ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮುಂದಿನ ತಿಂಗಳ ಮಾರ್ಚ್ 26ರಿಂದ ಆರಂಭಗೊಳ್ಳಲಿರುವ ಟೂರ್ನಿ ಮೇ 29ರಂದು ಮುಕ್ತಾಯಗೊಳ್ಳಲಿದೆ. ಅದಕ್ಕಾಗಿ ಮಹಾರಾಷ್ಟ್ರ, ಪುಣೆಯ ನಾಲ್ಕು ಮೈದಾನಗಳು ಸಜ್ಜುಗೊಂಡಿವೆ.
ಈ ಸಲದ ಐಪಿಎಲ್ನಲ್ಲಿ 10 ತಂಡಗಳು ಸೆಣಸಾಟ ನಡೆಸಲಿರುವ ಕಾರಣ ಒಟ್ಟು 74 ಪಂದ್ಯಗಳು ನಡೆಯಲಿದ್ದು, ಇದರಲ್ಲಿ 70 ಲೀಗ್ ಪಂದ್ಯಗಳು ಮುಂಬೈ, ಪುಣೆಯಲ್ಲಿ ಆಯೋಜನೆಗೊಂಡಿವೆ. ಪ್ರತಿ ತಂಡಗಳು 14 ಪಂದ್ಯಗಳನ್ನಾಡಲಿದ್ದು, 7 ತವರು ಹಾಗೂ 7 ಹೊರಗಡೆ ಆಡಲಿವೆ. ಈ ಹಿಂದಿನ ಟೂರ್ನಿಗಳಿಗೆ ಹೋಲಿಕೆ ಮಾಡಿದಾಗ ಈ ಸಲದ ಐಪಿಎಲ್ ವಿಭಿನ್ನವಾಗಿರಲಿದ್ದು, ಹೀಗಾಗಿ ತಲಾ ಐದು ತಂಡಗಳೊಂದಿಗೆ ಎರಡು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ.
ಗ್ರೂಪ್ ಎನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಟ್ಸ್ ಇದ್ದು, ಗ್ರೂಪ್ ಬಿ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ಇವೆ.
ಇದನ್ನೂ ಓದಿರಿ: IPL 2022: ಬದಲಾದ ಶೈಲಿಯಲ್ಲಿ ಈ ವರ್ಷದ ಐಪಿಎಲ್: ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ತಂಡಗಳೊಂದಿಗೆ ಫೈಟ್: ಇಲ್ಲಿಯವರೆಗೆ ಆರ್ಸಿಬಿ ಆಡಿರುವ 14 ಆವೃತ್ತಿಗಳ ಪೈಕಿ ಮೂರು ಸಲ ಫೈನಲ್ಗೆ ಪ್ರವೇಶ ಮಾಡಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲಗೊಂಡಿದೆ. ಈ ಸಲದ ಆವೃತ್ತಿಯಲ್ಲಿ ಬಿ ಗ್ರೂಪ್ನಲ್ಲಿದ್ದು, ಒಟ್ಟು 14 ಪಂದ್ಯಗಳನ್ನಾಡಲಿದೆ. ಇದರಲ್ಲಿ ಮುಂಬೈ ವಿರುದ್ಧ(1 ಪಂದ್ಯ), ಕೆಕೆಆರ್(1 ಪಂದ್ಯ), ರಾಜಸ್ಥಾನ ರಾಯಲ್ಸ್(2 ಪಂದ್ಯ), ಡೆಲ್ಲಿ ಕ್ಯಾಪಿಟಲ್ಸ್(1 ಪಂದ್ಯ),ಲಖನೌ ಸೂಪರ್ ಜೈಟ್ಸ್(1ಪಂದ್ಯ), ಚೆನ್ನೈ ಸೂಪರ್ ಕಿಂಗ್ಸ್(2 ಪಂದ್ಯ),ಸನ್ರೈಸರ್ಸ್ ಹೈದರಾಬಾದ್(2 ಪಂದ್ಯ), ಪಂಜಾಬ್ ಕಿಂಗ್ಸ್(2 ಪಂದ್ಯ), ಗುಜರಾತ್ ಟೈಟನ್ಸ್(2 ಪಂದ್ಯ) ವಿರುದ್ಧ ಆಡಲಿದೆ.
ಬಿ ಗ್ರೂಪ್ನಲ್ಲಿರುವ ಆರ್ಸಿಬಿ ಅದೇ ಗ್ರೂಪ್ನಲ್ಲಿರುವ ಇತರ ತಂಡಗಳೊಂದಿಗೆ ತಲಾ ಎರಡು ಪಂದ್ಯಗಳನ್ನಾಡಲಿದ್ದು, ಉಳಿದಂತೆ ಎ ಗ್ರೂಪ್ನಲ್ಲಿರುವ ಒಂದು ತಂಡದೊಂದಿಗೆ ಎರಡು ಪಂದ್ಯ ಹಾಗೂ ಉಳಿದ ತಂಡಗಳೊಂದಿಗೆ ಒಂದು ಪಂದ್ಯವನ್ನಾಡಲಿದೆ.