ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರಾಬಿನ್ ಉತ್ತಪ್ಪ(50) ಹಾಗೂ ಶಿವಂ ದುಬೆ(49) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7ವಿಕೆಟ್ ನಷ್ಟಕ್ಕೆ 210ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 211ರನ್ ಗುರಿ ನೀಡಿದೆ.
-
Innings Break!
— IndianPremierLeague (@IPL) March 31, 2022 " class="align-text-top noRightClick twitterSection" data="
A cracking batting performance from @ChennaiIPL as they post 210/7 on the board! 💪 💪
The @LucknowIPL chase will begin shortly. 👍 👍
Scorecard ▶️ https://t.co/uEhq27KiBB#TATAIPL | #LSGvCSK pic.twitter.com/i3vrkIU0e4
">Innings Break!
— IndianPremierLeague (@IPL) March 31, 2022
A cracking batting performance from @ChennaiIPL as they post 210/7 on the board! 💪 💪
The @LucknowIPL chase will begin shortly. 👍 👍
Scorecard ▶️ https://t.co/uEhq27KiBB#TATAIPL | #LSGvCSK pic.twitter.com/i3vrkIU0e4Innings Break!
— IndianPremierLeague (@IPL) March 31, 2022
A cracking batting performance from @ChennaiIPL as they post 210/7 on the board! 💪 💪
The @LucknowIPL chase will begin shortly. 👍 👍
Scorecard ▶️ https://t.co/uEhq27KiBB#TATAIPL | #LSGvCSK pic.twitter.com/i3vrkIU0e4
ಮುಂಬೈನ ಬ್ರಾಬೌರ್ನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ರಾಬಿನ್ ಉತ್ತಮ ಆರಂಭ ಪಡೆದುಕೊಂಡರು. ತಾವು ಎದುರಿಸಿದ 27 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸೇರಿದಂತೆ 50ರನ್ಗಳಿಸಿದರು. ಆದರೆ, ಇವರಿಗೆ ಸಾಥ್ ನೀಡಲು ಕಣಕ್ಕಿಳಿದಿದ್ದ ಋತುರಾಜ್ ಗಾಯಕ್ವಾಡ್ ಕೇವಲ 1ರನ್ಗಳಿಕೆ ಮಾಡಿ, ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ಕಣಕ್ಕಿಳಿದ ಮೊಯಿನ್ ಅಲಿ ಕೂಡ ಆರ್ಭಟಿಸಿದರು. ಕೇವಲ 22 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸೇರಿ 35ರನ್ಗಳಿಸಿದರು. ಇದರ ಬೆನ್ನಲ್ಲೇ ಬಂದ ಶಿವಂ ದುಬೆ ಕೂಡ 30 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿ ಸೇರಿ 49ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯಡು 27ರನ್, ಜಡೇಜಾ 17, ಧೋನಿ ಅಜೇಯ 16ರನ್ಗಳಿಕೆ ಮಾಡಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 210ರನ್ಗಳಿಕೆ ಮಾಡಿತು.ಲಖನೌ ತಂಡದ ಪರ ಆವೇಶ್ ಖಾನ್, ರವಿ ಬಿಷ್ಣೋಯ್ ಹಾಗೂ ಆಂಡ್ರ್ಯೂ ಟೈ ತಲಾ 2ವಿಕೆಟ್ ಪಡೆದುಕೊಂಡರು.