ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೋಮವಾರ ಸುನಿಲ್ ನರೈನ್ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 82 ರನ್‌ಗಳಿಂದ ಮಣಿಸಿದೆ. ಇನ್ನು ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಈ ಬಗ್ಗೆ ವಾಷಿಂಗ್ಟನ್ ಸುಂದರ್ ಮಾತನಾಡಿದ್ದು,"ಆಂಡ್ರೆ ರಸ್ಸೆಲ್ ವಿರುದ್ಧ ಆಟವಾಡಲು ನಾವು ಬಹಳಷ್ಟು ಯೋಜನೆಗಳನ್ನು ಮಾಡಿದ್ದೆವು. ಚಹಾಲ್ ಜೊತೆ ಬೌಲಿಂಗ್ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಗೆಲುವು ನಮಗೆ ಸಂತೋಷ ನೀಡಿದೆ. ಆಟ ಪ್ರಾರಂಭವಾಗುವ ಮೊದಲು ನಿಧಾನಗತಿಯಲ್ಲಿ ಆಟ ಮುಂದುವರಿಯಬಹುದು ಎಂದು ಭಾವಿಸಿದ್ದೆವು. ಆದರೆ ಎಬಿಡಿ ಬ್ಯಾಟಿಂಗ್ ಮಾಡಿದ ರೀತಿ ಅಕ್ಷರಶಃ ಆಟದ ವರಸೆಯನ್ನು ಬದಲಾಯಿಸಿತು. ನಮ್ಮ ತಂಡ 160 ರನ್ ಗಳಿಸಬಹುದು ಎಂದುಕೊಂಡಿದ್ದೆವು. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ಗೆಲುವಿನ ನಗೆ ಬೀರಲು ಸಹಕಾರಿಯಾಯಿತು” ಎಂದು ಹೇಳಿದ್ದಾರೆ.
"ಆರು ಬೌಲರ್‌ಗಳು ಉತ್ತಮವಾಗಿ ಆಡಿದ್ದೇವೆ. ಇದು ಕೋಲ್ಕತ್ತಾ ತಂಡದ ವಿರುದ್ಧ 82 ರನ್‌ಗಳಿಂದ ಜಯ ಗಳಿಸಲು ಸಾಧ್ಯವಾಯಿತು. ಈ ಗೆಲುವುಗಳು ತಂಡದಲ್ಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಹೆಚ್ಚಿನ ಆಟಗಳು ಬರಲಿವೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ" ಎಂದರು.
ಎಬಿ ಡಿವಿಲಿಯರ್ಸ್‌ರ ಅತ್ಯಧಿಕ ಸ್ಕೋರ್ ಬೆಂಗಳೂರಿನ ರನ್ಗಳನ್ನು 194-2ಕ್ಕೆ ಏರಿಸಿತು. ಇನ್ನು ಡೆತ್ ಓವರ್‌ಗಳಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದ ಅವರು ಗೆಲುವಿನ ಕಾರಣಕರ್ತರಾದರು ಎಂದರು. ಕೋಲ್ಕತ್ತಾ ತಂಡಕ್ಕೆ ಸುನಿಲ್ ನರೈನ್ ಅನುಪಸ್ಥಿತಿ ಸಂಕಷ್ಕ್ಕೀಡು ಮಾಡಿತು ಎಂದನಿಸುತ್ತದೆ ಎಂದರು.