ETV Bharat / sports

ಬಲಿಷ್ಠ ಪಂಜಾಬ್​ ವಿರುದ್ಧ ಧೋನಿ ಬಳಗದ ಫೈಟ್​.. ಈ ಪಂದ್ಯ ಗೆದ್ದು ಖಾತೆ ತೆರೆಯುವ ತವಕದಲ್ಲಿ ಸಿಎಸ್​ಕೆ!

ಮುಂಬೈನ ವಾಖೆಂಡೆ ಮೈದಾನದಲ್ಲಿ ಇಂದು ಬಲಿಷ್ಠ ಪಂಜಾಬ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಟ ನಡೆಸಲಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಖಾತೆ ತೆರೆಯುವ ಇರಾದೆಯಲ್ಲಿ ಧೋನಿ ಬಳಗ ಇದೆ.

CKS vs Punjab
CKS vs Punjab
author img

By

Published : Apr 16, 2021, 5:40 PM IST

Updated : Apr 16, 2021, 6:12 PM IST

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಪಂಜಾಬ್ ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಖಾತೆ ತೆರೆಯುವ ತವಕದಲ್ಲಿ ಸಿಎಸ್​ಕೆ ತಂಡ ಇದೆ.

ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ 7 ವಿಕೆಟ್​ಗಳ ಸೋಲು ಕಂಡಿದ್ದು, ರಾಜಸ್ಥಾನ ರಾಯಲ್ಸ್​ ವಿರುದ್ಧ ಪಂಜಾಬ್​​ 4 ರನ್​ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಎಲ್ಲ ವಿಭಾಗಗಳಲ್ಲೂ ಪಂಜಾಬ್​ ತಂಡ ಬಲಿಷ್ಠವಾಗಿರುವ ಕಾರಣ ಸಿಎಸ್​ಕೆಗೆ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ.

ಹಿಂದಿನ ಪಂದ್ಯದಲ್ಲಿ ಸಿಎಸ್​ಕೆ ಪರ ಸುರೇಶ್ ರೈನಾ(54), ಮೊಯಿನ್​ ಅಲಿ(36) ಸ್ಯಾಮ್​ ಕರ್ರನ್​(34), ಜಡೇಜಾ(26) ಹಾಗೂ ರಾಯುಡು (23)ರನ್​ಗಳಿಕೆ ಮಾಡಿದ್ದರು. ಆದರೆ ಧೋನಿ ತಾವು ಎದುರಿಸಿದ್ದ ಎರಡನೇ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದರು. ಜತೆಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರಿತುರಾಜ್​ ಗಾಯಕ್ವಾಡ್ ಹಾಗೂ ಫಾಫು ಡುಪ್ಲೆಸಿಸ್​ ವೈಫಲ್ಯ ಅನುಭವಿಸಿದ್ದರು.

ಮೊದಲ ಪಂದ್ಯದಲ್ಲೇ ಆರ್ಭಟಿಸಿರುವ ಕೆಎಲ್​ ರಾಹುಲ್​(91)ರನ್​, ಕ್ರಿಸ್ ಗೇಲ್​​(40)ರನ್​ ಹಾಗೂ ದೀಪಕ್ ಹೂಡಾ(64)ರನ್​ ತಂಡಕ್ಕೆ ಆಧಾರವಾಗಿದ್ದು, ಇಂದಿನ ಪಂದ್ಯದಲ್ಲೂ ತಮ್ಮ ಪ್ರದರ್ಶನ ಮುಂದುವರೆಸುವ ಸಾಧ್ಯತೆ ಇದೆ. ಬೌಲಿಂಗ್​ ವಿಭಾಗದಲ್ಲಿ ಪಂಜಾಬ್​ ಪರ ಅರ್ಷದೀಪ್​ ಸಿಂಗ್​,ಮೊಹಮ್ಮದ್​ ಶಮಿ, ರಿಚರ್ಡ್ಸನ್​ ಆಕ್ರಮಣಕಾರಿಯಾಗಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ತಂಡ ಬಿಟ್ಟು ಇಂಗ್ಲೆಂಡ್​ಗೆ ಸ್ಟೋಕ್ಸ್​ ಪ್ರಯಾಣ.. ಸೋಮವಾರವೇ ಶಸ್ತ್ರಚಿಕಿತ್ಸೆ!

ತಂಡಗಳು ಇಂತಿವೆ

ಚೆನ್ನೈ ಸೂಪರ್ ಕಿಂಗ್ಸ್​: ಮಹೇಂದ್ರ ಸಿಂಗ್​ ಧೋನಿ(ಕ್ಯಾಪ್ಟನ್​, ವಿ.ಕೀ), ಸುರೇಶ್​ ರೈನಾ, ಅಂಬಾಟಿ ರಾಯುಡು, ಕೆಎಂ ಆಸೀಫ್​, ದೀಪಕ್​ ಚಹರ್​,ಡ್ವೇನ್​ ಬ್ರಾವೋ, ಫಾಫು ಡು ಪ್ಲೇಸಿಸ್​, ಇಮ್ರಾನ್ ತಾಹೀರ್​, ಎನ್​. ಜಗದೀಶನ್​, ಕರನ್​ ಶರ್ಮಾ, ನಿಗ್ಡಿ, ಮಿಚಲ್​ ಸ್ಯಾಟ್ನರ್​, ರವೀಂದ್ರ ಜಡೇಜಾ, ಋತುರಾಜ್​ ಗಾಯಕ್ವಾಡ್​, ಶಾರ್ದೂಲ್​ ಠಾಕೂರ್​, ಸ್ಯಾಮ್​ ಕರ್ರನ್​, ಆರ್​. ಸಾಯಿ ಕಿಶೋರ್​, ಮೊಯಿನ್​ ಅಲಿ,ಕೆ.ಗೌತಮ್​,ಚೇತೇಶ್ವರ್​ ಪೂಜಾರ್​,ಹರಿಶಂಕರ್​​ ರೆಡ್ಡಿ, ವರ್ಮಾ,ಹರಿ ನಿಶಾಂತ್​.

ಪಂಜಾಬ್​ ಕಿಂಗ್ಸ್​​: ಕೆ.ಎಲ್​ ರಾಹುಲ್​(ಕ್ಯಾಪ್ಟನ್​, ವಿ.ಕೀ), ಮಯಾಂಕ್​ ಅಗರವಾಲ್​, ಕ್ರಿಸ್ ಗೇಲ್​, ಮನ್ದೀಪ್​ ಸಿಂಗ್​,ಪ್ರಬ್ಸಿಮ್ರಾನ್ ಸಿಂಗ್​, ನಿಕೂಲಸ್​ ಪೂರನ್​(ವಿ.ಕೀ), ಸರ್ಫರಾಜ್​ ಖಾನ್​, ದೀಪಕ್​ ಹೂಡಾ, ಮುರ್ಗನ್​ ಅಶ್ವಿನ್​, ರವಿ ಬಿಸ್ನೋಯ್​, ಹರಪ್ರೀತ್​ ಬ್ರಾರ್, ಮೊಹಮ್ಮದ್​ ಶಮಿ, ಅರ್ಷದೀಪ್ ಸಿಂಗ್​, ಇಶಾನ್​ ಪೂರಲ್​, ದರ್ಶನ್​ ನಾಲ್ಕಾಂಡೆ, ಕ್ರಿಸ್ ಜೋರ್ಡನ್​, ಡೆವಿಡ್​ ಮಲನ್​, ರಿಚರ್ಡ್ಸನ್​, ಶಾರುಖ್​ ಖಾನ್​, ಜಲಜ್​ ಸೆಕ್ಸೆನ್​, ಉತ್ಕರ್ಷ್​ ಸಿಂಗ್​, ಸೌರಭ್​ ಕುಮಾರ್​​

Last Updated : Apr 16, 2021, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.