ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 6 ವಿಕೆಟ್ಗಳ ಸೋಲು ಕಂಡಿದ್ದು, ಬ್ಯಾಟಿಂಗ್ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ. ಇದೇ ವಿಚಾರವಾಗಿ ಪಂದ್ಯ ಮುಕ್ತಾಯಗೊಂಡ ಬಳಿಕ ತಂಡದ ಕ್ಯಾಪ್ಟನ್ ಕೆ.ಎಲ್. ರಾಹುಲ್ ಮಾತನಾಡಿದ್ದು, ಅಂಜಿಕೆಯಿಲ್ಲದೆ ಕ್ರಿಕೆಟ್ ಆಡುವಂತೆ ತಂಡದ ಪ್ಲೇಯರ್ಸ್ಗೆ ಧೈರ್ಯ ತುಂಬಿದ್ದಾರೆ.
-
Not our day! #SaddaPunjab #PunjabKings #IPL2021 #PBKSvCSK pic.twitter.com/0Q4OsHJmYp
— Punjab Kings (@PunjabKingsIPL) April 16, 2021 " class="align-text-top noRightClick twitterSection" data="
">Not our day! #SaddaPunjab #PunjabKings #IPL2021 #PBKSvCSK pic.twitter.com/0Q4OsHJmYp
— Punjab Kings (@PunjabKingsIPL) April 16, 2021Not our day! #SaddaPunjab #PunjabKings #IPL2021 #PBKSvCSK pic.twitter.com/0Q4OsHJmYp
— Punjab Kings (@PunjabKingsIPL) April 16, 2021
ಈ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವಿಲ್ಲ. ಯಾವುದೇ ತಂಡ ಆರಂಭದ 7 - 8 ಓವರ್ಗಳಲ್ಲಿ ನಾಲ್ಕೈದು ವಿಕೆಟ್ ಕಳೆದುಕೊಂಡರೆ ಅದು ತಂಡಕ್ಕೆ ದೊಡ್ಡ ಹೊಡೆತ. ಅವರು ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ, ನಮ್ಮ ಕಡೆಯಿಂದ ಕೆಲವೊಂದು ತಪ್ಪು ಹೊಡೆತದಿಂದಾಗಿ ವಿಕೆಟ್ ಕಳೆದುಕೊಳ್ಳಬೇಕಾಯಿತು ಎಂದರು.
ಚೆನ್ನೈ ವಿರುದ್ಧದ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳಿಂದ ನಾವು ಕಲಿಯಬೇಕಾಗಿದ್ದು, ಮುಂದಿನ ಪಂದ್ಯಗಳಲ್ಲಿ ಸಿಡಿದೇಳಬೇಕು ಎಂದರು. ಮೊದಲ ಪಂದ್ಯದಲ್ಲಿ ನಾವು 220ರನ್ಗಳಿಕೆ ಮಾಡಿದ್ದೆವು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅದರ ಅರ್ಧ ರನ್ ಸಹ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಹೊರಬಂದು ನಾವು ಅಂಜಿಕೆಯಿಲ್ಲದ ಕ್ರಿಕೆಟ್ ಆಡಬೇಕು ಎಂದು ತಿಳಿಸಿದರು.
ನಿನ್ನೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ನ ಟಾಪ್ ಆರ್ಡರ್ ಪ್ಲೇಯರ್ಸ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಶಾರೂಖ್ ಖಾನ್ 47ರನ್ಗಳಿಕೆ ಮಾಡಿದ್ದರಿಂದ 100ರ ಗಡಿ ದಾಟಿತು. ಇದರ ಬೆನ್ನತ್ತಿದ್ದ ಚೆನ್ನೈ ತಂಡ 15.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಗೆಲುವು ಸಾಧಿಸಿತ್ತು.