ಮುಂಬೈ : ಸತತ 4 ಸೋಲಿನ ಬಳಿಕ ಹಾಲಿ ಚಾಂಪಿಯನ್ ಗೆಲುವಿನ ನಗೆ ಬೀರಿದೆ. ಶಿವಂ ದುಬೆ(95 ನಾಟೌಟ್), ರಾಬಿನ್ ಉತ್ತಪ್ಪ(88) ಮತ್ತು ಸ್ಪಿನ್ದ್ವಯರಾದ ಜಡೇಜಾ ಮತ್ತು ತೀಕ್ಷಣ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆರ್ಸಿಬಿ ವಿರುದ್ಧ ಮಂಗಳವಾರ 23 ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಉತ್ತಪ್ಪ-ದುಬೆ ಬ್ಯಾಟಿಂಗ್, ಜಡೇಜಾ ಮತ್ತು ತೀಕ್ಷಣ ಬೌಲಿಂಗ್ ಅಲ್ಲದೆ ಈ ಪಂದ್ಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸಿದ್ದು 36 ವರ್ಷದ ಅಂಬಾಟಿ ರಾಯುಡು ಫೀಲ್ಡಿಂಗ್. ಅವರ ಒಂದೇ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ ಅನ್ನು 'ಕ್ಯಾಚ್ ಆಫ್ ದ ಸೀಸನ್'ಎಂದು ಕ್ರಿಕೆಟ್ ಅಭಿಮಾನಿಗಳು ಬಣ್ಣಿಸಿದ್ದಾರೆ.
-
Ambati Rayudu Just took the catch of the season #Rayudu #CSKvsRCB #IPL2022 #Cskforever @roydoaumbeti pic.twitter.com/ukI9ynwBXK
— Mr.shaun❤🇮🇳 (@Shaun81172592) April 12, 2022 " class="align-text-top noRightClick twitterSection" data="
">Ambati Rayudu Just took the catch of the season #Rayudu #CSKvsRCB #IPL2022 #Cskforever @roydoaumbeti pic.twitter.com/ukI9ynwBXK
— Mr.shaun❤🇮🇳 (@Shaun81172592) April 12, 2022Ambati Rayudu Just took the catch of the season #Rayudu #CSKvsRCB #IPL2022 #Cskforever @roydoaumbeti pic.twitter.com/ukI9ynwBXK
— Mr.shaun❤🇮🇳 (@Shaun81172592) April 12, 2022
ರವೀಂದ್ರ ಜಡೇಜಾ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ 2 ಆರ್ಸಿಬಿ ತಂಡದ ಆಕಾಶ್ ದೀಪ್ ಅವರು ಶಾರ್ಟ್ ಕವರ್ನತ್ತ ಹೊಡೆದ ಚೆಂಡನ್ನು ರಾಯುಡು ಒಂದೆರಡು ಹೆಜ್ಜೆ ಓಡಿ ತಮ್ಮ ಬಲಭಾಗಕ್ಕೆ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿದುಕೊಂಡರು.
ಜಿಗಿದ ನೆಲಕ್ಕೆ ಅಪ್ಪಳಿಸಿದರೈ ಹೈದರಾಬಾದ್ ಕ್ರಿಕೆಟಿಗ ಚೆಂಡನ್ನು ಮಾತ್ರ ತಮ್ಮ ಕೈಯಿಂದ ಹೊರ ಹೋಗಲು ಬಿಡಲಿಲ್ಲ. ರಾಯುಡು ಅವರ ಈ ಕ್ರೀಡಾ ಬದ್ಧತೆಗೆ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾದರು.
216 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 193 ರನ್ಗಳಿಸಿ 23 ರನ್ಗಳ ಸೋಲೊಪ್ಪಿಕೊಂಡಿತು. ತೀಕ್ಷಣ 33ಕ್ಕೆ4, ಜಡೇಜಾ 39ಕ್ಕೆ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: 2018ರಲ್ಲಿ 105 ಕೆಜಿ, 2021ರಲ್ಲಿ 78: U-19 ತಂಡದಿಂದ ಹೊರಬಿದ್ದು ವಿಶ್ವಕಪ್, IPL ಸಾಧಕನಾದ ತೀಕ್ಷಣ!