ದುಬೈ: ಫಾಫ್ ಡು ಪ್ಲೆಸಿಸ್ ಅವರ ಏಕಾಂಗಿ ಅರ್ಧಶತಕದ ಹೊರೆತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಕೇವಲ 135 ರನ್ಗಳ ಸಾಧಾರಣ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ಗಳಿಸಿತು. ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 76 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
-
Impressive bowling effort, time to chase this down! 💪🏻#SaddaPunjab #IPL2021 #PunjabKings #CSKvPBKS pic.twitter.com/RRPX38uxNG
— Punjab Kings (@PunjabKingsIPL) October 7, 2021 " class="align-text-top noRightClick twitterSection" data="
">Impressive bowling effort, time to chase this down! 💪🏻#SaddaPunjab #IPL2021 #PunjabKings #CSKvPBKS pic.twitter.com/RRPX38uxNG
— Punjab Kings (@PunjabKingsIPL) October 7, 2021Impressive bowling effort, time to chase this down! 💪🏻#SaddaPunjab #IPL2021 #PunjabKings #CSKvPBKS pic.twitter.com/RRPX38uxNG
— Punjab Kings (@PunjabKingsIPL) October 7, 2021
ಆದರೆ ಇವರನ್ನು ಹೊರೆತುಪಡಿಸಿದರೆ ಚೆನ್ನೈ ತಂಡದ ಯಾವೊಬ್ಬ ಬ್ಯಾಟರ್ಗಳು ಪಂಜಾಬ್ ಬೌಲರ್ಗಳ ಸವಾಲಿಗೆ ಉತ್ತರಿಸಲು ಪರದಾಡಿದರು ಮತ್ತು 20ರ ಗಡಿ ದಾಟುವಲ್ಲಿ ವಿಫಲರಾದರು. ಉತ್ತಮ ಫಾರ್ಮ್ನಲ್ಲಿದ್ದ ಆರೆಂಜ್ ಕ್ಯಾಪ್ ಸ್ಪರ್ಧಿ ರುತುರಾಜ್ ಗಾಯಕ್ವಾಡ್ 12, ಮೊಯೀನ್ ಅಲಿ ಯಾವುದೆ ರನ್ಗಳಿಸದೆ ಅರ್ಶದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು.
ಸೀಸನ್ನಲ್ಲಿ 2ನೇ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ(2) ಮತ್ತು ಅಂಬಾಟಿ ರಾಯುಡು(4) ಇಂಗ್ಲೆಂಡ್ ವೇಗಿ ಜೋರ್ಡನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತದ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಧೋನಿ 15 ಎಸೆತಗಳಲ್ಲಿ 12 ರನ್ಗಳಿಸಿ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ರವೀಂದ್ರ ಜಡೇಜಾ ಅಜೇಯ 15 ಮತ್ತು ಬ್ರಾವೋ ಅಜೇಯ 4 ರನ್ಗಳಿಸಿದರು.
ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್ 35ಕ್ಕೆ 2, ಕ್ರಿಸ್ ಜೋರ್ಡನ್ 20ಕ್ಕೆ 2, ರವಿ ಬಿಷ್ಣೋಯ್ 25ಕ್ಕೆ1 ಮತ್ತು ಮೊಹಮ್ಮದ್ ಶಮಿ 22ಕ್ಕೆ1 ವಿಕೆಟ್ ಪಡೆದು ಮಿಂಚಿದರು.