ದುಬೈ : 14ನೇ ಆವೃತ್ತಿಯಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 136 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಗ್ರಸ್ಥಾನ ನಿರ್ಧರಿಸುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್(13) ಮತ್ತು ಡುಪ್ಲೆಸಿಸ್(10)ರನ್ನು ಪವರ್ ಪ್ಲೇ ಒಳಗೆ ಪೆವಿಲಿಯನ್ಗಟ್ಟಿ ಮುನ್ನಡೆ ಸಾಧಿಸಿತು. ನಂತರ ಬಂದ ಮೊಯಿನ್ ಅಲಿ 5 ರನ್ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
-
INNINGS BREAK!
— IndianPremierLeague (@IPL) October 4, 2021 " class="align-text-top noRightClick twitterSection" data="
2⃣ wickets for @akshar2026
1⃣ wicket each for @ashwinravi99, @Avesh_6 & @AnrichNortje02
5⃣5⃣* for @RayuduAmbati
The @DelhiCapitals chase will begin shortly. #VIVOIPL #DCvCSK
Scorecard 👉 https://t.co/zT4bLrDCcl pic.twitter.com/6oSkFGW29n
">INNINGS BREAK!
— IndianPremierLeague (@IPL) October 4, 2021
2⃣ wickets for @akshar2026
1⃣ wicket each for @ashwinravi99, @Avesh_6 & @AnrichNortje02
5⃣5⃣* for @RayuduAmbati
The @DelhiCapitals chase will begin shortly. #VIVOIPL #DCvCSK
Scorecard 👉 https://t.co/zT4bLrDCcl pic.twitter.com/6oSkFGW29nINNINGS BREAK!
— IndianPremierLeague (@IPL) October 4, 2021
2⃣ wickets for @akshar2026
1⃣ wicket each for @ashwinravi99, @Avesh_6 & @AnrichNortje02
5⃣5⃣* for @RayuduAmbati
The @DelhiCapitals chase will begin shortly. #VIVOIPL #DCvCSK
Scorecard 👉 https://t.co/zT4bLrDCcl pic.twitter.com/6oSkFGW29n
14ನೇ ಆವೃತ್ತಿಯಲ್ಲಿ ಇಂದೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ 19 ಎಸೆತಗಳಲ್ಲಿ 19 ರನ್ಗಳಿಸಿ ರವಿಚಂದ್ರನ್ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. 62ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಒಂದಾದ ನಾಯಕ ಧೋನಿ ಮತ್ತು ರಾಯುಡು 5ನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು.
ಜಡೇಜಾ ಮತ್ತು ಬ್ರಾವೋಗೆ ಮೊದಲು ಬಡ್ತಿ ಪಡೆದು ಬ್ಯಾಟಿಂಗ್‌ಗೆ ಆಗಮಿಸಿದ ಧೋನಿ, 27 ಎಸೆತಗಳಲ್ಲಿ ಒಂದೂ ಬೌಂಡರಿ ಗಳಿಸಲಾಗದೆ ಕೇವಲ 17 ರನ್ಗಳಿಸಿ ನಿರ್ಗಮಿಸಿದರು. ಆದರೆ, ಇವರ ಜೊತೆಗಾರ ರಾಯುಡು 43 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿ ಸಹಿತ ಅಜೇಯ 55 ರನ್ಗಳಿಸಿ 136ರ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಕ್ಯಾಪಿಟಲ್ಸ್ ಪರ ಅತ್ಯುತ್ತಮ ಪ್ರದರ್ಶನ ತೋರಿದ ಅಕ್ಷರ್ ಪಟೇಲ್ 18ಕ್ಕೆ 2 ವಿಕೆಟ್ ಪಡೆದರೆ, ಅಶ್ವಿನ್ 20ಕ್ಕೆ1, ನಾರ್ಟ್ಜ್ 37ಕ್ಕೆ1 ಮತ್ತು ಆವೇಶ್ ಖಾನ್ 35ಕ್ಕೆ 1 ವಿಕೆಟ್ ಪಡೆದರು.