ಮುಂಬೈ: ತಮ್ಮ ವೇಗದ ಬೌಲಿಂಗ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಸರಾಗುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್, ಭಾರತ ತಂಡದ ಮುಂಬರುವ ಟಿ20 ಸರಣಿಗೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿದ್ದು, ಉಮ್ರಾನ್ ಮಲಿಕ್ ಅವರನ್ನು ಹತ್ತಿರದಿಂದ ಗಮನಿಸಿದ್ದಾರೆ. ಐಪಿಎಲ್ನಲ್ಲಿ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಕಾಶ್ಮೀರಿ ಬೌಲರ್ ಆದಷ್ಟು ಬೇಗ ದೇಶದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ಉಮ್ರಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆತ ಸ್ಥಿರವಾಗಿ 150kmh ವೇಗದಲ್ಲಿ ಬೌಲಿಂಗ್ ಮಾಡಬಲ್ಲ. ಪ್ರಸ್ತುತ ವಿಶ್ವದಲ್ಲಿ ಯಾವುದೇ ಬೌಲರ್ ಈ ರೀತಿ ಬೌಲಿಂಗ್ ಮಾಡುತ್ತಿಲ್ಲ. ಬಹುಶಃ ಲಾಕಿ ಫರ್ಗುಸನ್ ಆ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಮತ್ತೊಬ್ಬ ಬೌಲರ್ ಇರಬಹುದು. ಆದರೆ ಅವರಿಬ್ಬರು ವಿಭಿನ್ನ ಬೌಲರ್ಗಳು. ಆದರೆ ಭಾರತದ ದೃಷ್ಟಿಕೋನದಿಂದ ನೋಡಿದರೆ, ಉಮ್ರಾನ 145-150ರ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬಲ್ಲ ಏಕೈಕ ವ್ಯಕ್ತಿ. ಆದ್ದರಿಂದ ಆತನ ಭಾರತಕ್ಕಾಗಿ ಆಡಲಿದ್ದಾರೆ. ಆದರೆ ಭಾರತ ತಂಡ ಅವರನ್ನು ಹೇಗೆ ನಿರ್ವಹಿಸಲಿದೆ ಎನ್ನುವುದು ಅವರಿಗೆ ಬಿಟ್ಟ ವಿಷಯ ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಂತಕಥೆ ಗ್ಲೆನ್ ಮೆಕ್‌ಗ್ರಾತ್ ಕೂಢ ಉಮ್ರಾನ್ ಮಲಿಕ್ ಬಗ್ಗೆ ಮಾತನಾಡಿದ್ದಾರೆ. MRF ಪೇಸ್ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, " ನಾನೂ ಪೇಸ್ ಮುಖ್ಯ ಎಂದು ಭಾವಿಸುತ್ತೇನೆ. ಆದರೆ ಅದು ಎಲ್ಲವೂ ಅಲ್ಲ. 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಅದನ್ನು ಲೆಗ್ ಸೈಡ್ ಡೌನ್ ಲೆಗ್ ಅಥವಾ ಅಥವಾ ವೈಡ್ ಎಸೆಯುವುದನ್ನು ನೀವು ಬಯಸುವುದಿಲ್ಲ. ಆದರೆ ನೀವು ಆ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಅನ್ನು ದೀರ್ಘಕಾಲ ಉಳಿಸಿಕೊಳ್ಳಲು ಬಯಸುತ್ತೀರಿ. ಆಯ್ಕೆಗಾರರು ಕೂಡ ಅವರ ಬಗ್ಗೆ ಹೆಚ್ಚು ಆಸಕ್ತಿವಹಿಸುತ್ತಾರೆ. ಏಕೆಂದರೆ ದೇಶಕ್ಕಾಗಿ ಯಾರಾದರೂ ಆ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಪಿಟಿಐಗೆ ತಿಳಿಸಿದ್ದಾರೆ.
ಉಮ್ರಾನ್ ಮಲಿಕ್ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ತಂಡದಲ್ಲಿರುವ ಟಿ.ನಟರಾಜನ್ 15 ವಿಕೆಟ್ ಮತ್ತು ಭುವನೇಶ್ವರ್ ಕುಮಾರ್ 9 ವಿಕೆಟ್ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ:ರಿಷಭ್ ಪಂತ್ ನಾಯಕತ್ವದಲ್ಲಿ ಧೋನಿಯ ಕೆಲವು ಗುಣಗಳು ಕಾಣುತ್ತಿವೆ: ಕುಲ್ದೀಪ್ ಯಾದವ್