ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 163 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಶುಬ್ಮನ್ ಗಿಲ್(7), ಸಾಯಿ ಸುದರ್ಶನ್(11) ವಿಕೆಟ್ ಬೇಗ ಕಳೆದುಕೊಂಡಿತು. ಮ್ಯಾಥ್ಯೂ ವೇಡ್ ಕೂಡ 19 ರನ್ಗಳಿಸಿ 8 ಓವರ್ಗಳ ಒಳಗೆ ವಿಕೆಟ್ ಒಪ್ಪಿಸಿದರು.
-
Innings Break!
— IndianPremierLeague (@IPL) April 11, 2022 " class="align-text-top noRightClick twitterSection" data="
50* from the Skipper propels @gujarat_titans to a total of 162/7 on the board.
Scorecard - https://t.co/phXicAbLCE #SRHvGT #TATAIPL pic.twitter.com/YEc9CTCgOH
">Innings Break!
— IndianPremierLeague (@IPL) April 11, 2022
50* from the Skipper propels @gujarat_titans to a total of 162/7 on the board.
Scorecard - https://t.co/phXicAbLCE #SRHvGT #TATAIPL pic.twitter.com/YEc9CTCgOHInnings Break!
— IndianPremierLeague (@IPL) April 11, 2022
50* from the Skipper propels @gujarat_titans to a total of 162/7 on the board.
Scorecard - https://t.co/phXicAbLCE #SRHvGT #TATAIPL pic.twitter.com/YEc9CTCgOH
ನಂತರ ಬಂದಂತಹ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲೇ ಸಮಯ ಕಳೆದರೇ ವಿನಃ ರನ್ಗಳಿಸುವಲ್ಲಿ ವಿಫಲರಾದರು. ಅವರು 15 ಎಸೆತಗಳಲ್ಲಿ ಕೇವಲ 12 ರನ್ಗಳಿಸಿದರು. ಈ ಹಂತದಲ್ಲಿ ನಾಯಕ ಹಾರ್ದಿಕ್ ಜೊತೆಗೂಡಿದ ಕರ್ನಾಟಕದ ಬ್ಯಾಟರ್ ಅಭಿನವ್ ಮನೋಹರ್ 5ನೇ ವಿಕೆಟ್ಗೆ 50 ರನ್ ಸೇರಿಸಿದರು. ಅವರು 21 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 35 ರನ್ಗಳಿಸಿದರು. ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 50 ರನ್ಗಳಿಸಿದರು.
ಸನ್ರೈಸರ್ಸ್ ಹೈದರಾಬಾದ್ ಪರ ಟಿ. ನಟರಾಜನ್ 34ಕ್ಕೆ2, ಭುವನೇಶ್ವರ್ ಕುಮಾರ್ 37ಕ್ಕೆ 2 ಹಾಗೂ ಉಮರ್ ಮಲಿಕ್ ಮತ್ತು ಮಾರ್ಕೊ ಜಾನ್ಸನ್ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಅಪ್ಡೇಟ್: ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡದ ಜೊತೆಗೆ ಆಡುತ್ತಿವೆ. ಸನ್ರೈಸರ್ಸ್ ಹೈದರಾಬಾದ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೋಲು ಕಂಡಿತ್ತು. ಆದರೆ ಸಿಎಸ್ಕೆ ವಿರುದ್ಧ ಕೊನೆಗೂ ಚೇಸ್ ಮಾಡುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಇತ್ತ ಟೈಟನ್ಸ್ ಆಡಿರುವ ಮೂರು ಪಂದ್ಯಗಳಲ್ಲೂ ಅದ್ಭುತ ಜಯ ಸಾಧಿಸಿದೆ. ಉತ್ತಮ ಆರಂಭ ಪಡೆಯಲು ವಿಫಲರಾದರೂ, ಗಿಲ್ ಕಳೆದ 2 ಪಂದ್ಯಗಳಲ್ಲಿ 84 ಮತ್ತು 96 ರನ್ ಸಿಡಿಸಿ ತಂಡದ ಬಹುಪಾಲು ರನ್ಗಳನ್ನು ತಾವೇ ಸಿಡಿಸಿದ್ದಾರೆ. ನಾಯಕ ಹಾರ್ದಿಕ್, ರಾಹುಲ್ ತೆವಾಟಿಯಾ ಉತ್ತಮ ಫಾರ್ಮ್ನಲ್ಲಿದ್ದಾರೆ. ಒಟ್ಟಾರೆ ತಂಡವಾಗಿ ಉತ್ತಮ ಸಂಯೋಜನೆ ಹೊಂದಿರುವ ಗುಜರಾತ್ ತನ್ನ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.
ಸನ್ರೈಸರ್ಸ್ ಹೈದರಾಬಾದ್ : ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ಉಮ್ರಾನ್ ಮಲಿಕ್
ಗುಜರಾತ್ ಟೈಟನ್ಸ್: ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ