ಅಬುಧಾಬಿ : ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಸ್ಪಿನ್ನರ್ ರವಿಚಂದ್ರನ್ ಆರ್ ಅಶ್ವಿನ್ ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪೂರ್ಣಗೊಳಿಸಿದರು.
ಅಶ್ವಿನ್ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಬೌಲರ್ ಎನಿಸಿದರು. ಅಶ್ವಿನ್ಗೂ ಮೊದಲು ಅಮಿತ್ ಮಿಶ್ರಾ ಮತ್ತು ಪಿಯೂಷ್ ಚಾವ್ಲಾ ಈ ಸಾಧನೆ ಮಾಡಿದ್ದಾರೆ.
34 ವರ್ಷದ ಸ್ಪಿನ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 140 ವಿಕೆಟ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 46 ಪಂದ್ಯಗಳಿಂದ 52 ಮತ್ತು ಉಳಿದ 58 ವಿಕೆಟ್ಗಳನ್ನು ಡೊಮೆಸ್ಟಿಕ್ ಪಂದ್ಯಗಳಲ್ಲಿ ಪಡೆದಿದ್ದಾರೆ. ತಮಿಳುನಾಡಿನ ಆಫ್ ಸ್ಪಿನ್ನರ್ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
ವೇಗಿ ಲಸಿತ್ ಮಾಲಿಂಗ 170 ವಿಕೆಟ್ ಪಡೆಯುವ ಮೂಲಕ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಅಮಿತ್ ಮಿಶ್ರಾ(160), ಪಿಯೂಷ್ ಚಾವ್ಲಾ(156), ಡ್ವೇನ್ ಬ್ರಾವೋ(154) ಮತ್ತು ಹರ್ಭಜನ್ ಸಿಂಗ್(150) ಇದ್ದಾರೆ.
ಮಾಲಿಂಗ ಅವರನ್ನು ಹೊರೆತುಪಡಿಸಿದರೆ ಉಳಿದ ಟಾಪ್ 4 ಬೌಲರ್ಗಳು ಈ ಐಪಿಎಲ್ನ ಭಾಗವಾಗಿದ್ದಾರೆ. ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ನ ಭಾಗವಾಗಿದ್ದಾರೆ. ಆದರೆ, ಮಿಶ್ರಾ, ಚಾವ್ಲಾ ಮತ್ತು ಹರ್ಭಜನ್ ಸಿಂಗ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ, ಈ ಆವೃತ್ತಿ ಮುಗಿಯುವವರೆಗೆ ಬ್ರಾವೋ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.
ಇದನ್ನು ಓದಿ:ಬೌಲರ್ಗಳ ಮಿಂಚಿನ ಪ್ರದರ್ಶನ: ರಾಜಸ್ಥಾನ ವಿರುದ್ಧ ಡೆಲ್ಲಿಗೆ 33 ರನ್ಗಳ ಭರ್ಜರಿ ಜಯ