ಢಾಕಾ: ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ಮುಂದೂಡಿಕೆ ಹಾಗೂ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿರುವುದಕ್ಕೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತುಫಿಜರ್ ರೆಹಮಾನ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಕಾರಣಕ್ಕಾಗಿ ಉಭಯ ಕ್ರಿಕೆಟ್ ಮಂಡಳಿಗಳು ಪ್ಲೇಯರ್ಸ್ಗಳಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಲು ಒಪ್ಪಿಲ್ಲ. ಹೀಗಾಗಿ ಮುಂದಿನ ತಿಂಗಳಕ್ಕೆ ಟೂರ್ನಿ ಆಯೋಜನೆ ಮಾಡುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಜ್ಮುಲ್ಲಾ ಹಸನ್ ಲಂಕಾ ಮಂಡಳಿಗೆ ಮನವಿ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೆಲ ಬೌಲರ್ಸ್ ಟೂರ್ನಿಯಲ್ಲಿ ಭಾಗಿಯಾದ ಕಾರಣಕ್ಕಾಗಿ ಪ್ರಾಂಚೈಸಿಗಳು ಈ ವೇಗಿಗೆ ತಂಡ ಸೇರಿಕೊಳ್ಳುವಂತೆ ಸಂಪರ್ಕಿಸಿದ್ದವು. ಆದರೆ ಇದರಲ್ಲಿ ಭಾಗಿಯಾಗಲು ಮುಸ್ತುಫಿಜರ್ ರೆಹಮಾನ್ಗೆ ಅಲ್ಲಿನ ಕ್ರಿಕೆಟ್ ಮಂಡಳಿ ನಿರಾಕ್ಷೇಪಣಾ ಪತ್ರ(ಎನ್ಒಸಿ) ನೀಡಲು ನಿರಾಕರಿಸಿತ್ತು. ಇದೀಗ ಇದೇ ವಿಚಾರವಾಗಿ ಅವರು ವಿಷಾದ ವ್ಯಕ್ತಪಿಡಿಸಿದ್ದಾರೆ. ಇನ್ನು 2015-16ರಲ್ಲೂ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗಿಯಾಗಲು ವೇಗದ ಬೌಲರ್ಗೆ ಬಾಂಗ್ಲಾ ಎನ್ಒಸಿ ನೀಡಿರಲಿಲ್ಲ.