ಅಬುಧಾಬಿ (ಯು.ಎ.ಇ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಫೈನಲ್‌ಗೆ ಸನ್‌ರೈಸರ್ಸ್ ಹೈದರಾಬಾದ್‌ಗೆ ಪ್ರವೇಶಿಸಲು ಸಾಧ್ಯವಾಗದಿದ್ದರೂ, ತಂಡದ ಎಡಗೈ ವೇಗಿ ಟಿ ನಟರಾಜನ್ ಗಮನ ಸೆಳೆದಿದ್ದಾರೆ.
ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 2ರಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 17 ರನ್‌ಗಳ ಸೋಲಿನಿಂದಾಗಿ ಐಪಿಎಲ್ 2020ರಲ್ಲಿ ಎಸ್‌ಆರ್‌ಹೆಚ್ ಪ್ರಯಾಣ ಅಂತ್ಯ ಕಂಡಿದೆ.
ಆದರೆ, ಟಿ. ನಟರಾಜನ್ ಎಲ್ಲರ ಗಮನಸೆಳೆದಿದ್ದು, ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್ ಕೂಡ ತಮ್ಮ ಸಹ ಆಟಗಾರನನ್ನು ಪ್ರಶಂಸಿಸಿದ್ದಾರೆ.
"ಐಪಿಎಲ್ನಲ್ಲಿ ನಟರಾಜನ್ ಅವರಷ್ಟು ಪರಿಪೂರ್ಣ ಯಾರ್ಕರ್‌ಗಳನ್ನು ಎಸೆಯುವ ಬೇರೆ ಯಾವುದೇ ಬೌಲರನ್ನು ನಾನು ಎಂದಿಗೂ ನೋಡಿಲ್ಲ" ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಈ ಸೀಸನ್ನಲ್ಲಿ ಹೆಚ್ಚಿನ ಸಂಖ್ಯೆಯ ಯಾರ್ಕರ್‌ಗಳನ್ನು ಬೌಲ್ ಮಾಡಿದ ಟಿ ನಟರಾಜನ್ 'ಯಾರ್ಕರ್ ಕಿಂಗ್' ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಅವರು 16 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಗಳಿಸಿದ್ದು, ಪ್ರಮುಖ ವಿಕೆಟ್ ಪಡೆದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.