ನವದೆಹಲಿ : ಐಪಿಎಲ್ಗೆ ಆತಿಥ್ಯ ನೀಡುತ್ತಿರುವ ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ನ ಮೈದಾನದ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ. ಇದರಿಂದ ಮುಂದಿನ ಪಂದ್ಯಗಳ ಆಯೋಜನೆ ದೊಡ್ಡ ಪ್ರಶ್ನೆಯಾಗಿ ನಿಂತಿದೆ.
29 ಐಪಿಎಲ್ ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಆದರೆ, ಇಂದು ನಡೆಯಬೇಕಿದ್ದ ಐಪಿಎಲ್ ಪಂದ್ಯ ಕೋವಿಡ್-19 ಕಾರಣದಿಂದ ರದ್ದಾಗಿದೆ.
ಕೆಕೆಆರ್ ಬೌಲರ್ಗಳಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ಗೆ ಕೊರೊನಾ ಸೋಂಕು ತಗುಲಿದ ಕಾರಣ ಆರ್ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ.
ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 8 ಪಂದ್ಯಗಳ ವೇಳಾಪಟ್ಟಿ ನಿಗಧಿ ಮಾಡಲಾಗಿದೆ. ಈಗಾಗಲೇ 4 ಪಂದ್ಯಗಳು ನಡೆದಿವೆ. ಇನ್ನು, ಮೇ 4,5, 7 ಮತ್ತು 8 ರಂದು ಮುಂದಿನ ನಾಲ್ಕು ಪಂದ್ಯಗಳು ನಡೆಯಬೇಕಿತ್ತು.
ಇದೀಗ ಗ್ರೌಂಡ್ಸ್ಮನ್ಗಳಿಗೆ ಸೋಂಕು ತಗುಲಿದ್ದು, ಈ ಸ್ಥಳದಲ್ಲಿಯೇ ಟೂರ್ನಿ ಮುಂದುವರಿಯುವುದೇ ಎಂದು ಕಾದು ನೋಡಬೇಕಿದೆ.
ಸಮಾಧಾನಕರ ಸುದ್ದಿ ಅಂದರೆ ಪಾಸಿಟಿವ್ ಪಡೆದಿರುವ ಆ 5 ಮಂದಿ ಕೆಲಸಗಾರರು ನಿನ್ನೆ ನಡೆದಿದ್ದ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಐಪಿಎಲ್ಗೆ ಕೊರೊನಾತಂಕ!!: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಮೂವರಿಗೆ ಕೊರೊನಾ ದೃಢ