ಮುಂಬೈ: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ರಾಹುಲ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ತಾವು ಆಡಿರುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸೋಲು ಕಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.
-
🚨 Toss Update 🚨@klrahul11 has won the toss & @LucknowIPL have elected to bowl against @ChennaiIPL.
— IndianPremierLeague (@IPL) March 31, 2022 " class="align-text-top noRightClick twitterSection" data="
Follow the match ▶️ https://t.co/uEhq27KiBB#TATAIPL | #LSGvCSK pic.twitter.com/mzmN4GPoZE
">🚨 Toss Update 🚨@klrahul11 has won the toss & @LucknowIPL have elected to bowl against @ChennaiIPL.
— IndianPremierLeague (@IPL) March 31, 2022
Follow the match ▶️ https://t.co/uEhq27KiBB#TATAIPL | #LSGvCSK pic.twitter.com/mzmN4GPoZE🚨 Toss Update 🚨@klrahul11 has won the toss & @LucknowIPL have elected to bowl against @ChennaiIPL.
— IndianPremierLeague (@IPL) March 31, 2022
Follow the match ▶️ https://t.co/uEhq27KiBB#TATAIPL | #LSGvCSK pic.twitter.com/mzmN4GPoZE
ಮುಂಬೈನ ಬ್ರಾಬೌರ್ನೆ ಮೈದಾನದಲ್ಲಿ ಪಂದ್ಯ ಆರಂಭವಾಗಿದ್ದು, ಲಖನೌ ತಂಡಕ್ಕೆ ಕನ್ನಡಿಗ ರಾಹುಲ್ ನಾಯಕತ್ವವಿದ್ದು, ಚೆನ್ನೈ ತಂಡಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಸಾರಥ್ಯವಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ CSK ಪಡೆ KKR ವಿರುದ್ಧ ಸೋಲು ಕಂಡಿದ್ದು, ಮತ್ತೊಂದೆಡೆ, ಕೆ ಎಲ್ ರಾಹುಲ್ ಸಾರಥ್ಯದ ಲಖನೌ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದೆ. ಇದರಿಂದಾಗಿ ಉಭಯ ತಂಡಗಳು ಇಂದು ಗೆಲುವಿಗಾಗಿ ಸೆಣಸಾಡಲಿವೆ.
ಇದನ್ನೂ ಓದಿ: ಧೋನಿಯಷ್ಟೇ ಕೂಲ್ ದಿನೇಶ್ ಕಾರ್ತಿಕ್: ಕೊನೆ ಕ್ಷಣದಲ್ಲಿ ಬ್ಯಾಟ್ ಮಾಡಲು ಕಳುಹಿಸಿದ ರಹಸ್ಯವೇನು?
ಆಡುವ 11ರ ಬಳಗ: ಲಖನೌ ಸೂಪರ್ ಜೈಂಟ್ಸ್: ಕೆ.ಎಲ್ ರಾಹುಲ್(ಕ್ಯಾಪ್ಟನ್), ಕ್ವಿಂಟನ್ ಡಿಕಾಕ್(ವಿ.ಕೀ), ಇವಿನ್ ಲಿವಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಆಯೂಷ್ ಬದೌನಿ, ಕೃನಾಲ್ ಪಾಂಡ್ಯಾ, ಚಮೀರಾ, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಆವೇಶ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ(ಕ್ಯಾಪ್ಟನ್), ಎಂಎಸ್ ಧೋನಿ(ವಿ.ಕೀ), ಶಿವಂ ದುಬೆ, ಡ್ವೇನ್ ಬ್ರಾವೋ,ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ, ತುಷಾರ್ ದೇಶಪಾಂಡೆ
ಗೆಲುವ ಉದ್ದೇಶದಿಂದ ಕಣಕ್ಕಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಆಡುವ 11ರ ಬಳಗದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದು, ಲಖನೌ ತಂಡ ಕೇವಲ ಒಂದು ಬದಲಾವಣೆವೊಂದಿಗೆ ಕಣಕ್ಕಿಳಿದಿದೆ.