ETV Bharat / sports

IPL 2022: ಲಖನೌ ತಂಡದ ಅತ್ಯುತ್ತಮ ಬೌಲಿಂಗ್: 20 ರನ್​ಗಳಿಂದ ಸೋತ ಪಂಜಾಬ್ - ಪಂಜಾಬ್ ವಿರುದ್ಧ ಲಖನೌಗೆ ಗೆಲುವು

ಲಖನೌ ಸೂಪರ್ ಜೈಂಟ್ಸ್​ ತಂಡ ಪಂಜಾಬ್ ಕಿಂಗ್ ತಂಡದ ವಿರುದ್ಧ 20 ರನ್​ಗಳ ಗೆಲುವು ಸಾಧಿಸಿದ್ದು, ಪಂಜಾಬ್​ನ ಬೌಲಿಂಗ್ ದಾಳಿಗೆ ಬೌಲಿಂಗ್ ಮೂಲಕವೇ ಲಖನೌ ತಂಡ ತಿರುಗೇಟು ನೀಡಿದೆ.

IPL 2022: LSG record 20-run win as Punjab fluff run chase
IPL 2022: ಲಖನೌ ತಂಡದ ಅತ್ಯುತ್ತಮ ಬೌಲಿಂಗ್: 20 ರನ್​ಗಳಿಂದ ಸೋತ ಪಂಜಾಬ್
author img

By

Published : Apr 30, 2022, 6:48 AM IST

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್​ನ 42ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್​ ತಂಡ ಪಂಜಾಬ್ ಕಿಂಗ್ ತಂಡದ ವಿರುದ್ಧ 20 ರನ್​ಗಳ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶಿಸಿದ ಲಖನೌ ತಂಡ ಕೇವಲ 133 ರನ್​ಗಳಿಗೆ ಪಂಜಾಬ್​ ಕಿಂಗ್ಸ್ ತಂಡವನ್ನು ಕಟ್ಟಿಹಾಕುವ ಮೂಲಕ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಕ್ವಿಂಟನ್ ಡಿಕಾಕ್​​ 46 ರನ್ ಹಾಗೂ ದೀಪಕ್ ಹೂಡಾ 34ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ​ನಷ್ಟಕ್ಕೆ 153 ರನ್ ​ಗಳಿಸಿತ್ತು. ಪಂಜಾಬ್ ಬೌಲಿಂಗ್ ದಾಳಿಗೆ ತತ್ತರಿಸಿದ ಲಖನೌ ಆರಂಭದಲ್ಲೇ ಕೆ.ಎಲ್​.ರಾಹುಲ್ ಅವರನ್ನು ಕಳೆದುಕೊಂಡಿತ್ತು. ಕೆ.ಎಲ್.ರಾಹುಲ್ ಕೇವಲ 6 ರನ್​ ಗಳಿಸಲು ಮಾತ್ರವಷ್ಟೇ ಸಾಧ್ಯವಾಯಿತು. ನಂತರ ಕ್ವಿಂಟನ್ ಡಿ ಕಾಕ್ 46 ರನ್ ದಾಖಲಿಸಿ ತಂಡ ಸ್ವಲ್ಪ ಚೇತರಿಸಿಕೊಳ್ಳುವಂತೆ ಮಾಡಿದರು.

ದೀಪಕ್ ಹೂಡಾ 34 ಗಳಿಸಿ ತಂಡಕ್ಕೆ ಆಸರೆಯಾದರೆ, ಕೃನಾಲ್ ಪಾಂಡ್ಯಾ 7 ರನ್​, ಸ್ಟೋನಿಸ್ 1ರನ್​ ಹಾಗೂ ಬದೌನಿ 4 ರನ್​​​​​ಗಳಿಕೆ ಮಾಡಿ ಔಟಾದರು. ಹೋಲ್ಡರ್ ಕೇವಲ 11 ರನ್ ​ಗಳಿಸಿ ನಿರಾಸೆ ಮೂಡಿಸಿದರು. ಚಮೀರಾ 17 ರನ್, ಮೋಸಿನ್ ಖಾನ್​​ 13 ರನ್ ​ಗಳಿಸಿ ತಂಡ 150ರ ಗಡಿ ದಾಟುವಂತೆ ಮಾಡಿದರು.

ಪಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಬಾಡಾ 38 ರನ್​ಗೆ 4 ವಿಕೆಟ್ ಪಡೆದುಕೊಂಡರೆ, ರಾಹುಲ್ ಚಹರ್ 30 ರನ್​ಗೆ ​ 2 ವಿಕೆಟ್ ಹಾಗೂ ಸಂದೀಪ್ ಶರ್ಮಾ 18 ವಿಕೆಟ್​ಗೆ 1 ವಿಕೆಟ್ ಕಬಳಿಸಿದರು. ಕೊನೆಗೆ 8 ವಿಕೆಟ್ ನಷ್ಟಕ್ಕೆ ಲಖನೌ 153 ರನ್ ಗಳಿಸಿ, ಸಾಧಾರಣ ಮೊತ್ತವನ್ನು ಪಂಜಾಬ್​ಗೆ ನೀಡಿತ್ತು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಪಂಜಾಬ್ 153 ರನ್​ಗಳ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಮಯಾಂಕ್ ಅಗರ್ವಾಲ್ 25, ಜಾನಿ ಬೈರ್​ಸ್ಟೋ 32, ಲಿಯಾ ಲಿವಿಂಗ್​ಸ್ಟೋನ್ 18, ರಿಶಿ ಧವನ್ 21 ರನ್​ಗಳನ್ನು ಗಳಿಸಿದರೂ, ಉಳಿದವರು ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸುವಲ್ಲಿ ವಿಫಲರಾದರು. ಶಿಖರ್ ಧವನ್ 15 ಎಸೆತಗಳಲ್ಲಿ 5 ರನ್​ಗಳಿಸಿ ಹಿನ್ನಡೆಗೆ ಕಾರಣರಾದರು. ಭಾನುಕ ರಾಜಪಕ್ಸ 9 ರನ್, ಜಿತೇಶ್ ಶರ್ಮ, ಕಗಿಸೋ ರಬಾಡಾ ತಲಾ 2 ರನ್ ಗಳಿಸಿದರು. ಇದರ ಫಲಿತಾಂಶವಾಗಿ 8 ವಿಕೆಟ್​ ನಷ್ಟಕ್ಕೆ ಕೇವಲ 133 ರನ್​ ಗಳಿಸಲು ಮಾತ್ರವಷ್ಟೇ ಸಾಧ್ಯವಾಯಿತು.

ಲಖನೌ ಪರ ಮೊಸಿನ್ ಖಾನ್ 24 ರನ್​ಗಳನ್ನು ನೀಡಿ, 3 ವಿಕೆಟ್ ಪಡೆದುಕೊಂಡರೆ, ದುಶ್ಮಂತು ಚಮೀರಾ 17 ರನ್ ನೀಡಿ 2 ವಿಕೆಟ್, ಕೃನಾಲ್ ಪಾಂಡ್ಯಾ 11 ರನ್​ ನೀಡಿ 2 ವಿಕೆಟ್, ರವಿ ಬಿಷ್ಣೋಯಿ 41 ರನ್​ ನೀಡಿ 1 ವಿಕೆಟ್ ಪಡೆದುಕೊಂಡರು. ಆದರೂ 133 ರನ್​ಗಳಿಗೆ ಪಂಜಾಬ್ ತಂಡವನ್ನು ಕಟ್ಟಿಹಾಕಿ ಲಖನೌ ಗೆಲುವಿಗೆ ಬೌಲರ್​ಗಳು ಕಾರಣರಾದರು.

ಇದನ್ನೂ ಓದಿ: ಮುಂಬೈ ವಿರುದ್ಧದ ಪಂದ್ಯದಲ್ಲಿ ವಿಶೇಷ ಜರ್ಸಿ ತೊಟ್ಟು ರಾಜಸ್ಥಾನ ಕಣಕ್ಕೆ: ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.