ETV Bharat / sports

ಸದ್ದಿಲ್ಲದೇ ಸುದ್ದಿಯಲ್ಲಿದ್ದಾರೆ ಜಿತೇಶ್​ ಶರ್ಮಾ: ಪಂಜಾಬ್‌ಗೆ ಬಲ ತಂದುಕೊಟ್ಟ ವಿದರ್ಭ ಸ್ಟಾರ್

2022ನೇ ಆವೃತ್ತಿಯಲ್ಲೂ ಐಪಿಎಲ್​ ಕೆಲವು ಪ್ರತಿಭಾನ್ವಿತ ಕ್ರಿಕೆಟಿಗರ ಅನ್ವೇಷಣೆಗೆ ಸಾಕ್ಷಿಯಾಗಿದೆ. ಗುಜರಾತ್ ಲಯನ್ಸ್​ನಲ್ಲಿ ದರ್ಶನ್ ನಲ್ಕಂಡೆ, ಲಖನೌ ಸೂಪರ್ ಜೈಂಟ್ಸ್​​ನಲ್ಲಿ ಆಯುಷ್​ ಬದೋನಿ, ಮುಂಬೈ ಇಂಡಿಯನ್ಸ್​ನ ತಿಲಕ್​ ವರ್ಮಾ, ಸನ್​ರೈಸರ್ಸ್ ಹೈದರಾಬಾದ್​ನ ಉಮ್ರಾನ್ ಮಲಿಕ್​.. ಹೀಗೆ ಹಲವಾರು ಕ್ರಿಕೆಟಿಗರು ಈ ವರ್ಷ ಕ್ರಿಕೆಟ್​ ವಲಯದಲ್ಲಿ ಚರ್ಚೆಯಲ್ಲಿರುವ ಪ್ರತಿಭಾನ್ವಿತರು.

Jitesh Sharma
ಜಿತೇಶ್ ಶರ್ಮಾ
author img

By

Published : Apr 14, 2022, 3:23 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿಭೆಗಳನ್ನು ಕ್ರಿಕೆಟ್​ ಜಗತ್ತಿಗೆ ತೋರಿಸುವ ವಿಶ್ವದ ಬೃಹತ್​ ವೇದಿಕೆ. ಈಗಾಗಲೆ 15 ಆವೃತ್ತಿಗಳಲ್ಲಿ ನೂರಾರು ಪ್ರತಿಭಾನ್ವಿತ ಕ್ರಿಕೆಟಿಗರನ್ನು ಪರಿಚಯಿಸಿರುವ ಶ್ರೀಮಂತ ಕ್ರಿಕೆಟ್ ಲೀಗ್ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವನ್ನು ವೃದ್ಧಿಸಿಕೊಂಡು ಹೋಗುತ್ತಿದೆ.

2022ನೇ ಆವೃತ್ತಿಯಲ್ಲೂ ಐಪಿಎಲ್​ ಕೆಲವು ಪ್ರತಿಭಾನ್ವಿತ ಕ್ರಿಕೆಟಿಗರ ಅನ್ವೇಷಣೆಗೆ ಸಾಕ್ಷಿಯಾಗಿದೆ. ಗುಜರಾತ್ ಲಯನ್ಸ್​ನಲ್ಲಿ ದರ್ಶನ್ ನಲ್ಕಂಡೆ, ಲಖನೌ ಸೂಪರ್ ಜೈಂಟ್ಸ್​​ನಲ್ಲಿ ಆಯುಷ್​ ಬದೋನಿ, ಮುಂಬೈ ಇಂಡಿಯನ್ಸ್​ನ ತಿಲಕ್​ ವರ್ಮಾ, ಸನ್​ರೈಸರ್ಸ್ ಹೈದರಾಬಾದ್​ನ ಉಮ್ರಾನ್ ಮಲಿಕ್​.. ಹೀಗೆ ಹಲವಾರು ಕ್ರಿಕೆಟಿಗರು ಈ ವರ್ಷ ಕ್ರಿಕೆಟ್​ ವಲಯದಲ್ಲಿ ಚರ್ಚೆಯಲ್ಲಿರುವ ಪ್ರತಿಭಾನ್ವಿತರು.

ಈ ಪಟ್ಟಿಗೆ ಹೊಸದಾಗಿ ಪಂಜಾಬ್​ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಜಿತೇಶ್ ಶರ್ಮಾ ಸೇರ್ಪಡೆಯಾಗಿದ್ದಾರೆ. ಅವರಿಗೆ ದೊಡ್ಡ ಇನ್ನಿಂಗ್ಸ್ ಆಡುವ ಅವಕಾಶ ಇನ್ನೂ ಸಿಕ್ಕಿಲ್ಲವಾದ್ದರಿಂದ ಬೇಗ ಪರಿಚಿತರಾಗಿಲ್ಲ. ಆದರೆ ಸಿಕ್ಕ ಅತ್ಯಲ್ಪ ಎಸೆತಗಳಲ್ಲಿ 200ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ ತಂಡದ ಮಧ್ಯಮ ಕ್ರಮಾಂಕದ ಬಲ ಮತ್ತು ತಂಡ ಮೊತ್ತವನ್ನು ಸಾಧ್ಯವಾದಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಪಂಜಾಬ್​ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶಿಖರ್ ಧವನ್ 70 ಮತ್ತು ಮಯಾಂಕ್​ 52 ರನ್​ಗಳಿಸಿದ್ದು ಹೆಚ್ಚು ಸುದ್ದಿಯಾಗಿದೆ. ಆದರೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಜಿತೇಶ್ ಶರ್ಮಾ ಕೇವಲ 15 ಎಸೆತಗಳಲ್ಲಿ 30 ರನ್​ ಸಿಡಿಸಿದ್ದರು. ಅವರ ಈ ಕೊಡುಗೆ ಪಂಜಾಬ್​ ಗೆಲುವಿನಲ್ಲಿ ಪ್ರಮುಖವಾಗಿತ್ತು.ಈ ಪಂದ್ಯದಲ್ಲಿ ಅಷ್ಟೇ ಅಲ್ಲದೆ ಐಪಿಎಲ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ 17 ಎಸೆತಗಳಲ್ಲಿ 26, ಗುಜರಾತ್ ಲಯನ್ಸ್ ವಿರುದ್ಧ 11 ಎಸೆತಗಳಲ್ಲಿ 23 ರನ್​ಗಳಿಸಿದ್ದರು.

ಜಿತೇಶ್ ಶರ್ಮಾ ಯಾರು? ಜಿತೇಶ್​ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ವಿದರ್ಭ ಡೊಮೆಸ್ಟಿಕ್​ ತಂಡದಲ್ಲಿ ಆಡುತ್ತಿದ್ದಾರೆ. 28 ವರ್ಷದ ಜಿತೇಶ್ 2014ರ ಫೆಬ್ರವರಿಯಲ್ಲಿ ಲಿಸ್ಟ್​ ಎ ಕ್ರಿಕೆಟ್​ಗೆ, ಮಾರ್ಚ್​ನಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. 2015ರಲ್ಲಿ ಒಡಿಶಾ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಬಲಗೈ ಬ್ಯಾಟರ್​ ಆಗಿರುವ ಇವರನ್ನು 2016ರಲ್ಲಿ ಮುಂಬೈ ಇಂಡಿಯನ್ಸ್​ ಖರೀದಿಸಿತ್ತಾದರೂ ಒಂದೂ ಪಂದ್ಯದಲ್ಲೂ ಆಡುವ ಅವಕಾಶ ನೀಡಲಿಲ್ಲ. 2022ರ ಮೆಗಾ ಹರಾಜಿನಲ್ಲಿ ಅವರನ್ನು ಪಂಜಾಬ್ ಕಿಂಗ್ಸ್​ ₹20 ಲಕ್ಷಕ್ಕೆ ಖರೀದಿಸಿದ್ದು, ಕಳೆದ ಮೂರು ಪಂದ್ಯಗಳಲ್ಲೂ ಅವಕಾಶ ನೀಡಿದೆ. ಈಗಾಗಲೇ ಸಿಕ್ಕಿರುವ ಅವಕಾಶಗಳಲ್ಲಿ ದೊಡ್ಡ ಹೊಡೆತಗಳನ್ನು ಸಿಡಿಸಿ ಮಿಂಚಿರುವ ಅವರಿಗೆ ಮತ್ತೊಂದಷ್ಟು ಅವಕಾಶ ಸಿಗುವ ಅವಕಾಶವಿದ್ದು, ಐಪಿಎಲ್​ನಲ್ಲಿ ಈ ಬಾರಿ ಹೊರಬಂದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರಾಗಲಿದ್ದಾರೆ.

ಇದನ್ನೂ ಓದಿ: ಮಯಾಂಕ್​ ಮುಂದೆ ಮಂಕಾದ ಮುಂಬೈ​.. ‘ಶಿಖರ’ದೆತ್ತರ ಗುರಿ ಮುಟ್ಟದೇ ಸತತ 5ನೇ ಸೋಲು ಕಂಡ ರೋಹಿತ್​ ಬಳಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.