ಅಬುಧಾಬಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್ಗಳ ಸೋಲು ಅನುಭವಿಸಿದ್ದು, ಆರ್ಸಿಬಿ ಬೌಲರ್ಗಳು ಉತ್ತಮವಾಗಿ ಸ್ಪೆಲ್ ಮಾಡಿದ್ರು ಎಂದು ಕೋಲ್ಕತ್ತಾ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಇಯಾನ್ ಮಾರ್ಗನ್, "ಈ ಸೋಲಿಗೆ ನಮ್ಮ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ಆರಂಭದಲ್ಲೇ ನಾಲ್ಕರಿಂದ ಐದು ವಿಕೆಟ್ ಕಳೆದುಕೊಂಡಿದ್ದು ತುಂಬಾ ನಿರಾಶೆ ಉಂಟುಮಾಡಿದೆ. ಆರ್ಸಿಬಿ ಬೌಲರ್ಗಳು ಉತ್ತಮವಾಗಿ ಬೌಲ್ ಮಾಡಿದ್ರು. ಆದರೆ ನಾವು ಅದನ್ನು ಉತ್ತಮವಾಗಿ ಎದುರಿಸಬೇಕಿತ್ತು. ಇಬ್ಬನಿ ಇದ್ದ ಕಾರಣ ನಾವು ಮೊದಲು ಬೌಲಿಂಗ್ ನಡೆಸಿಬೇಕಿತ್ತು" ಎಂದಿದ್ದಾರೆ.
"ನಾವು ಅಗ್ರ ಮೂವರು ಬ್ಯಾಟ್ಸ್ಮನ್ಗಳ ಆಯ್ಕೆಗಳಿಗೆ ಅನುಗುಣವಾಗಿರುತ್ತೇವೆ. ಅವರು ನಮ್ಮನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ನಾವು ನಂಬುತ್ತೇವೆ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೆಂಬಲಿಸುವುದು ಮುಖ್ಯವಾಗಿತ್ತು" ಎಂದಿದ್ದಾರೆ.
![mohammed siraj](https://etvbharatimages.akamaized.net/etvbharat/prod-images/pn_8929_2210newsroom_1603328834_998.jpg)
ಕೆರಿಬಿಯನ್ ಆಟಗಾರರಾರ ಸುನಿಲ್ ನರೈನ್ ಮತ್ತು ರಸೆಲ್ ಆದಷ್ಟು ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ಮಾರ್ಗನ್ ತಿಳಿಸಿದ್ದಾರೆ. "ರಸೆಲ್ ಮತ್ತು ನರೈನ್ ಫಿಟ್ ಆಗಿ, ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ. ಮುಖ್ಯವಾಗಿ ಅವರಿಬ್ಬರು ಆಲ್ರೌಂಡ್ ಆಟಗಾರರಾಗಿದ್ದು, ತಂಡಕ್ಕೆ ನೆರವಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ ನೀಡಿದ 85 ರನ್ಗಳ ಗುರಿಯನ್ನು 13.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಆರ್ಸಿಬಿ ತಂಡ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.