ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಲಖನೌ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರರ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ದೀಪಕ್ ಹೂಡಾ(55) ಹಾಗೂ ಆಯೂಷ್ ಬದೌನಿ(54)ರನ್ಗಳ ನೆರವಿನಿಂದ ಸ್ಪರ್ಧಾತ್ಮಕ ರನ್ಗಳಿಕೆ ಮಾಡಿದ್ದು, ಎದುರಾಳಿ ಗೆಲುವಿಗೆ 159 ರನ್ ಟಾರ್ಗೆಟ್ ನೀಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೊಸದಾಗಿ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಲಖನೌ ಹಾಗೂ ಗುಜರಾತ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಗುಜರಾತ್ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಲಖನೌ ಕ್ಯಾಪ್ಟನ್ ರಾಹುಲ್(0) ಮೊಹಮ್ಮದ್ ಶಮಿ ಎಸೆದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು. ಇದರ ಬೆನ್ನಲ್ಲೇ ಕ್ವಿಂಟನ್ ಡಿಕಾಕ್(7ರನ್) ಕೂಡ ಶಮಿ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಬಂದ ಲಿವಿಸ್(10)ರನ್, ಮನೀಷ್ ಪಾಂಡೆ(6)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು.
-
Hooda on fire at the Wankhede 💥💥
— IndianPremierLeague (@IPL) March 28, 2022 " class="align-text-top noRightClick twitterSection" data="
Live - https://t.co/u8Y0KpnOQi #GTvLSG #TATAIPL | @HoodaOnFire https://t.co/RitZyuxGI6 pic.twitter.com/AHzA48RkXJ
">Hooda on fire at the Wankhede 💥💥
— IndianPremierLeague (@IPL) March 28, 2022
Live - https://t.co/u8Y0KpnOQi #GTvLSG #TATAIPL | @HoodaOnFire https://t.co/RitZyuxGI6 pic.twitter.com/AHzA48RkXJHooda on fire at the Wankhede 💥💥
— IndianPremierLeague (@IPL) March 28, 2022
Live - https://t.co/u8Y0KpnOQi #GTvLSG #TATAIPL | @HoodaOnFire https://t.co/RitZyuxGI6 pic.twitter.com/AHzA48RkXJ
ಅಬ್ಬರಿಸಿದ ಹೂಡಾ-ಬದೌನಿ ಜೋಡಿ: ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಲಖನೌ ತಂಡಕ್ಕೆ ದೀಪಕ್ ಹೂಡಾ- ಆಯೂಷ್ ಬದೌನಿ ಜೋಡಿ ಉತ್ತಮ ಜೊತೆಯಾಟವಾಡಿತು. ಎದುರಾಳಿ ಬೌಲರ್ಗಳನ್ನು ಸುಲಭವಾಗಿ ಎದುರಿಸಿದ ಈ ಆಟಗಾರರು ಉತ್ತಮ ರನ್ ಕಲೆಹಾಕಿದರು. ಹೂಡಾ ತಾವು ಎದುರಿಸಿದ 41 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಮೇತ 55ರನ್ಗಳಿಕೆ ಮಾಡಿದ್ರೆ, ಬದೌನಿ 41 ಎಸೆತಗಳಲ್ಲಿ 3 ಸಿಕ್ಸರ್, 4ಬೌಂಡರಿ ಸಮೇತ 54ರನ್ಗಳಿಸಿದರು. ಇದಾದ ಬಳಿಕ ಕಣಕ್ಕಿಳಿದ ಕೃನಾಲ್ ಪಾಂಡ್ಯಾ ತಾವು ಎದುರಿಸಿದ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 21ರನ್ಗಳಿಕೆ ಮಾಡಿದರು.
ಇದನ್ನೂ ಓದಿ: IPL 2022: ಗುಜರಾತ್-ಲಖನೌ ಮುಖಾಮುಖಿ ; ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಹಾರ್ದಿಕ್
ತಂಡ ಕೊನೆಯದಾಗಿ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 158ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 159ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಗುಜರಾತ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದುಕೊಂಡರೆ, ವರುಣ್ ಆ್ಯರೊನ್ 2 ವಿಕೆಟ್ ಹಾಗೂ ರಶೀದ್ ಖಾನ್ 1 ವಿಕೆಟ್ ಕಿತ್ತರು. ಈ ಪಂದ್ಯದಲ್ಲಿ ಲಖನೌ ತಂಡವನ್ನು ಕನ್ನಡಿಗ ರಾಹುಲ್ ಹಾಗೂ ಗುಜರಾತ್ ತಂಡದ ಸಾರಥ್ಯವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹೊತ್ತುಕೊಂಡಿದ್ದಾರೆ.