvRCB #CovidIndia
— Meha Bhardwaj (@Bhardwajmeha) May 3, 2021Just spoke to a BCCI official , he says no other match has to be rescheduled as of now. Also said that if the players are being tested daily there is no need for isolation for the players who may have come in contact with a positive person. #IPL2021 #KKRvRCB #CovidIndia
— Meha Bhardwaj (@Bhardwajmeha) May 3, 2021
ವರುಣ್ ಚಕ್ರವರ್ತಿ ಸ್ಕ್ಯಾನ್ಗಾಗಿ ಬಯೋ ಬಬಲ್ನಿಂದ ಹೊರ ಹೋಗಿದ್ದಾಗ ವೈರಸ್ ತಗುಲಿರಬಹುದು ಎನ್ನಲಾಗುತ್ತಿದೆ, ಇನ್ನು ಡಿಡಿಸಿಎ ಸಿಬ್ಬಂದಿಗಳಿಂದ ಸಿಎಸ್ಕೆಗೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಅತ್ಯಂತ ಕಠಿಣ ಬಯೋಬಬಲ್ ಇದ್ದರೂ ಕೊರೊನಾ ವೈರಸ್ ತಗುಲಿರುವುದರಿಂದ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಸಿಸಿಐ ಆದಿಕಾರಿಯೊಬ್ಬರು ಲೀಗ್ ಯೋಜನೆಯಂತೆ ಮುಂದುವರಿಯಲಿದೆ ಮಾಹಿತಿ ನೀಡಿರುವುದಾಗಿ ಕ್ರೀಡಾ ನಿರೂಪಕಿ ಮೇಹಾ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.
ಈಗ ತಾನೆ ಬಿಸಿಸಿಐ ಅಧಿಕಾರಿಯೊಬ್ಬರ ಜೊತೆ ಮಾತನಾಡಿದ್ದೇನೆ, ಈ ಪಂದ್ಯದಂತೆ ಮುಂದಿನ ಯಾವುದೇ ಪಂದ್ಯವನ್ನು ಮುಂದೂಡುವುದಿಲ್ಲ. ಎಲ್ಲ ಆಟಗಾರರನ್ನು ಪ್ರತಿದಿನ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಪಾಸಿಟಿವ್ ಬಂದಿರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರೂ ಯಾರು ಐಸೊಲೇಷನ್ಗೆ ಒಳಗಾಗುವ ಅವಶ್ಯಕತೆಯಿಲ್ಲ" ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆಂದು ಮೇಹಾ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಆದರೆ ಐಪಿಎಲ್ ರದ್ದು ಮಾಡುವುದಾಗಿ ಅಥವಾ ಮುಂದುವರಿಸುವುದಾಗಿಯಾಗಲೂ ಇನ್ನು ಬಿಸಿಸಿಐ ತನ್ನ ನಿರ್ಧಾರವನ್ನು ಬಹಿರಂಗಪಡಿಸಿಲ್ಲ, ಆದರೆ, ಟ್ವಿಟರ್ನಲ್ಲಿ ಐಪಿಎಲ್ ರದ್ದುಗೊಳಿಸಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.