ETV Bharat / sports

IPL 2022 Auction: ಶ್ರೇಯಸ್ ಅಯ್ಯರ್​ಗೆ ಬಂಪರ್​.. 12.5 ಕೋಟಿ ನೀಡಿದ ಕೆಕೆಆರ್​, ಧವನ್ ಪಂಜಾಬ್​ ಪಾಲು - ಟಾಟಾ ಐಪಿಎಲ್ ಹರಾಜು 2022

ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿಕೊಂಡಿದ್ದು, ತಮ್ಮ ತಂಡದ ನಾಯಕ ಸ್ಥಾನದ ಹುಡುಕಾಟದಲ್ಲಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇರ್ಪಡೆಗೊಂಡಿದ್ದಾರೆ.

IPL 2022 Auction: Shikhar Dhawan goes to Punjab Kings for Rs 8.25 cr
IPL 2022 Auction: ಶ್ರೇಯಸ್ ಅಯ್ಯರ್​ಗೆ 12.5 ಕೋಟಿ ನೀಡಿದ ಕೆಕೆಆರ್​, ಧವನ್ ಪಂಜಾಬ್​​ಗೆ
author img

By

Published : Feb 12, 2022, 12:59 PM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜಿನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಶ್ರೇಯಸ್​ ಅಯ್ಯರ್​ ಅವರನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ಸುಮಾರು 12.5 ಕೋಟಿ ರೂಪಾಯಿಗೆ ಖರೀದಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್​ ನಾಯಕತ್ವದ ಹುಡುಕಾಟದಲ್ಲಿದ್ದು, ಶ್ರೇಯಸ್ ಅಯ್ಯರ್ ಆ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗುತ್ತಿದೆ.

ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿಕೊಂಡಿದ್ದು, ಸುಮಾರು 8.25 ಕೋಟಿ ರೂಪಾಯಿಗೆ ಶಿಖರ್​ ಧವನ್ ಹರಾಜಾಗಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ ಎರಡೂ ಪ್ರಾಂಚೈಸಿಗಳು ಶಿಖರ್ ಧವನ್ ಅವರನ್ನು ಖರೀದಿಸಲು ಮುಂದಾಗಿದ್ದವು.

ಆದರೆ, ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ರೂ 8.25 ಕೋಟಿಗೆ ಶಿಖರ್​ ಧವನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಹಿಂದಿನ ಬಾರಿ ಶಿಖರ್​​ 5.20 ಕೋಟಿ ಮೊತ್ತಕ್ಕೆ ಖರೀದಿಯಾಗಿದ್ದರು. ಕಗಿಸೊ ರಬಾಡಾಗೆ 9.25 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿದೆ.

ಹಿಂದಿನ ಬಾರಿ 15.50 ಕೋಟಿ ರೂಪಾಯಿಗೆ ಖರೀದಿಸಲ್ಪಟ್ಟಿದ್ದ ಪ್ಯಾಟ್ ಕಮಿನ್ಸ್ ಈಗ 7.25 ಕೋಟಿ ರೂಪಾಯಿಗೆ ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಸೇರ್ಪಡೆಯಾಗಿದ್ದಾರೆ.

ಇದನ್ನು ಓದಿ:ಐಪಿಎಲ್ 2022 ಹರಾಜು ಪ್ರಕ್ರಿಯೆ: ಬೆಂಗಳೂರಿನಲ್ಲಿ 600 ಆಟಗಾರರ ಅದೃಷ್ಟ ಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.