ETV Bharat / sports

ಹಾರ್ದಿಕ್​ ಪಾಂಡ್ಯ ಬರೀ ಬ್ಯಾಟ್ಸ್​ಮನ್ ಆಗಿರೋದೇಕೆ?.. ಜಹೀರ್ ಖಾನ್​ ಕೊಟ್ಟರು ಕಾರಣ

ನಾವು ಪಾಂಡ್ಯರ ಬೌಲಿಂಗ್​ ನೋಡಲು ಎದುರು ನೋಡುತ್ತಿದ್ದೇವೆ. ಅವರೂ ಕೂಡ ಬೌಲಿಂಗ್ ಮಾಡು ತುಂಬಾ ಉತ್ಸುಕರಾಗಿದ್ದಾರೆ ಹಾಗೂ ಬಯಸಿದ್ದಾರೆ. ನಾನು ಮೊದಲೇ ಹೇಳಿದಂತೆ ಅವರ ದೇಹದ ಸ್ಥಿತಿ ಸರಿಯಾಗುವವರೆಗೂ ನಾವು ಕಾಯಬೇಕು ಮತ್ತು ತಾಳ್ಮೆಯಿಂದಿರಬೇಕು..

ಹಾರ್ದಿಕ್​ ಪಾಂಡ್ಯ
ಹಾರ್ದಿಕ್​ ಪಾಂಡ್ಯ
author img

By

Published : Sep 27, 2020, 8:04 PM IST

ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತನ್ನ ಮೂರನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ ಕೇವಲ ಬ್ಯಾಟ್ಸ್​ಮನ್​ ಆಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯರನ್ನು ಆದಷ್ಟು ಬೇಗ ಬೌಲರ್​ ಆಗಿಯೂ ನೋಡಬಹುದು ಎಂದು ಮುಂಬೈ ಇಂಡಿಯನ್ಸ್​ ಕ್ರಿಕೆಟ್​ ಕಾರ್ಯಾಚಾರಣೆಯ ನಿರ್ದೇಶಕ ಜಹೀರ್​ ಖಾನ್​ ಹೇಳಿದ್ದಾರೆ.

ಕಳೆದೆರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್​ ಮಾಡಿಲ್ಲ. ಆದರೆ, ಜಹೀರ್​ ಪ್ರಕಾರ ಪಾಂಡ್ಯ ಪಂದ್ಯದ ಗತಿ ಬದಲಿಸಬಲ್ಲ ಬೌಲರ್. ಆದಷ್ಟು ಬೇಗ ಅವರ ಬೌಲಿಂಗ್ ಪ್ರದರ್ಶನ ಕಾಣಬಹುದು ಎಂದಿದ್ದಾರೆ. ಹಾರ್ದಿಕ್​ ಪಾಂಡ್ಯ ಕಳೆದ ವರ್ಷ ಅಕ್ಟೋಬರ್​ನಲ್ಲಿ ಸೊಂಟದ ನೋವಿಗೆ ಒಳಾಗಿದ್ದರಿಂದ ಸರ್ಜರಿ ಮಾಡಿಸಿಕೊಂಡಿದ್ದರು.

'ಅವರು (ಪಾಂಡ್ಯ) ಬೌಲಿಂಗ್​ ಮಾಡುತ್ತಾರೆ ಎಂದು ಕೂಡ ನಿರೀಕ್ಷಿಸುತ್ತಿದ್ದೇವೆ. ಅವರು ಬೌಲಿಂಗ್ ಮಾಡುವಾಗ ಯಾವುದೇ ತಂಡದ ಸಮತೋಲನವನ್ನು ನಿಜವಾಗಿಯೂ ಬದಲಾಯಿಸುವ ವ್ಯಕ್ತಿ. ಅವರು ಕೂಡ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ, ಅವರ ದೇಹದ ಸ್ಥಿತಿಯ ಬಗ್ಗೆ ಫಿಸಿಯೋವನ್ನು ಕೇಳಬೇಕಿದೆ.

ಜಹೀರ್​ ಖಾನ್​
ಜಹೀರ್​ ಖಾನ್​

ನಾವು ಪಾಂಡ್ಯರ ಬೌಲಿಂಗ್​ ನೋಡಲು ಎದುರು ನೋಡುತ್ತಿದ್ದೇವೆ. ಅವರೂ ಕೂಡ ಬೌಲಿಂಗ್ ಮಾಡು ತುಂಬಾ ಉತ್ಸುಕರಾಗಿದ್ದಾರೆ ಹಾಗೂ ಬಯಸಿದ್ದಾರೆ. ನಾನು ಮೊದಲೇ ಹೇಳಿದಂತೆ ಅವರ ದೇಹದ ಸ್ಥಿತಿ ಸರಿಯಾಗುವವರೆಗೂ ನಾವು ಕಾಯಬೇಕು ಮತ್ತು ತಾಳ್ಮೆಯಿಂದಿರಬೇಕು' ಎಂದು ಜಹೀರ್ ಹೇಳಿದ್ದಾರೆ.

ದಿನದ ಕೊನೆಯಲ್ಲಿ ಯಾವುದೇ ಬೌಲರ್​ಗೆ ಗಾಯಗಳು ದೊಡ್ಡ ಪಾತ್ರ ವಹಿಸುತ್ತವೆ. ಅವರು ಪೂರ್ಣ ಫಿಟ್​ನೆಸ್​ ಹೊಂದಿರುವ ಬ್ಯಾಟ್ಸ್​ಮನ್​ ಆಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ನೀವು ಶೀಘ್ರದಲ್ಲೇ ಬೌಲಿಂಗ್ ಮಾಡುವುದನ್ನು ನೋಡುತ್ತೀರಿ ಎಂದು ಅವರು ಹೇಳಿದ್ದಾರೆ. ಪಾಂಡ್ಯ ಮೊದಲ ಪಂದ್ಯದಲ್ಲಿ 14 ರನ್​ ಹಾಗೂ 2ನೇ ಪಂದ್ಯದಲ್ಲಿ 18 ರನ್​ ಮಾತ್ರ ಗಳಿಸಿದ್ದಾರೆ. ಮುಂಬೈ ಫ್ರಾಂಚೈಸಿ ಇವರಿಂದ ಇನ್ನೂ ಉತ್ತಮವಾದುದನ್ನು ಎದುರು ನೋಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.