ETV Bharat / sports

ಐಪಿಎಲ್ ಹರಾಜು : ರೈನಾ, ಮಾರ್ಗನ್​, ಫಿಂಚ್​ ಸೇರಿ ಈ ಎಲ್ಲ ಆಟಗಾರರನ್ನ ಕಡೆಗಣಿಸಿದ ಫ್ರಾಂಚೈಸಿಗಳು - ಐಪಿಎಲ್ 2022 ಹರಾಜು

ಟೂರ್ನಿಯ 15ನೇ ಋತುವಿಗಾಗಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಕಟ್ಟಲು ಒಟ್ಟು 551.7 ಕೋಟಿ ರೂ. ಗಳನ್ನು ಖರ್ಚು ಮಾಡಿವೆ. ಹರಾಜಿನಲ್ಲಿ ಕೆಲವು ದೊಡ್ಡ ಮಟ್ಟದ ಖರೀದಿಗಳು ನಡೆದರೆ, ಕೆಲವು ಸ್ಟಾರ್​ ಆಟಗಾರರೂ ಕೂಡ ಫ್ರಾಂಚೈಸಿಗಳಿಂದ ತಿರಸ್ಕರಿಸಲ್ಪಟ್ಟಿದ್ದಾರೆ..

IPL 2022 auction: The list of unsold players
ಐಪಿಎಲ್ ಹರಾಜು: ರೈನಾ, ಮಾರ್ಗನ್​, ಫಿಂಚ್​ ಸೇರಿ ಈ ಎಲ್ಲ ಆಟಗಾರರ ಕಡೆಗಣಿಸಿದ ಫ್ರಾಂಚೈಸಿಗಳು
author img

By

Published : Feb 14, 2022, 1:22 PM IST

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2022ರ ಋತುವಿಗೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆದಿದೆ. 10 ಫ್ರಾಂಚೈಸಿಗಳು 204 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ.

ಟೂರ್ನಿಯ 15ನೇ ಋತುವಿಗಾಗಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಕಟ್ಟಲು ಒಟ್ಟು 551.7 ಕೋಟಿ ರೂ.ಗಳನ್ನು ಖರ್ಚು ಮಾಡಿವೆ. ಹರಾಜಿನಲ್ಲಿ ಕೆಲವು ದೊಡ್ಡ ಮಟ್ಟದ ಖರೀದಿಗಳು ನಡೆದರೆ, ಕೆಲವು ಸ್ಟಾರ್​ ಆಟಗಾರರೂ ಕೂಡ ಫ್ರಾಂಚೈಸಿಗಳಿಂದ ತಿರಸ್ಕರಿಸಲ್ಪಟ್ಟಿದ್ದಾರೆ.

ಹರಾಜಿನಲ್ಲಿ ಒಟ್ಟು 76 ಆಟಗಾರರು ಮಾರಾಟವಾಗದೆ ಉಳಿದಿದ್ದು, ಅವರಲ್ಲಿ 22 ಮಂದಿ ಪ್ರಮುಖರಾಗಿದ್ದಾರೆ. ಪಂದ್ಯಾವಳಿಯ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾದ ಸುರೇಶ್ ರೈನಾರನ್ನು ಕೂಡ ಯಾರೂ ಖರೀದಿಸಿಲ್ಲ.

ಇನ್ನುಳಿದಂತೆ ಕಿವೀಸ್​ನ ಮಾರ್ಟಿನ್ ಗಪ್ಟಿಲ್, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಬೆನ್ ಕಟಿಂಗ್, ಸ್ಟೀವನ್ ಸ್ಮಿತ್, ಇಂಗ್ಲೆಂಡ್​ ಸೀಮಿತ ಓವರ್​ಗಳ ನಾಯಕ ಇಯಾನ್ ಮಾರ್ಗನ್, ಡೇವಿಡ್ ಮಲಾನ್ ಸೇರಿದಂತೆ ಹಲವರು ಬಿಕರಿಯಾಗಿಲ್ಲ.

ಇದನ್ನೂ ಓದಿ: ಆನ್‌ಲೈನ್ ಗೇಮ್​ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ : ತಿದ್ದುಪಡಿ ಕಾಯ್ದೆ ರದ್ದು

ಬೌಲರ್​ಗಳಾದ ತಬ್ರೈಜ್ ಶಮ್ಸಿ, ಆದಿಲ್ ರಶೀದ್ ಮತ್ತು ಆ್ಯಡಮ್ ಜಂಪಾ ಅವರಿಗೂ ಕೂಡ ಫ್ರಾಂಚೈಸಿಗಳು ಮಣೆ ಹಾಕಿಲ್ಲ. ಅಲ್ಲದೆ, ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಕೂಡ ಕಡೆಗಣಿಸಲ್ಪಟ್ಟಿದ್ದಾರೆ.

ಮಾರಾಟವಾಗದ ಪ್ರಮುಖ ಆಟಗಾರರು :

  • ಸುರೇಶ್ ರೈನಾ (ಮೂಲ ಬೆಲೆ 2 ಕೋಟಿ)
  • ರೋಸ್ಟನ್ ಚೇಸ್ (ಮೂಲ ಬೆಲೆ 1 ಕೋಟಿ)
  • ಬೆನ್ ಕಟಿಂಗ್ (ಮೂಲ ಬೆಲೆ 75 ಲಕ್ಷ)
  • ಮಾರ್ಟಿನ್ ಗಪ್ಟಿಲ್ (ಮೂಲ ಬೆಲೆ 75 ಲಕ್ಷ)
  • ಪಿಯೂಷ್ ಚಾವ್ಲಾ (ಮೂಲ ಬೆಲೆ 1 ಕೋಟಿ)
  • ಇಶ್ ಸೋಧಿ (ಮೂಲ ಬೆಲೆ 50 ಲಕ್ಷ)
  • ತಬ್ರೈಜ್ ಶಮ್ಸಿ (ಮೂಲ ಬೆಲೆ 1 ಕೋಟಿ)
  • ಶೆಲ್ಡನ್ ಕಾಟ್ರೆಲ್ (ಮೂಲ ಬೆಲೆ 75 ಲಕ್ಷ)
  • ಇಶಾಂತ್ ಶರ್ಮಾ (ಮೂಲ ಬೆಲೆ 1.5 ಕೋಟಿ)
  • ಚೇತೇಶ್ವರ ಪೂಜಾರ (ಮೂಲ ಬೆಲೆ 50 ಲಕ್ಷ)
  • ಆ್ಯರನ್ ಫಿಂಚ್ (ಮೂಲ ಬೆಲೆ 1.5 ಕೋಟಿ)
  • ಇಯಾನ್ ಮಾರ್ಗನ್ (ಮೂಲ ಬೆಲೆ 1.5 ಕೋಟಿ)
  • ಮಾರ್ನಸ್ ಲ್ಯಾಬುಸ್ಚಾಗ್ನೆ (ಮೂಲ ಬೆಲೆ 1 ಕೋಟಿ)
  • ಡೇವಿಡ್ ಮಲಾನ್ (ಮೂಲ ಬೆಲೆ 1.5 ಕೋಟಿ)
  • ಸಂದೀಪ್ ಲಮಿಚಾನೆ (ಮೂಲ ಬೆಲೆ 40 ಲಕ್ಷ)
  • ಅಮಿತ್ ಮಿಶ್ರಾ (ಮೂಲ ಬೆಲೆ 1.5 ಕೋಟಿ)
  • ಆಡಮ್ ಝಂಪಾ (ಮೂಲ ಬೆಲೆ 2 ಕೋಟಿ)
  • ಇಮ್ರಾನ್ ತಾಹಿರ್ (ಮೂಲ ಬೆಲೆ 2 ಕೋಟಿ)
  • ಮುಜೀಬ್ ಉರ್ ರೆಹಮಾನ್ (ಮೂಲ ಬೆಲೆ 2 ಕೋಟಿ)
  • ಆದಿಲ್ ರಶೀದ್ (ಮೂಲ ಬೆಲೆ 2 ಕೋಟಿ)
  • ಶಕೀಬ್ ಅಲ್ ಹಸನ್ (ಮೂಲ ಬೆಲೆ 2 ಕೋಟಿ)
  • ಸ್ಟೀವನ್ ಸ್ಮಿತ್ (ಮೂಲ ಬೆಲೆ 2 ಕೋಟಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.