ETV Bharat / sports

IPL​​ 2021: ದುಬೈಗೆ ಪ್ರಯಾಣ ಬೆಳೆಸಿದ ಧೋನಿ ನೇತೃತ್ವದ ಸಿಎಸ್​ಕೆ ತಂಡ

ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಮಹೇಂದ್ರ ಸಿಂಗ್ ಧೋನಿ ಬಳಗ ಇಂದು ದುಬೈಗೆ ಪ್ರಯಾಣ ಬೆಳೆಸಿತು.

CSK Team
CSK Team
author img

By

Published : Aug 13, 2021, 3:10 PM IST

ಚೆನ್ನೈ: ಸೆಪ್ಟೆಂಬರ್​​​ 19ರಿಂದ 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಮುಂಬೈ ಇಂಡಿಯನ್ಸ್​​ ಸೆಣಸಾಟ ನಡೆಸಲಿವೆ. ಟೂರ್ನಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಸಿಎಸ್​ಕೆ ಇಂದು ಯುಎಇಗೆ ಪ್ರಯಾಣ ಬೆಳೆಸಿತು.

ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತೀಯ ಆಟಗಾರರು(ಚೆನ್ನೈ ತಂಡ) ಪ್ರಯಾಣ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಸ್​​ಕೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ತಂಡದ ಸುರೇಶ್ ರೈನಾ, ಅಂಬಾಟಿ ರಾಯುಡು, ರಾಬಿನ್​ ಉತ್ತಪ್ಪ, ಋತುರಾಜ್​ ಗಾಯ್ಕವಾಡ, ದೀಪಕ್​ ಚಹರ್​, ಕರಣ್​ ಶರ್ಮಾ ಹಾಗೂ ಕೆಎಂ ಆಸೀಫ್​​ ಚೆನ್ನೈ ಏರ್​ಪೋರ್ಟ್​ನಿಂದ ದುಬೈಗೆ ಪ್ರಯಾಣಿಸಿದ್ದು, ಅವರ ಫೋಟೋಗಳನ್ನ ಸಿಎಸ್​ಕೆ ಟ್ವಿಟ್ ಮಾಡಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಧೋನಿ ಹಾಗೂ ರೈನಾ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿರಿ: IND-ENG: ಲಾರ್ಡ್ಸ್‌ನಲ್ಲಿ ಕೆ.ಎಲ್‌.ರಾಹುಲ್‌ ಟೆಸ್ಟ್‌ ಶತಕದ ವೈಭವ

2021ನೇ ಆವೃತ್ತಿ ಐಪಿಎಲ್​ ಭಾರತದಲ್ಲಿ ಆಯೋಜನೆಗೊಂಡಿತ್ತು. ಟೂರ್ನಿಯ ಮಧ್ಯಂತರದಲ್ಲಿ ವಿವಿಧ ತಂಡದ ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಸೆಪ್ಟೆಂಬರ್​ 19ರಿಂದ ಉಳಿದ ಪಂದ್ಯಗಳು ನಡೆಯಲಿವೆ. ಐಪಿಎಲ್​ ಪಾಯಿಂಟ್​ ಪಟ್ಟಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ 2ನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ ಮೊದಲ ಸ್ಥಾನದಲ್ಲಿದ್ದು, ಆರ್​​ಸಿಬಿ ಮೂರನೇ ಸ್ಥಾನದಲ್ಲಿದೆ.

ದುಬೈಗೆ ಪ್ರಯಾಣ ಬೆಳೆಸುವ ಉದ್ದೇಶದಿಂದ ಕಳೆದ ಮೂರು ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಆಗಮಿಸಿದ್ದರು. ಇದಾದ ಬಳಿಕ ಪ್ರಸಿದ್ಧ ನಟ ವಿಜಯ್​ ದಳಪತಿಗೆ ನಿನ್ನೆ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.