ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
-
Toss Update:
— IndianPremierLeague (@IPL) September 22, 2021 " class="align-text-top noRightClick twitterSection" data="
Kane Williamson wins the toss & @SunRisers elect to bat against @DelhiCapitals. #VIVOIPL #DCvSRH
Follow the match 👉 https://t.co/15qsacH4y4 pic.twitter.com/pBbc2iOEHz
">Toss Update:
— IndianPremierLeague (@IPL) September 22, 2021
Kane Williamson wins the toss & @SunRisers elect to bat against @DelhiCapitals. #VIVOIPL #DCvSRH
Follow the match 👉 https://t.co/15qsacH4y4 pic.twitter.com/pBbc2iOEHzToss Update:
— IndianPremierLeague (@IPL) September 22, 2021
Kane Williamson wins the toss & @SunRisers elect to bat against @DelhiCapitals. #VIVOIPL #DCvSRH
Follow the match 👉 https://t.co/15qsacH4y4 pic.twitter.com/pBbc2iOEHz
ಸನ್ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಫ್ಲೇ ಆಫ್ ಆಸೆಯನ್ನುಜೀವಂತವಾಗಿರಿಸಿಕೊಳ್ಳು ಆಶಯದಲ್ಲಿದೆ. ಇತ್ತ ಡೆಲ್ಲಿ ಪ್ರಸ್ತುತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳೊಂದಿಗೆ 2ನೇ ಸ್ಥಾನದಲ್ಲಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ವಿದೇಶಿ ಕೋಟದಲ್ಲಿ ರಶೀದ್ ಖಾನ್, ಜೇಸನ್ ಹೋಲ್ಡರ್, ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ಆಡುತ್ತಿದ್ದರೆ, ಡೆಲ್ಲಿ ಪರ ಸ್ಟೋಯ್ನಿಸ್, ಎನ್ರಿಚ್ ನೋಕಿಯಾ, ಶಿಮ್ರಾನ್ ಹೆಟ್ಮಾಯರ್ ಮತ್ತು ಕಗಿಸೋ ರಬಡಾ ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ಕೀಪರ್), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮಾಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಎನ್ರಿಚ್ ನಾರ್ಟ್ಜೆ, ಅವೇಶ್ ಖಾನ್
ಸನ್ ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದಾರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್