ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆದ್ದಿರುವ ಆರ್‌ಸಿಬಿ ಈ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ. ಕೆಕೆಆರ್ ತಂಡದಲ್ಲಿ 19 ವರ್ಷದ ಸುಯಶ್ ಶರ್ಮಾ ಪಾದಾರ್ಪಣೆ ಮಾಡಿದ್ದಾರೆ.
-
What are they talking about❓🤔@y_umesh @imShard @imVkohli #AmiKKR #KKR #TATAIPL2023 pic.twitter.com/idj7UVORhM
— KolkataKnightRiders (@KKRiders) April 5, 2023 " class="align-text-top noRightClick twitterSection" data="
">What are they talking about❓🤔@y_umesh @imShard @imVkohli #AmiKKR #KKR #TATAIPL2023 pic.twitter.com/idj7UVORhM
— KolkataKnightRiders (@KKRiders) April 5, 2023What are they talking about❓🤔@y_umesh @imShard @imVkohli #AmiKKR #KKR #TATAIPL2023 pic.twitter.com/idj7UVORhM
— KolkataKnightRiders (@KKRiders) April 5, 2023
ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ ಟೂರ್ನಿಯ 9ನೇ ಪಂದ್ಯ ನಡೆಯುತ್ತಿದೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಗೆದ್ದ ಹುಮ್ಮಸ್ಸಿನಲ್ಲಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕೆಕೆಆರ್ ಗೆಲ್ಲಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪಂದ್ಯ ಉಭಯ ತಂಡಗಳ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರು ತಂಡಕ್ಕೆ ಬ್ಯಾಟರ್‌ಗಳು ಬಲವಾಗಿದ್ದರೆ, ಕೋಲ್ಕತ್ತಾಗೆ ಬೌಲರ್ಗಳು ಭರವಸೆಯ ಪಟುಗಳಾಗಿದ್ದಾರೆ.
ಆರ್‌ಸಿಬಿ ಮತ್ತು ಕೆಕೆಆರ್ ಇದುವರೆಗೆ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ಸಮಬಲ ಪ್ರದರ್ಶನವನ್ನೇ ನೀಡಿವೆ. ಕೆಕೆಆರ್ 16 ಬಾರಿ ಗೆಲುವು ಕಂಡಿದ್ದರೆ, ಬೆಂಗಳೂರು 14 ಬಾರಿ ಗೆಲುವು ಸಾಧಿಸಿದೆ. ಆದ್ದರಿಂದ ಇದು ಇತ್ತಂಡಗಳ ನಡುವಿನ ಹೈವೊಲ್ಟೇಜ್ ಪಂದ್ಯವಾಗಿದೆ.
-
𝗧𝗵𝗲 𝗙𝗶𝗿𝘀𝘁 𝗼𝗳 𝗔𝗹𝗹 𝗥𝗶𝘃𝗮𝗹𝗿𝗶𝗲𝘀 ☝️ #KKRvRCB #AmiKKR #TATAIPL2023 pic.twitter.com/0cr3vuuY93
— KolkataKnightRiders (@KKRiders) April 6, 2023 " class="align-text-top noRightClick twitterSection" data="
">𝗧𝗵𝗲 𝗙𝗶𝗿𝘀𝘁 𝗼𝗳 𝗔𝗹𝗹 𝗥𝗶𝘃𝗮𝗹𝗿𝗶𝗲𝘀 ☝️ #KKRvRCB #AmiKKR #TATAIPL2023 pic.twitter.com/0cr3vuuY93
— KolkataKnightRiders (@KKRiders) April 6, 2023𝗧𝗵𝗲 𝗙𝗶𝗿𝘀𝘁 𝗼𝗳 𝗔𝗹𝗹 𝗥𝗶𝘃𝗮𝗹𝗿𝗶𝗲𝘀 ☝️ #KKRvRCB #AmiKKR #TATAIPL2023 pic.twitter.com/0cr3vuuY93
— KolkataKnightRiders (@KKRiders) April 6, 2023
ಮಳೆ ಕಾರಣ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಏಳು ರನ್‌ಗಳಿಂದ ಕೆಕೆಆರ್ ಸೋಲು ಅನುಭವಿಸಿತ್ತು. ಹಾಲಿ ಟೂರ್ನಿಯಲ್ಲಿ ಕೋಲ್ಕತ್ತಾ ತನ್ನ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿದೆ. ಆರ್‌ಸಿಬಿ ತವರು ನೆಲದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ನಂತರ ಹೊರಗೆ ಮೊದಲ ಪಂದ್ಯ ಆಡುತ್ತಿದೆ.
ಆರ್‌ಸಿಬಿ ತಂಡದಲ್ಲಿ ಬದಲಾವಣೆ: ಟಾಸ್ ಗೆದ್ದ ನಂತರ ಆರ್‌ಸಿಬಿ ನಾಯಕ ಡು ಪ್ಲೆಸಿಸ್ ಮಾತನಾಡಿ, ರೀಸ್ ಟೋಪ್ಲೆ ಬದಲಿಗೆ ಆಲ್‌ರೌಂಡರ್ ಡೇವಿಡ್ ವಿಲ್ಲಿ ತಂಡ ಸೇರಿದ್ದಾರೆ. ಎಡಗೈ ಆಟಗಾರ ಟೋಪ್ಲೆ ಅವರಿಗೆ ಫೀಲ್ಡಿಂಗ್ ಮಾಡುವಾಗ ಬಲ ಭುಜಕ್ಕೆ ಪೆಟ್ಟಾಗಿದೆ ಎಂದು ತಿಳಿಸಿದರು.
ಪಿಚ್ ಬಗ್ಗೆ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್, "ಕಳೆದ ರಾತ್ರಿ ಇಬ್ಬನಿ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದು ಸ್ಕಿಡ್ ಆಗುವ ನಿರೀಕ್ಷೆಯಿದೆ. ಪ್ಲೇಆಫ್‌ಗಳನ್ನು ತಲುಪುವುದು ಇನ್ನೂ ಬಹಳ ದೂರವಿದೆ. ಇಂದು ಸಂಪೂರ್ಣವಾಗಿ ಹೊಸ ಆಟ. ಜೊತೆಗೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ" ಎಂದರು.
-
Huddle up, Match ✌️ tonight!
— Royal Challengers Bangalore (@RCBTweets) April 6, 2023 " class="align-text-top noRightClick twitterSection" data="
Are you excited for our first away game, 12th Man Army? 🙌#PlayBold #ನಮ್ಮRCB #IPL2023 pic.twitter.com/P0ZTdOVwSi
">Huddle up, Match ✌️ tonight!
— Royal Challengers Bangalore (@RCBTweets) April 6, 2023
Are you excited for our first away game, 12th Man Army? 🙌#PlayBold #ನಮ್ಮRCB #IPL2023 pic.twitter.com/P0ZTdOVwSiHuddle up, Match ✌️ tonight!
— Royal Challengers Bangalore (@RCBTweets) April 6, 2023
Are you excited for our first away game, 12th Man Army? 🙌#PlayBold #ನಮ್ಮRCB #IPL2023 pic.twitter.com/P0ZTdOVwSi
ಕೋಲ್ಕತ್ತಾ ತಂಡದ ನಿತೀಶ್ ರಾಣಾ ಮಾತನಾಡಿ, "ತಂಡದ ಪರವಾಗಿ ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ತಮ್ಮ ಚೊಚ್ಚಲ ಪಂದ್ಯ ಆಡಲಿದ್ದಾರೆ. ಅವರನ್ನು ಬದಲಿ ಆಟಗಾರರಲ್ಲಿ ಇರಿಸಲಾಗುತ್ತದೆ. ಇಬ್ಬನಿ ಅಂಶದಿಂದಾಗಿ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.
ತಂಡಗಳ ಮಾಹಿತಿ - ಕೋಲ್ಕತ್ತಾ : ನಿತೀಶ್ ರಾಣಾ (ನಾಯಕ), ಮನ್ದೀಪ್ ಸಿಂಗ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್ ಮತ್ತು ವರುಣ್ ಚಕ್ರವರ್ತಿ
ಕೆಕೆಆರ್ ಬದಲಿ ಆಟಗಾರರು: ಸುಯಶ್ ಶರ್ಮಾ, ಅನುಕೂಲ್ ರಾಯ್, ವೈಭವ್ ಅರೋರಾ, ನಾರಾಯಣ್ ಜಗದೀಸನ್, ಡೇವಿಡ್ ವೈಸ್
ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್
ಬೆಂಗಳೂರು ಬದಲಿ ಆಟಗಾರರು: ಫಿನ್ ಅಲೆನ್, ಸೋನು ಯಾದವ್, ಮಹಿಪಾಲ್ ಲೊಮ್ರೋರ್, ಸುಯಶ್ ಎಸ್ ಪ್ರಭುದೇಸಾಯಿ, ಅನುಜ್ ರಾವತ್
ಇದನ್ನೂ ಓದಿ: IPL 2023: ಕೆಕೆಆರ್ - ಆರ್‌ಸಿಬಿ ನಡುವಿನ ಹೈವೊಲ್ಟೇಜ್ ಕದನ: ಪಂದ್ಯದ ಗತಿ ಬದಲಿಸಬಲ್ಲ ಟಾಪ್ 5 ಆಟಗಾರರಿವರು!