ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ 18ನೇ ಓವರ್‌ನಲ್ಲಿ 19 ರನ್ ಮತ್ತು ಅಂತಿಮ ಓವರ್‌ನಲ್ಲಿ 17 ರನ್ ಗಳಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ಡೆತ್ ಓವರ್‌ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳನ್ನು ಸಿಡಿಸಿದ ಸೂರ್ಯಕುಮಾರ್ ಅವರ ಸ್ಕೂಪ್ ಶಾಟ್‌ಗಳು ಆಕರ್ಷಕವಾಗಿದ್ದವು.
'ಪಂದ್ಯಕ್ಕೂ ಮೊದಲು ನಾನು ಅವರೊಂದಿಗೆ ಮಾತನಾಡಿದ್ದೇನೆ. ಈ ಸೀಸನ್ನ ಎಲ್ಲಾ ಪಂದ್ಯಗಳಲ್ಲಿ ಸೂರ್ಯಕುಮಾರ್ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಅವರು ಸೆಲೆಕ್ಟ್ ಮಾಡುತ್ತಿದ್ದ ಶಾಟ್‌ಗಳು ಪರಿಪೂರ್ಣವಾಗಿದ್ದವು. ಕೊನೆಯಲ್ಲಿ ಎಲ್ಲಾ ನವೀನ ಹೊಡೆತಗಳು ಸೂಕ್ತವಾಗಿದ್ದವು' ಎಂದು ರೋಹಿತ್ ಹೇಳಿದ್ದಾರೆ.
ನಮ್ಮ ತಂಡದಲ್ಲಿ ಗುಣಮಟ್ಟದ ಆಟಗಾರರಿದ್ದಾರೆ. ಪ್ರತಿಯೊಬ್ಬರಿಗೂ ನಾವು ಆತ್ಮವಿಶ್ವಾಸವನ್ನು ನೀಡಿದ್ದೇವೆ. ಅವರರೆಲ್ಲರೂ ತುಂಬಾ ಪ್ರತಿಭಾವಂತರು ಎಂದು ನಮಗೆ ತಿಳಿದಿದೆ. ನಮ್ಮ ವೇಗಿಗಳಿಗೆ ಪರಿಸ್ಥಿತಿಗಳು ಸಾಕಷ್ಟು ಸಹಾಯಕವಾಗಿವೆ. ಪಿಚ್‌ಗಳು ಹೇಗೆ ಇರಲಿವೆ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ಸಹಿತ 79 ರನ್ ಗಳಿಸಿ ಆಜೇಯರಾಗಿ ಉಳಿದರು.