ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಘಾತದ ಹೊರತಾಗಿ ರಾಹುಲ್ ತ್ರಿಪಾಠಿ(76), ಪ್ರಿಯಾಮ್ ಗರ್ಗ್(42) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 193 ರನ್ಗಳಿಕೆ ಮಾಡಿದೆ.
ತಂಡದ ಪರ ಅಭಿಷೇಕ್ ಶರ್ಮಾ(9) ಬೇಗ ಔಟಾದರು. ಈ ವೇಳೆ ಒಂದಾದ ಗರ್ಗ್ ಹಾಗೂ ತ್ರಿಪಾಠಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಈ ಜೋಡಿ 80ಕ್ಕೂ ಅಧಿಕ ರನ್ಗಳ ಜೊತೆಯಾಟವಾಡಿತು. ಕೇವಲ 26 ಎಸೆತಗಳಲ್ಲಿ 42ರನ್ಗಳಿಕೆ ಮಾಡಿದ್ದ ಗರ್ಗ್ ರಮಣದೀಪ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಪೂರನ್ ಕೂಡ ಅಬ್ಬರಿಸಿ 22 ಎಸೆತಗಳಲ್ಲಿ 38ರನ್ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ತ್ರಿಪಾಠಿ 44 ಎಸೆತಗಳಲ್ಲಿ ಬರೋಬ್ಬರಿ 76ರನ್ಗಳಿಸಿ, ವಿಕೆಟ್ ಒಪ್ಪಿಸಿದರು. ಮರ್ಕ್ರಾಮ್ 2ರನ್ಗಳಿಸಿ ಔಟಾದರೆ, ವಿಲಿಯಮ್ಸನ್ ಅಜೇಯ 8ರನ್, ವಾಷಿಂಗ್ಟನ್ ಸುಂದರ್ 9ರನ್ಗಳಿಕೆ ಮಾಡಿದರು.
ಮುಂಬೈ ಪರ ರಮಣದೀಪ್ ಸಿಂಗ್ 3, ಡೆನಿಯಲ್ ಸ್ಯಾಮ್ಸ್ , ಮೆರ್ಡಿತ್, ಬುಮ್ರಾ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ವಿಲಿಯಮ್ಸನ್ ಬಳಗಕ್ಕೆ ಈ ಜಯ ಅತಿ ಅವಶ್ಯವಾಗಿದೆ.
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಮ್ ಗರ್ಗ್, ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ರಾಹುಲ್ ತ್ರಿಪಾಠಿ, ಮರ್ಕ್ರಾಮ್, ನಿಕೂಲಸ್ ಪೂರನ್(ವಿ.ಕೀ), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಫಾರೂಖ್, ಉಮ್ರಾನ್ ಮಲಿಕ್, ಟಿ. ನಟರಾಜನ್
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್(ವಿ.ಕೀ), ರೋಹಿತ್ ಶರ್ಮಾ(ಕ್ಯಾಪ್ಟನ್), ಡೆನಿಯಲ್ ಸ್ಯಾಮ್ಸ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಸ್ಟುಬ್ಸ್, ಟಿಮ್ ಡೆವಿಡ್, ಸಂಜಯ್ ಯಾದವ್, ಜಸ್ಪ್ರೀತ್ ಬುಮ್ರಾ, ಮೆರ್ಡಿತ್, ಮಯಾಂಕ್ ಮಾರ್ಕಡೆ
ಇಂದಿನ ಪಂದ್ಯಕ್ಕಾಗಿ ಹೈದರಾಬಾದ್ ಎರಡು ಬದಲಾವಣೆ ಮಾಡಿಕೊಂಡಿದ್ದು, ಮುಂಬೈ ಇಂಡಿಯನ್ಸ್ ಕೂಡ ಎರಡು ಬದಲಾವಣೆ ಮಾಡಿಕೊಂಡು ಮೈದಾನಕ್ಕಿಳಿದಿದೆ. ಐಪಿಎಲ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 18 ಸಲ ಮುಖಾಮುಖಿಯಾಗಿದ್ದು, ಮುಂಬೈ 10 ಪಂದ್ಯ ಹಾಗೂ ಹೈದರಾಬಾದ್ 8ರಲ್ಲಿ ಗೆಲುವಿನ ನಗೆ ಬೀರಿದೆ.
-
🚨 Toss Update 🚨@mipaltan have elected to bowl against @SunRisers.
— IndianPremierLeague (@IPL) May 17, 2022 " class="align-text-top noRightClick twitterSection" data="
Follow the match ▶️ https://t.co/U2W5UAg3bi #TATAIPL | #MIvSRH pic.twitter.com/j4ImZEgAvJ
">🚨 Toss Update 🚨@mipaltan have elected to bowl against @SunRisers.
— IndianPremierLeague (@IPL) May 17, 2022
Follow the match ▶️ https://t.co/U2W5UAg3bi #TATAIPL | #MIvSRH pic.twitter.com/j4ImZEgAvJ🚨 Toss Update 🚨@mipaltan have elected to bowl against @SunRisers.
— IndianPremierLeague (@IPL) May 17, 2022
Follow the match ▶️ https://t.co/U2W5UAg3bi #TATAIPL | #MIvSRH pic.twitter.com/j4ImZEgAvJ
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 12 ಪಂದ್ಯಗಳ ಪೈಕಿ 3ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ. ಸನ್ರೈಸರ್ಸ್ ಕೂಡ ಬಹುತೇಕ ಹೊರಬಿದ್ದ ಸ್ಥಿತಿಯಲ್ಲಿದೆ. ಆದರೆ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಉಳಿದ ತಂಡಗಳ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಮುಂದಿನ ಹಾದಿ ನಿರ್ಧಾರವಾಗಲಿದೆ.