ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಡೆಯಲಿದ್ದು, ಒಟ್ಟು 590 ಕ್ರಿಕೆಟ್ ಪ್ಲೇಯರ್ಸ್ ಭವಿಷ್ಯ ನಿರ್ಧಾರವಾಗಲಿದೆ. ವಿವಿಧ ಫ್ರಾಂಚೈಸಿಗಳು ತಮ್ಮಿಷ್ಟದ ಪ್ಲೇಯರ್ಸ್ಗೆ ಮಣೆ ಹಾಕಿ ಖರೀದಿ ಮಾಡಲಿದೆ.
ಈ ಸಲದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 228 ಕ್ಯಾಪ್ಡ್, 355 ಅನ್ಕ್ಯಾಪ್ಡ್ ಪ್ಲೇಯರ್ಸ್ ಇದ್ದು, 10 ಫ್ರಾಂಚೈಸಿಗಳು ಗರಿಷ್ಠ 25 ಹಾಗೂ ಕನಿಷ್ಠ 18 ಪ್ಲೇಯರ್ಸ್ ಖರೀದಿ ಮಾಡಲಿವೆ.
ವಿದೇಶಿ ಆಟಗಾರರ ಜೊತೆ ಭಾರತೀಯ ಪ್ಲೇಯರ್ಸ್ ಕೂಡ ಪೈಪೋಟಿಯಲ್ಲಿದ್ದು, ಪ್ರಮುಖವಾಗಿ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಹಲ್ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ದಟ್ಟವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ನಾಯಕನ ಅಗತ್ಯವಿರುವ ಕಾರಣ ಶ್ರೇಯಸ್ ಅಯ್ಯರ್ಗೆ ಮಣೆ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿರಿ: IPL ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗ್ತಿಲ್ಲ ಪಂಜಾಬ್ ಒಡತಿ ಪ್ರೀತಿ ಜಿಂಟಾ.. ಕಾರಣ?
ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡ ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕಳೆದ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಕೂಡ ಈ ಸಲದ ಬಿಡ್ಡಿಂಗ್ನಲ್ಲಿ ಗಮನ ಸೆಳೆಯುವುದು ಬಹುತೇಕ ಖಚಿತವಾಗಿದೆ.
ಕಳೆದ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಯಜುವೇಂದ್ರ ಚಹಲ್ ಕೂಡ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆಯಲಿದ್ದು, ದೊಡ್ಡ ಮೊತ್ತಕ್ಕೆ ಬಿಕರಿಯಾಗಬಹುದು. ಇದರ ಜೊತೆಗೆ ವಿದೇಶಿ ಪ್ಲೇಯರ್ಸ್ಗಳಾದ ಕ್ವಿಂಟನ್ ಡಿಕಾಕ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಹೆಚ್ಚಿನ ಬಿಡ್ಗೆ ಸೇಲ್ ಆಗುವ ಸಾಧ್ಯತೆ ಇದೆ.