ಮುಂಬೈ: ಇಲ್ಲಿನ ಬ್ರೆಬೊರ್ನ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭಿಕ ಆಘಾತದ ನಡುವೆ ಕೂಡ ಸ್ಪರ್ಧಾತ್ಮಕ ರನ್ಗಳಿಕೆ ಮಾಡಿದೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್‌ಸ್ಟೋನ್ ಅಬ್ಬರದ ಅರ್ಧಶತಕದ(64) ನೆರವಿನಿಂದ ಗುಜರಾತ್ ಗೆಲುವಿಗೆ 190 ರನ್ ಬೃಹತ್ ಟಾರ್ಗೆಟ್ ನೀಡಿದೆ.
-
Innings Break! @liaml4893 stars with the bat as @PunjabKingsIPL post 189/9 on the board. 👏 👏
— IndianPremierLeague (@IPL) April 8, 2022 " class="align-text-top noRightClick twitterSection" data="
Meanwhile, @rashidkhan_19 was the pick of the bowlers for @gujarat_titans. 👌 👌
The #GT chase to begin soon. 👍 👍
Scorecard ▶️ https://t.co/GJN6Rf8GKJ#TATAIPL | #PBKSvGT pic.twitter.com/EJgfBv85eV
">Innings Break! @liaml4893 stars with the bat as @PunjabKingsIPL post 189/9 on the board. 👏 👏
— IndianPremierLeague (@IPL) April 8, 2022
Meanwhile, @rashidkhan_19 was the pick of the bowlers for @gujarat_titans. 👌 👌
The #GT chase to begin soon. 👍 👍
Scorecard ▶️ https://t.co/GJN6Rf8GKJ#TATAIPL | #PBKSvGT pic.twitter.com/EJgfBv85eVInnings Break! @liaml4893 stars with the bat as @PunjabKingsIPL post 189/9 on the board. 👏 👏
— IndianPremierLeague (@IPL) April 8, 2022
Meanwhile, @rashidkhan_19 was the pick of the bowlers for @gujarat_titans. 👌 👌
The #GT chase to begin soon. 👍 👍
Scorecard ▶️ https://t.co/GJN6Rf8GKJ#TATAIPL | #PBKSvGT pic.twitter.com/EJgfBv85eV
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಪಂಜಾಬ್ ತಂಡಕ್ಕೆ ಎರಡನೇ ಓವರ್ನಲ್ಲೇ ಹಾರ್ದಿಕ್ ಪಾಂಡ್ಯಾ ಶಾಕ್ ನೀಡಿದರು. ಕೇವಲ 5ರನ್ಗಳಿಕೆ ಮಾಡಿದ್ದ ಮಯಾಂಕ್ ಅಗರವಾಲ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಂದ ಬೈರ್ಸ್ಟೋ(8) ಕೂಡ ಫರ್ಗ್ಯೂಸನ್ ಓವರ್ನಲ್ಲಿ ಔಟಾದರು.
ಧವನ್-ಲಿವಿಂಗ್ ಸ್ಟೋನ್ ಜೊತೆಯಾಟ: ಆರಂಭಿಕ ಆಟಗಾರ ಶಿಖರ್ ಧವನ್ ಜೊತೆ ಸೇರಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿವಿಂಗ್‌ಸ್ಟೋನ್ ಎದುರಾಳಿ ಬೌಲರ್ಗಳನ್ನು ಸುಲಭವಾಗಿ ದಂಡಿಸಿದರು. ಜೊತೆಗೆ ತಂಡದ ರನ್ಗತಿ ಹೆಚ್ಚಿಸಿದರು. ಶಿಖರ್ ಧವನ್ ತಾವು ಎದುರಿಸಿದ 30 ಎಸೆತಗಳಲ್ಲಿ 35ರನ್ಗಳಿಕೆ ಮಾಡಿದ್ರೆ, ಲಿವಿಂಗ್‌ಸ್ಟೋನ್ ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 64ರನ್ಗಳಿಕೆ ಮಾಡಿದರು. ಧವನ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕೆ ಬಂದ ಜಿತೇಶ್ ಶರ್ಮಾ ಕೂಡ ತಾವು ಎದುರಿಸಿದ 11 ಎಸೆತಗಳಲ್ಲಿ ಸ್ಫೋಟಕ 23ರನ್ಗಳಿಕೆ ಮಾಡಿ ತಂಡಕ್ಕೆ ನೆರವಾದರು.
ದೊಡ್ಡ ಹೊಡೆತಕ್ಕೆ ಮುಂದಾದ ಒಡಿಯಾನ್ ಸ್ಮಿತ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ನಾಲ್ಕಂಡೆಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಶಾರೂಖ್ ಖಾನ್ 8 ಎಸೆತಗಳಲ್ಲಿ 15ರನ್ಗಳಿಕೆ ಮಾಡಿದರು.
ಕೊನೆಯಲ್ಲಿ ಅಬ್ಬರಿಸಿದ ಚಹರ್: ಪಂಜಾಬ್ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರೂ ಕೂಡ ರನ್ಗತಿಯಲ್ಲಿ ಯಾವುದೇ ಇಳಿಕೆ ಕಂಡು ಬರಲಿಲ್ಲ. ಪಂದ್ಯದ ಕೊನೆಯಲ್ಲಿ ಮೈದಾನಕ್ಕಿಳಿದ ರಾಹುಲ್ ಚಹರ್ ತಾವು ಎದುರಿಸಿದ 14 ಎಸೆತಗಳಲ್ಲಿ 22ರನ್ಗಳಿಕೆ ಮಾಡಿ, ತಂಡದ ಮೊತ್ತ ಮತ್ತಷ್ಟು ಏರಿಕೆ ಮಾಡಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 189ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 190ರನ್ಗಳ ಗುರಿ ನೀಡಿದೆ. ಗುಜರಾತ್ ತಂಡದ ಪರ ರಾಶೀದ್ ಖಾನ್ ಮೂರು ವಿಕೆಟ್, ದರ್ಶನ್ ನಾಲ್ಕಂಡೆ 2 ವಿಕೆಟ್ ಪಡೆದುಕೊಂಡರೆ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯಾ ಹಾಗೂ ಫರ್ಗ್ಯೂಸನ್ ತಲಾ 1 ವಿಕೆಟ್ ಕಿತ್ತರು.