ETV Bharat / sports

ಮಾವಿ ಒಂದೇ ಓವರ್​ನಲ್ಲಿ 6 ಬೌಂಡರಿ: ಸಿಕ್ರೆಟ್​ ಬಹಿರಂಗ ಪಡಿಸಿದ ಪೃಥ್ವಿ ಶಾ - ಆರು ಬೌಂಡರಿ ಸಿಡಿಸಿದ ಪೃಥ್ವಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪೃಥ್ವಿ ಶಾ ಒಂದೇ ಓವರ್​ನಲ್ಲಿ 6 ಬೌಂಡರಿ ಸಿಡಿಸಿದ್ದು, ಇದರ ಹಿಂದಿನ ರಹಸ್ಯ ಇದೀಗ ರಿವೀಲ್ ಮಾಡಿದ್ದಾರೆ.

Prithvi Shaw
Prithvi Shaw
author img

By

Published : Apr 30, 2021, 4:55 PM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 7 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಕೆಕೆಆರ್ ನೀಡಿದ್ದ 154 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಡೆಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಎದುರಾಳಿ ತಂಡದ ಬೌಲರ್​ ಶಿವಂ ಮಾವಿ ಎಸೆದ ಮೊದಲ ಓವರ್​​ನಲ್ಲೇ 6 ಬೌಂಡರಿ ಸಿಡಿಸಿದ್ದರು.

ಸಿಕ್ರೆಟ್ ಬಹಿರಂಗಪಡಿಸಿದ ಪೃಥ್ವಿ

ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿದ ಪೃಥ್ವಿ ಶಾ, ಸುಮಾರು 4-5 ವರ್ಷಗಳಿಂದ ನಾನು ಶಿವಂ ಮಾವಿ ಜೊತೆ ಕ್ರಿಕೆಟ್​ ಆಡಿದ್ದೇನೆ. ಆತ ಎಲ್ಲಿ ಬೌಲಿಂಗ್ ಮಾಡುತ್ತಾನೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಹೀಗಾಗಿ ಬೌಂಡರಿ ಸಿಡಿಸಲು ಸಹಾಯವಾಯಿತು ಎಂದಿದ್ದಾರೆ.

ಮೊದಲನೇ ಓವರ್ ಎಸೆದ ಶಿವಂ ಮಾವಿ ಒಂದು ವೈಡ್ ಸೇರಿದಂತೆ 25ರನ್​ ಬಿಟ್ಟುಕೊಟ್ಟಿದ್ದರು. ಪೃಥ್ವಿ- ಶಿವಂ ಮಾವಿ ಅಂಡರ್​-19 ವಿಶ್ವಕಪ್​ ವೇಳೆ ಟೀಂ ಇಂಡಿಯಾದಲ್ಲಿದ್ದರು.

ಇದನ್ನೂ ಓದಿ: WATCH: ಓವರ್​ನಲ್ಲಿ 6 ಬೌಂಡರಿ ಸಿಡಿಸಿ ಪೃಥ್ವಿ 'ಶೋ'; ಪಂದ್ಯದ ನಂತರ ಶಿವಂ ಸೇಡು ಹೀಗಿತ್ತು..

ನಿನ್ನೆಯ ಪಂದ್ಯದಲ್ಲಿ 41 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸೇರಿದಂತೆ 82ರನ್​ಗಳಿಕೆ ಮಾಡಿದ್ದ ಶಾ, 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.