ETV Bharat / sports

ಲಖನೌ ವಿರುದ್ಧ ಗೋಲ್ಡನ್​ ಡಕ್ ಆದ ಕೊಹ್ಲಿ: ಐಪಿಎಲ್​ನಲ್ಲಿ ಎಷ್ಟನೇ ಬಾರಿ ಗೊತ್ತಾ?

ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಆರ್​ಸಿಬಿ ಮೊದಲ ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡಿತು. ಅನುಜ್ ರಾವತ್​ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಕೊಹ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು.

Virat Kohli 4th golden duck in IPL Matches
ವಿರಾಟ್ ಕೊಹ್ಲಿ ಡಕ್​ಔಟ್​
author img

By

Published : Apr 19, 2022, 8:09 PM IST

ಮುಂಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಿದ ಮೊದಲ ಎಸೆತದಲ್ಲಿಯೇ ಗೋಲ್ಡನ್​ ಡಕ್​ ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಆರ್​ಸಿಬಿ ಮೊದಲ ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡಿತು. ಅನುಜ್ ರಾವತ್​ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಕೊಹ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೆ ಔಟಾದರು.

ಔಟ್​ ಸೈಡ್​ ಆಫ್​ ಸ್ಟಂಪ್​ನಲ್ಲಿ ಹೊರ ಹೋಗುತ್ತಿದ್ದ ಎಸೆತವನ್ನು ಬ್ಯಾಕ್​ವಾರ್ಡ್ ಪಾಯಿಂಟ್​​ ಮೇಲೆ ಹೊಡೆಯಲು ಯತ್ನಿಸಿ ದೀಪಕ್ ಹೂಡ ಕೈಗೆ ಕ್ಯಾಚಿತ್ತರು. ಇದು ಐಪಿಎಲ್ ಇತಿಹಾಸದಲ್ಲಿ ಅವರ 4ನೇ ಗೋಲ್ಡನ್​ ಡಕ್​ಔಟ್​ ಆಗಿದೆ.

2008ರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆಶಿಶ್​ ನೆಹ್ರಾ ಬೌಲಿಂಗ್​ನಲ್ಲಿ ಮೊದಲ ಬಾರಿಗೆ ಗೋಲ್ಡನ್​ ಡಕ್ ಆಗಿದ್ದರು. ನಂತರ 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಂದೀಪ್​ ಶರ್ಮಾ ಬೌಲಿಂಗ್​ನಲ್ಲಿ, 2017ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ನೇಥನ್ ಕೌಲ್ಟರ್ ನೈಲ್ ಬೌಲಿಂಗ್​​ನಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಔಟ್​ ಆಗಿದ್ದರು.

ಇದನ್ನೂ ಓದಿ:ದಿನೇಶ್ ಕಾರ್ತಿಕ್​ ನನಗೆ ಮತ್ತೆ ಕ್ರಿಕೆಟ್​ ಆಡಬೇಕೆಂಬ ಭಾವನೆ ಮೂಡಿಸುತ್ತಿದ್ದಾರೆ: ಎಬಿ ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.