ಮೆಲ್ಬೋರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿ, ಕಾಮೆಂಟೇಟರ್ಗಳು ಮತ್ತು ಪಂದ್ಯದ ಅಧಿಕಾರಿಗಳು ಸುರಕ್ಷಿತವಾಗಿ ಮಾಲ್ಡೀವ್ಸ್ ತಲುಪಿದ್ದಾರೆಂದು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ರಿಕೆಟರ್ ಅಸೋಸಿಯೇಷನ್ ಗುರುವಾರ ಖಚಿತಪಡಿಸಿದೆ.
ದಕ್ಷಿಣ ಆಫ್ರಿಕಾ ಆಟಗಾರರು ಮತ್ತು ಇಂಗ್ಲೆಂಡ್ ಆಟಗಾರರು ಬುಧವಾರ ತವರಿಗೆ ಮರಳಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ಭಾರತದಿಂದ ಬರುವು ಪ್ರಯಾಣಿಕ ವಿಮಾನವನ್ನು ನಿಷೇಧಿಸಿತ್ತು. ಸಿಎ ಕೂಡ ಸರ್ಕಾರದ ಬಳಿ ಯಾವುದೇ ವಿನಾಯಿತಿ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಆಸ್ಟ್ರೇಲಿಯನ್ನರು ಮಾಲ್ಡೀವ್ಸ್ನಲ್ಲಿ ಉಳಿದುಕೊಂಡಿದ್ದಾರೆ.
" ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟವಾಗಿ ಮುಂದೂಡಿದ ಎರಡು ದಿನಗಳ ನಂತರ ಆಸ್ಟ್ರೇಲಿಯನ್ನರನ್ನು ಭಾರತದಿಂದ ಮಾಲ್ಡೀವ್ಸ್ಗೆ ಸ್ಥಳಾಂತರಿಸುವಲ್ಲಿ ಉತ್ತಮವಾಗಿ ಸ್ಪಂದಿಸಿದ್ದಕ್ಕಾಗಿ ಸಿಎ ಮತ್ತು ಎಸಿಎ ಪರವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತವೆ" ಎಂದು ಸಿಎ ತನ್ನ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಆದರೆ, ಕೋವಿಡ್ 19 ಪಾಸಿಟಿವ್ ಪಡೆದಿರುವ ಸಿಎಸ್ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಚೆನ್ನೈನಲ್ಲೇ ಫ್ರಾಂಚೈಸಿ ಆಶ್ರಯದಲ್ಲೇ ಐಸೋಲೇಟ್ ಆಗಿದ್ದಾರೆ. ಹಸ್ಸಿ ಆಸ್ಟ್ರೇಲಿಯಾಕ್ಕೆ ಮರಳುವವರೆಗೂ ಸಿಎ ಮತ್ತು ಎಸಿಎ ಸುರಕ್ಷತೆಯ ವಿಚಾರದಲ್ಲಿ ಬಿಸಿಸಿಐ ಜೊತೆ ನಿರಂತವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿವೆ.
ಎಲ್ಲ ಆಸ್ಟ್ರೇಲಿಯನ್ನರು ಮೇ 15ರವರೆಗೆ ಮಾಲ್ಡೀವ್ಸ್ನಲ್ಲೇ ಇರಲಿದ್ದಾರೆ. ನಂತರ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಭಾರತದಿಂದಲೇ ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ ಕೆಲವು ಕಿವೀಸ್ ಆಟಗಾರರು!