ಚೆನ್ನೈ: ಇಲ್ಲಿನ ಚಿದಂಬರಂ ಮೈದಾನದಲ್ಲಿ ನಡೆದ 17ನೇ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಗೆಲುವಿಗೆ ಮುಂಬೈ ಇಂಡಿಯನ್ಸ್ 132ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
-
Innings Break: @mipaltan post 131-6 from their 20 overs after being asked to bat first by @PunjabKingsIPL. https://t.co/NMS54FiJ5o #VIVOIPL #PBKSvMI pic.twitter.com/MetpFHdkyD
— IndianPremierLeague (@IPL) April 23, 2021 " class="align-text-top noRightClick twitterSection" data="
">Innings Break: @mipaltan post 131-6 from their 20 overs after being asked to bat first by @PunjabKingsIPL. https://t.co/NMS54FiJ5o #VIVOIPL #PBKSvMI pic.twitter.com/MetpFHdkyD
— IndianPremierLeague (@IPL) April 23, 2021Innings Break: @mipaltan post 131-6 from their 20 overs after being asked to bat first by @PunjabKingsIPL. https://t.co/NMS54FiJ5o #VIVOIPL #PBKSvMI pic.twitter.com/MetpFHdkyD
— IndianPremierLeague (@IPL) April 23, 2021
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಕ್ವಿಂಟನ್ ಡಿಕಾಕ್(3) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಕಿಶನ್ ಕೂಡ 17 ಎಸೆತಗಳಲ್ಲಿ ಕೇವಲ (6)ರನ್ಗಳಿಗೆ ವಿಕೆಟ್ ನೀಡಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಹೀಗಾಗಿ ತಂಡ 26ರನ್ಗಳಿಸುವಷ್ಟರಲ್ಲಿ 2ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಈ ವೇಳೆ ಒಂದಾದ ಕ್ಯಾಪ್ಟನ್ ರೋಹಿತ್- ಸೂರ್ಯಕುಮಾರ್ ಯಾದವ್ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 80 ರನ್ಗಳ ಜೊತೆಯಾಟ ನೀಡಿತು. 33ರನ್ಗಳಿಕೆ ಮಾಡಿದ್ದ ವೇಳೆ ಯಾದವ್ ಬಿಷ್ಣೋಯ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಬಂದ ಹಾರ್ದಿಕ್(1), ಕೃನಾಲ್(2) ವೈಫಲ್ಯ ಅನುಭವಿಸಿದರು. ಆದರೆ ಕ್ಯಾಪ್ಟನ್ ರೋಹಿತ್ (63) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಅಜೇಯರಾಗಿ ಉಳಿದ ಪೋಲಾರ್ಡ್(16)ರನ್ಗಳಿಕೆ ಮಾಡಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 131ರನ್ಗಳಿಕೆ ಮಾಡಲು ಶಕ್ತವಾಯಿತು.
ಪಂಜಾಬ್ ತಂಡದ ಪರ ಮೊಹಮ್ಮದ್ ಶಮಿ, ಬಿಷ್ಣೋಯ್ ತಲಾ 2ವಿಕೆಟ್ ಪಡೆದುಕೊಂಡರೆ, ದೀಪಕ್ ಹುಡಾ ಹಾಗೂ ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದುಕೊಂಡರು.