ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮಿನಿ ಹರಾಜು ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಆಟಗಾರರ ಹರಾಜು ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಟರ್ಕಿಯ ಇಸ್ತಾಂಬುಲ್, ಬೆಂಗಳೂರು, ನವದೆಹಲಿ, ಮುಂಬೈ ಮತ್ತು ಹೈದರಾಬಾದ್ ಕೂಡ ಹರಾಜು ಕಾರ್ಯಕ್ರಮ ಆಯೋಜಿಸಲು ಸ್ಪರ್ಧೆಯಲ್ಲಿದ್ದವು. ಆದರೆ, ಬಿಸಿಸಿಐ ಅಂತಿಮವಾಗಿ ಕೇರಳವನ್ನು ಆಯ್ಕೆ ಮಾಡಿದೆ.
-
IPL auction set to be held in Kochi on December 23: Reports
— ANI Digital (@ani_digital) November 9, 2022 " class="align-text-top noRightClick twitterSection" data="
Read @ANI Story | https://t.co/Ba8iea9cNs#IPL #IPL2023 #BCCI #IndianPremierLeague #IPLAuctions #t20cricket #cricket pic.twitter.com/we72GJL2BL
">IPL auction set to be held in Kochi on December 23: Reports
— ANI Digital (@ani_digital) November 9, 2022
Read @ANI Story | https://t.co/Ba8iea9cNs#IPL #IPL2023 #BCCI #IndianPremierLeague #IPLAuctions #t20cricket #cricket pic.twitter.com/we72GJL2BLIPL auction set to be held in Kochi on December 23: Reports
— ANI Digital (@ani_digital) November 9, 2022
Read @ANI Story | https://t.co/Ba8iea9cNs#IPL #IPL2023 #BCCI #IndianPremierLeague #IPLAuctions #t20cricket #cricket pic.twitter.com/we72GJL2BL
ತಾಂತ್ರಿಕವಾಗಿ ಮತ್ತು ದಿನಾಂಕಗಳನ್ನು ಪರಿಗಣಿಸಿ ಕೊಚ್ಚಿ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಹರಾಜಿಗಿಂತ ಈ ವರ್ಷದ ಮಿನಿ ಹರಾಜು ಭಿನ್ನವಾಗಿರಲಿದೆ. 10 ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸುವಂತೆ ಈಗಾಗಲೇ ಕೇಳಲಾಗಿದೆ.
ಅಲ್ಲದೇ ಈ ಸಾರಿ ಒಂದು ಬದಲಾವಣೆ ತರಲಾಗಿದೆ. ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಮೊತ್ತವನ್ನು ಹೊರತುಪಡಿಸಿ ಪ್ರತಿ ತಂಡಕ್ಕೆ ಹೆಚ್ಚುವರಿಯಾಗಿ 5 ಕೋಟಿ (ಅಂದಾಜು US $607,000) ಖರ್ಚು ನೀಡಲಾಗುತ್ತದೆ. ಈ ಮೂಲಕ ಪ್ರತಿ ಫ್ರಾಂಚೈಸಿಯ ಒಟ್ಟು ಬಜೆಟ್ ಅನ್ನು 90 ಕೋಟಿಯಿಂದ 95 ಕೋಟಿಗೆ ಏರಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್: ನ್ಯೂಜಿಲ್ಯಾಂಡ್ ಸವಾಲು ಗೆದ್ದು ಫೈನಲ್ ತಲುಪಿದ ಪಾಕಿಸ್ತಾನ