ಪುಣೆ: ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆರ್ಸಿಬಿ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಗೆ ಪಾತ್ರರಾದರು. ಆರ್.ಅಶ್ವಿನ್ ಮಂಗಳವಾರ ನಡೆದ ಪಂದ್ಯದಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಶಹಬಾಜ್ ಅಹ್ಮದ್, ಸುಯಸ್ ಪ್ರಭುದೇಸಾಯಿ ಮತ್ತು ರಜತ್ ಪಾಟಿದಾರ್ ವಿಕೆಟ್ ಪಡೆದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ(271) ವಿಕೆಟ್ ಪಡೆದ ಸಾಧನೆ ತೋರಿದರು.
ಪಿಯೂಷ್ ಚಾವ್ಲಾ 270 ವಿಕೆಟ್ ಪಡೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. 2022ರ ಮೆಗಾ ಹರಾಜಿನಲ್ಲಿ ಚಾವ್ಲಾರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಹಾಗಾಗಿ, ಅವರ ದಾಖಲೆಯನ್ನು ಅಶ್ವಿನ್ ಸುಲಭವಾಗಿ ಮುರಿದಿದ್ದಾರೆ.
3ನೇ ಸ್ಥಾನದಲ್ಲಿ ಯುಜ್ವೇಂದ್ರ ಚಹಲ್ ಇದ್ದು, ಅವರು 232 ಪಂದ್ಯಗಳಲ್ಲಿ 265 ವಿಕೆಟ್, ಅಮಿತ್ ಮಿಶ್ರಾ 236 ಪಂದ್ಯಗಳಿಂದ 262 ವಿಕೆಟ್ ಪಡೆದು ಭಾರತದ ಪರ 250ಕ್ಕಿಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿದ್ದಾರೆ. 243 ವಿಕೆಟ್ ಪಡೆದಿರುವ ಬುಮ್ರಾ ವೇಗಿಗಳ ವಿಭಾಗದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೋ 529 ಪಂದ್ಯಗಳಿಂದ 583 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಇಮ್ರಾನ್ ತಾಹೀರ್(451),ರಶೀದ್ ಖಾನ್(443), ಸುನಿಲ್ ನರೈನ್(435), ಶಕಿಬ್ ಅಲ್ ಹಸನ್(416) ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಟಾಪ್ 5 ಬೌಲರ್ಗಳಾಗಿದ್ದಾರೆ.
ಇದನ್ನೂ ಓದಿ:ಈ ಮೂವರು ರನ್ಗಳಿಸಿದ್ರೆ ಆರ್ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯವೇ ಇಲ್ಲ: ಅಕಾಶ್ ಚೋಪ್ರಾ