ETV Bharat / sports

IPL 2022: ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್​ ನೇಮಕ - ಐಪಿಎಲ್ ಮೆಗಾ ಹರಾಜು

ಫೆಬ್ರವರಿ 12 ಮತ್ತು 13ರಂದು ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಕೆಆರ್​ 12.5 ಕೋಟಿ ರೂ.ಗಳಿಗೆ ಶ್ರೇಯಸ್​ ಅಯ್ಯರ್​ ಅವರನ್ನು ಖರೀದಿಸಿತ್ತು. ಬಲಗೈ ಬ್ಯಾಟರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಿದ್ದರು.

IPL 2022: Shreyas Iyer appointed captain of KKR
ಶ್ರೇಯಸ್​ ಅಯ್ಯರ್​ ಕೆಕೆಆರ್ ನಾಯಕತ್ವ
author img

By

Published : Feb 16, 2022, 4:58 PM IST

ಕೋಲ್ಕತ್ತಾ: 2022ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಭಾರತದ ಯುವ ಬ್ಯಾಟರ್ ಶ್ರೇಯಸ್​ ಅಯ್ಯರ್​​ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ.

ಕೆಕೆಆರ್​ ಅಂತಹ ಹೆಮ್ಮೆಯ ತಂಡವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿರುವುದು ದೊಡ್ಡ ಗೌರವವಾಗಿದೆ. ಐಪಿಎಲ್ ಟೂರ್ನಮೆಂಟ್​ ವಿಭಿನ್ನ ದೇಶಗಳ ಮತ್ತು ವಿಭಿನ್ನ ಸಂಸ್ಕೃತಿಯ ಆಟಗಾರರನ್ನು ಒಟ್ಟಿಗೆ ಸೇರಿಸುತ್ತಿದೆ. ಅತ್ಯುತ್ತಮ ಸಾಮರ್ಥ್ಯವುಳ್ಳ ಆಟಗಾರರ ಹೊಂದಿರುವ ಈ ತಂಡವನ್ನು ಮುನ್ನಡೆಸುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ ಎಂದು ಶ್ರೇಯಸ್​ ಅಯ್ಯರ್​ ತಿಳಿಸಿದ್ದಾರೆ.

ಈ ತಂಡವನ್ನು ಮುಂದಾಳತ್ವ ನನಗೆ ನೀಡಿದ್ದಕ್ಕೆ ತಂಡದ ಮಾಲೀಕರು, ಕೆಕೆಆರ್​ ಮ್ಯಾನೇಜ್​ಮೆಂಟ್​ಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ತಂಡದ ಗುರಿ ಇಡೇರಿಸುವುದಕ್ಕೆ ಒಳ್ಳೆಯ ಮಾರ್ಗ ನಾವು ಕಂಡುಕೊಳ್ಳುತ್ತೇವೆ ಎಂದು ವಿಶ್ವಾಸ ನನಗಿದೆ ಎಂದು ಅಯ್ಯರ್​ ಹೇಳಿದ್ದಾರೆ.

ಫೆಬ್ರವರಿ 12 ಮತ್ತು 13ರಂದು ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಕೆಆರ್​ 12.5 ಕೋಟಿ ರೂ.ಗಳಿಗೆ ಖರೀದಿಸಿತ್ತು. ಬಲಗೈ ಬ್ಯಾಟರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಿದ್ದರು.

ಕೆಕೆಆರ್​ ತಂಡ: ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ, ಪ್ಯಾಟ್ ಕಮ್ಮಿನ್ಸ್, ಶ್ರೇಯಸ್ ಅಯ್ಯರ್, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್​, ರಾಸಿಕ್ ದಾರ್​, ಬಾಬಾ ಇಂದ್ರಜಿತ್, ಚಮಿಕಾ ಕರುಣರತ್ನೆ, ಅಭಿಜೀತ್ ತೋಮರ್, ಪ್ರಥಮ್ ಸಿಂಗ್, ಅಶೋಕ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಸಿಕ್ಕಿದ ಈ ಪಾತ್ರ ನನ್ನ ವೃತ್ತಿಜೀವನವನ್ನೇ ಬದಲಾಯಿಸಿತು: ಹರ್ಷಲ್ ಪಟೇಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.