ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಸೌರಭ್ ತಿವಾರಿ ಜಾಗಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಮ್ಬ್ಯಾಕ್ ಮಾಡಿದ್ದಾರೆ. ಆರ್ಸಿಬಿ ತಂಡ ಮೂರು ಬದಲಾವಣೆ ಮಾಡಿಕೊಂಡಿದ್ದು ನವದೀಪ್ ಸೈನಿ, ಟಿಮ್ ಡೇವಿಡ್ ಮತ್ತು ಹಸರಂಗರನ್ನು ಹೊರಗಿಟ್ಟು, ಜೆಮೀಸನ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಶಹ್ಬಾಜ್ಗೆ ಅವಕಾಶ ನೀಡಿದೆ.
-
🚨 Toss Update from Dubai 🚨@mipaltan have won the toss & elected to bowl against @RCBTweets in Match 39 of the #VIVOIPL. #RCBvMI
— IndianPremierLeague (@IPL) September 26, 2021 " class="align-text-top noRightClick twitterSection" data="
Follow the match 👉 https://t.co/r9cxDv2Fqi pic.twitter.com/ja4JPAeKvZ
">🚨 Toss Update from Dubai 🚨@mipaltan have won the toss & elected to bowl against @RCBTweets in Match 39 of the #VIVOIPL. #RCBvMI
— IndianPremierLeague (@IPL) September 26, 2021
Follow the match 👉 https://t.co/r9cxDv2Fqi pic.twitter.com/ja4JPAeKvZ🚨 Toss Update from Dubai 🚨@mipaltan have won the toss & elected to bowl against @RCBTweets in Match 39 of the #VIVOIPL. #RCBvMI
— IndianPremierLeague (@IPL) September 26, 2021
Follow the match 👉 https://t.co/r9cxDv2Fqi pic.twitter.com/ja4JPAeKvZ
ಯುಎಇಯಲ್ಲಿ ಐಪಿಎಲ್ ಪುನಾರಾರಂಭದ ನಂತರ ಆಡಿರುವ ಎರಡೂ ಪಂದ್ಯಗಳಲ್ಲೂ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕೆಕೆಆರ್ ಮತ್ತು ಸಿಎಸ್ಕೆ ವಿರುದ್ಧ ಸೋಲು ಕಂಡಿವೆ. ಪ್ಲೇ ಆಫ್ ದೃಷ್ಟಿಯಿಂದ ನೋಡುವುದಾದರೆ ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ. ಮುಂಬೈ ಲೀಗ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲಿನೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲುಗಳಿಂದ 10 ಅಂಕ ಪಡೆದು 3ನೇ ಸ್ಥಾನದಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೆಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್