ETV Bharat / sports

ಸೂರ್ಯಕುಮಾರ್ ಅರ್ಧಶತಕ: ಕೆಕೆಆರ್​​ಗೆ 162 ರನ್​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್

author img

By

Published : Apr 6, 2022, 9:35 PM IST

ಸೂರ್ಯಕುಮಾರ್ ಅರ್ಧಶತಕದ ನೆರವಿನಿಂದ ಮುಂಬೈ 161ರನ್​ಗಳಿಸಿದೆ. ಕೆಕೆಆರ್​ ಪರ ಪ್ಯಾಟ್​ ಕಮಿನ್ಸ್ 49ಕ್ಕೆ2 ವಿಕೆಟ್ಉ ಮೇಶ್ ಯಾದವ್​ 25ಕ್ಕೆ1, ವರುಣ್ ಚಕ್ರವರ್ತಿ 32ಕ್ಕೆ 1 ವಿಕೆಟ್ ಪಡೆದರು.

Mumbai Indians vs Kolkata knight Riders
Mumbai Indians vs Kolkata knight Riders

ಪುಣೆ: ಸೂರ್ಯಕುಮಾರ್ ಯಾದವ್​ ಅರ್ಧಶತಕ ಮತ್ತು ಯುವ ಆಟಗಾರರಾದ ಡೆವಾಲ್ಡ್ ಬ್ರೇವಿಸ್​ ಹಾಗೂ ತಿಲಕ್ ವರ್ಮಾ ಅವರ ಉಪಯುಕ್ತ ರನ್​ಗಳ ನೆರವಿನಿಂದ ಮುಂಬೈ ಇಂಡಿಯನ್ಸ್​ ಎದುರಾಳಿ ಕೋಲ್ಕತ್ತಾ ತಂಡಕ್ಕೆ 162 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಟಾಸ್​ ಬ್ಯಾಟಿಂಗ್ ಆರಂಭಿಸಿತು. ಆದರೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ(3) ಮತ್ತು ಇಶಾನ್ ಕಿಶನ್(14) ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರಿಂದ ಮುಂಬೈಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ.

ಅಲ್ಲದೆ ಉಮೇಶ್ ಯಾದವ್​, ರಸಿಖ್ ಸಲಾಮ್​ ನರೈನ್​ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಯಿಂದ ಮುಂಬೈ ರನ್​ಗತಿಗೆ ಕಡಿವಾಣ ಹಾಕಿದರು. ಆದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪದಾರ್ಪಣೆ ಬ್ಯಾಟರ್ ಬೇಬಿ ಎಬಿಡಿ ಖ್ಯಾತಿಯ ಬ್ರೇವಿಸ್​ 19 ಎಸೆತಗಳಲ್ಲಿ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಸಹಿತ 29 ರನ್​ ​ಗಳಿಸಿದರು. ಆದರೆ ಇವರ ಜೊತೆಗೆ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 21 ಎಸೆತಗಳಲ್ಲಿ ಕೇವಲ 1 ಬೌಂಡರಿ ಸಹಿತ 14 ರನ್​ಗಳಿಸಿ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು.

55ಕ್ಕೆ 3 ವಿಕೆಟ್ ಕಳೇದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ತಂಡಕ್ಕೆ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಅವರು ಯುವ ಬ್ಯಾಟರ್​ ತಿಲಕ್ ವರ್ಮಾ ಜೊತೆಗೂಡಿ 4ನೇ ವಿಕೆಟ್​ಗೆ 83 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ಸೂರ್ಯ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 52 ರನ್​ಗಳಿಸಿದರೆ, ತಿಲಕ್ ವರ್ಮಾ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 38 ರನ್​ಗಳಿಸಿದರು. ಕೊನೆಯಲ್ಲಿ 5 ಎಸೆತಗಳನ್ನು ಎದುರಿಸಿದ ಪೊಲಾರ್ಡ್​ 3 ಸಿಕ್ಸರ್​ ಸೇರಿದಂತೆ ಅಜೇಯ 22 ರನ್​ಗಳಿಸಿ ತಂಡದ ಮೊತ್ತವನ್ನು 160ರ ಗಡಿಸ ದಾಟಿಸಿದರು.

ಕೆಕೆಆರ್​ ಪರ ಪ್ಯಾಟ್​ ಕಮಿನ್ಸ್ 2 ವಿಕೆಟ್ ಪಡೆದರೂ 49 ರನ್​ ಬಿಟ್ಟುಕೊಟ್ಟರು. ಇನ್ನು ತಮ್ಮ ಅದ್ಭುತ ಫಾರ್ಮ್​ ಮುಂದುವರಿಸಿದ ಉಮೇಶ್ ಯಾದವ್​ 25ಕ್ಕೆ1, ವರುಣ್ ಚಕ್ರವರ್ತಿ 32ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ಐಪಿಎಲ್​ನಿಂದ ಹೊರಬಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ವೇಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.