ಮುಂಬೈ (ಮಹರಾಷ್ಟ್ರ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಗೆ ಪಾಂಚೈಸಿಗಳು ತಯಾರಿ ನಡೆಸಲು ಆರಂಭಿಸಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕೋಚ್ ಮತ್ತು ನಿರ್ದೇಶಕರನ್ನು ಕೈಬಿಟ್ಟು ಹೊಸಬರಿಗೆ ಮಣೆಹಾಕಿದೆ. ಇದೀಗ ಮುಂಬೈ ಇಂಡಿಯನ್ಸ್ (ಎಂಐ) ಬೌಲಿಂಗ್ ಕೋಚ್ ಬದಲಾವಣೆ ಆಗಿದೆ. ನಾಲ್ಕು ಬಾರಿ ಚಾಂಪಿಯನ್ ಆಗಿದ್ದಾಗ ತಂಡಕ್ಕೆ ತರಬೇತಿ ನೀಡಿದ್ದ ಶೇನ್ ಬಾಂಡ್ ಅವರನ್ನು ಎರಡು ದಿನಗಳ ಕೆಳಗೆ ಎಂಐ ಕೈಬಿಟ್ಟಿತ್ತು. ಈಗ ಅವರ ಜಾಗಕ್ಕೆ ಮುಂಬೈ ಇಂಡಿಯನ್ಸ್ ಮಾಜಿ ಆಟಗಾರನನ್ನೇ ಕೋಚ್ ಆಗಿ ನೇಮಿಸಿದೆ.
ಶೇನ್ ಬಾಂಡ್ ಅವರು 9 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2015ರಿಂದ 2023ರ ವರೆಗೆ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಇವರ ಕೋಚಿಂಗ್ ಅಡಿಯಲ್ಲಿ ಮುಂಬೈ ಇಂಡಿಯನ್ಸ್ 2015, 2017, 2019 ಮತ್ತು 2020 ರಲ್ಲಿ ಚಾಂಪಿಯನ್ ಆಗಿತ್ತು. ಕಳೆದೆರಡು ವರ್ಷ ಎಂಐ ತಂಡದ ಪ್ರದರ್ಶನ ಕುಗ್ಗಿದೆ. ಅಲ್ಲದೇ ತಂಡದ ಪ್ರಮುಖ ಬೌಲರ್ಗಳು ಗಾಯದಿಂದ ಹೊರಗುಳಿದಿದ್ದು ಸಮಸ್ಯೆ ಆಗಿತ್ತು.
-
𝗔𝗔𝗟𝗔 𝗥𝗘 𝗔𝗔𝗟𝗔 𝕊𝕃𝕀ℕ𝔾𝔸 𝗔𝗔𝗟𝗔 🤩#OneFamily #MumbaiIndians #MumbaiMeriJaan @malinga_ninety9 pic.twitter.com/vtqOGiWXT4
— Mumbai Indians (@mipaltan) October 20, 2023 " class="align-text-top noRightClick twitterSection" data="
">𝗔𝗔𝗟𝗔 𝗥𝗘 𝗔𝗔𝗟𝗔 𝕊𝕃𝕀ℕ𝔾𝔸 𝗔𝗔𝗟𝗔 🤩#OneFamily #MumbaiIndians #MumbaiMeriJaan @malinga_ninety9 pic.twitter.com/vtqOGiWXT4
— Mumbai Indians (@mipaltan) October 20, 2023𝗔𝗔𝗟𝗔 𝗥𝗘 𝗔𝗔𝗟𝗔 𝕊𝕃𝕀ℕ𝔾𝔸 𝗔𝗔𝗟𝗔 🤩#OneFamily #MumbaiIndians #MumbaiMeriJaan @malinga_ninety9 pic.twitter.com/vtqOGiWXT4
— Mumbai Indians (@mipaltan) October 20, 2023
ಶೇನ್ ಬಾಂಡ್ ಅವರನ್ನು ಕೈಬಿಟ್ಟ ನಂತರ ಐಪಿಎಲ್ 2024ರ ಸೀಸನ್‌ಗೆ ಮುನ್ನ ಮುಂಬೈ ಇಂಡಿಯನ್ಸ್ ತನ್ನ ಹೊಸ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ವೇಗದ ಬೌಲಿಂಗ್ ದಂತಕಥೆ ಲಸಿತ್ ಮಾಲಿಂಗ ಅವರನ್ನು ಘೋಷಿಸಿದೆ. ಈ ಹಿಂದೆ 2022 ಮತ್ತು 2023ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಬೌಲಿಂಗ್ ಕೋಚ್ ಆಗಿ ಮಾಲಿಂಗ ಕಾರ್ಯ ನಿರ್ವಹಿಸಿದ್ದಾರೆ. 2024ರ ಆವೃತ್ತಿಗೆ ಮಾರ್ಕ್ ಬೌಚರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೇರುತ್ತಾರೆ. ಎಂಐನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಇದ್ದಾರೆ.
ಲಸಿತ್ ಮಾಲಿಂಗ ಈ ವರ್ಷದ ಆರಂಭದಲ್ಲಿ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ಗೆ ಬೌಲಿಂಗ್ ಕೋಚ್ ಆಗಿದ್ದರು. ಅಲ್ಲಿ ಎಂಐ ತಂಡ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೇ 2024ರ SA-20 ಯಲ್ಲಿ ಕೇಪ್ಟೌನ್ ತಂಡಕ್ಕೂ ಕೋಚಿಂಗ್ ಮಾಡಲಿದ್ದಾರೆ.
-
𝗕𝗔𝗧𝗧𝗜𝗡𝗚 𝗖𝗢𝗔𝗖𝗛 - 🄿🄾🄻🄻🄰🅁🄳
— Mumbai Indians (@mipaltan) October 20, 2023 " class="align-text-top noRightClick twitterSection" data="
𝗕𝗢𝗪𝗟𝗜𝗡𝗚 𝗖𝗢𝗔𝗖𝗛 - 🄼🄰🄻🄸🄽🄶🄰
Paltan, आता कसं वाटतय? 🤩#OneFamily #MumbaiIndians #MumbaiMeriJaan @malinga_ninety9 @KieronPollard55 pic.twitter.com/bdPWVrfuDy
">𝗕𝗔𝗧𝗧𝗜𝗡𝗚 𝗖𝗢𝗔𝗖𝗛 - 🄿🄾🄻🄻🄰🅁🄳
— Mumbai Indians (@mipaltan) October 20, 2023
𝗕𝗢𝗪𝗟𝗜𝗡𝗚 𝗖𝗢𝗔𝗖𝗛 - 🄼🄰🄻🄸🄽🄶🄰
Paltan, आता कसं वाटतय? 🤩#OneFamily #MumbaiIndians #MumbaiMeriJaan @malinga_ninety9 @KieronPollard55 pic.twitter.com/bdPWVrfuDy𝗕𝗔𝗧𝗧𝗜𝗡𝗚 𝗖𝗢𝗔𝗖𝗛 - 🄿🄾🄻🄻🄰🅁🄳
— Mumbai Indians (@mipaltan) October 20, 2023
𝗕𝗢𝗪𝗟𝗜𝗡𝗚 𝗖𝗢𝗔𝗖𝗛 - 🄼🄰🄻🄸🄽🄶🄰
Paltan, आता कसं वाटतय? 🤩#OneFamily #MumbaiIndians #MumbaiMeriJaan @malinga_ninety9 @KieronPollard55 pic.twitter.com/bdPWVrfuDy
"ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ನನಗೆ ನಿಜಕ್ಕೂ ಸಂತೋಷವಾಗಿದೆ. ಎಂಐ ನ್ಯೂಯಾರ್ಕ್ ಮತ್ತು ಎಂಐ ಕೇಪ್ ಟೌನ್ ನಂತರ ಮುಂಬೈ ಇಂಡಿಯನ್ಸ್ನಲ್ಲಿ ನನ್ನ ಪ್ರಯಾಣ ಮುಂದುವರಿಯುತ್ತಿದೆ. ನಾನು ಮಾರ್ಕ್ ಬೌಚರ್, ಕೀರನ್ ಪೊಲಾರ್ಡ್, ರೋಹಿತ್ ಮತ್ತು ತಂಡದ ಇತರರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಮುಂಬೈ ತಂಡದಲ್ಲಿ ಯುವ ಬೌಲರ್ಗಳು ಕಳೆದ ಆವೃತ್ತಿಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ" ಎಂದು ಮಾಲಿಂಗ ಹೇಳಿದ್ದಾರೆ.
ಐಪಿಎಲ್ ಆಟಗಾರನಾಗಿ ಮಾಲಿಂಗ 2013, 2015, 2017 ಮತ್ತು 2019ರ ಚಾಂಪಿಯನ್ ತಂಡದ ಭಾಗವಾಗಿದ್ದರು. ಒಟ್ಟಾರೆ, ಮಾಲಿಂಗ ಮುಂಬೈಗಾಗಿ 139 ಪಂದ್ಯಗಳನ್ನು ಆಡಿದ್ದು 7.12ರ ಎಕಾನಮಿಯಲ್ಲಿ 195 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಜತೆಗಿನ 9 ವರ್ಷದ 'ಬಾಂಡ್' ಅಂತ್ಯ: ಹೊಸ ಕೋಚ್ ಯಾರು ಗೊತ್ತೇ?