ಅಹಮದಾಬಾದ್ : ಅಹಮದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಹಾಗೆ ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಸಹ ಈ ಫ್ರಾಂಚೈಸ್ ಖರೀದಿಸಿದೆ.
ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅಹಮದಾಬಾದ್ ಫ್ರಾಂಚೈಸಿಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಕಡಿಮೆ ಪ್ರದರ್ಶನದ ನಂತರ ಪ್ರಸ್ತುತ ಭಾರತ ತಂಡದಿಂದ ಹೊರಗುಳಿದಿರುವ ಹಾರ್ದಿಕ್‌ಗೆ ಇದು ದೊಡ್ಡ ಅವಕಾಶ ಮತ್ತು ಜವಾಬ್ದಾರಿಯಾಗಿದೆ.
ಹಾರ್ದಿಕ್ ಮತ್ತು ರಶೀದ್ ತಲಾ 15 ಕೋಟಿ ರೂ.ಗೆ ಆಯ್ಕೆಯಾಗಿದ್ದು, ಶುಭಮಾನ್ 8 ಕೋಟಿ ರೂ.ಗೆ ಸಹಿ ಹಾಕಿದ್ದಾರೆ. ರಶೀದ್ ಖಾನ್ ಅಹಮದಾಬಾದ್ ಫ್ರಾಂಚೈಸಿಯಿಂದ ಆಯ್ಕೆಯಾದ ಮತ್ತೊಂದು ದೊಡ್ಡ ಹೆಸರು. ಹಲವಾರು ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್‌ನ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶುಭಮನ್ ಗಿಲ್ ಪ್ರತಿಭಾನ್ವಿತ ಭಾರತೀಯ ಓಪನರ್ ಆಗಿದ್ದು, ಅವರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಇವರಿಗೆ ಅವಕಾಶವನ್ನು ನೀಡಿತ್ತು.
ಮೂವರ ರೆಕಾರ್ಡ್ ಇಂತಿದೆ:
ಹಾರ್ದಿಕ್ ಪಾಂಡ್ಯ
ಪಂದ್ಯಗಳು: 92, ರನ್‌ಗಳು: 1476, ಸ್ಟ್ರೈಕ್-ರೇಟ್: 153.91, ವಿಕೆಟ್‌ಗಳು: 42, ಎಕಾನಮಿ: 9.06
ರಶೀದ್ ಖಾನ್
ಪಂದ್ಯಗಳು: 76, ವಿಕೆಟ್‌ಗಳು: 93, ಎಕಾನಮಿ: : 6.33
ಶುಭಮನ್ ಗಿಲ್
ಪಂದ್ಯಗಳು: 58, ರನ್‌ಗಳು: 1417, ಸ್ಟ್ರೈಕ್-ರೇಟ್: 123