ETV Bharat / sports

'ಒಮ್ಮೆಯಾದರೂ 19ನೇ ಓವರ್‌ನಲ್ಲಿ ಪಂದ್ಯ ಮುಗಿಸಿದ್ದು ಸಂತೋಷ ತರಿಸಿದೆ'

author img

By

Published : Oct 21, 2020, 1:29 PM IST

ಕಳೆದ 2 ಪಂದ್ಯಗಳಲ್ಲಿ ಇನ್ನಿಂಗ್ಸ್​ನ ಕಡೇಯ ಎಸೆತದವರೆಗೂ ಪಂದ್ಯ ಗೆಲ್ಲಲು ಸಾಧ್ಯವಾಗದ ಪಂಜಾಬ್, ಡೆಲ್ಲಿ ವಿರುದ್ಧ 19ನೇ ಓವರ್​ನಲ್ಲಿ ಗೆಲುವು ಸಾಧಿಸಿದೆ. ಇದಕ್ಕೆ ಪಂಜಾಬ್ ನಾಯಕ ರಾಹುಲ್ ಹರ್ಷ ವ್ಯಕ್ತಪಡಿಸಿದ್ದಾರೆ.

KL Rahul
ಕೆ.ಎಲ್.ರಾಹುಲ್

ದುಬೈ: 19ನೇ ಓವರ್​ನಲ್ಲಿ ಪಂದ್ಯ ಜಯಿಸಿದ್ದು ಸಂತೋಷ ತರಿಸಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

ಆರ್​ಸಿಬಿ ವಿರುದ್ಧದ ಪಂದ್ಯದ ಕೊನೆಯ ಎಸೆತದಲ್ಲಿ ಜಯ ಸಾಧಿಸಿದ್ದ ಪಂಜಾಬ್, ಮುಂಬೈ ವಿರುದ್ಧ 2ನೇ ಸೂಪರ್ ಓವರ್​ನಲ್ಲಿ ಜಯ ಸಾಧಿಸಿತ್ತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್, "ಒಮ್ಮೆಯಾದರೂ 19ನೇ ಓವರ್‌ನಲ್ಲಿ ಪಂದ್ಯ ಮುಗಿಸಿದ್ದು ಸಂತೋಷ ತರಿಸಿದೆ" ಎಂದಿದ್ದಾರೆ. "ವಿಶೇಷವಾಗಿ ಆರು ಬ್ಯಾಟ್ಸ್​ಮನ್​ಗಳು ಮತ್ತು ಒಬ್ಬ ಆಲ್‌ರೌಂಡರ್‌ನೊಂದಿಗೆ ಆಡುವಾಗ, ಅಗ್ರ ನಾಲ್ಕರಲ್ಲಿ ಒಬ್ಬರು ಕಡೆಯವರೆಗೂ ಇದ್ದು ಪಂದ್ಯ ಮುಗಿಸುವುದು ಮುಖ್ಯವಾಗಿದೆ" ಎಂದಿದ್ದಾರೆ.

ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಶಮಿ ಬಗ್ಗೆ ಮಾತನಾಡಿದ ರಾಹುಲ್, "ಶಮಿ ನಮ್ಮ ತಂಡದ ಹಿರಿಯ ಆಟಗಾರರಲ್ಲಿ ಒಬ್ಬರು. ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ" ಎಂದರು. ಅಲ್ಲದೆ ಮತ್ತೊಬ್ಬ ವೇಗಿ "ಅರ್ಷ್‌ದೀಪ್ ಸಿಂಗ್ ಪವರ್ ​ಪ್ಲೇನಲ್ಲಿ ಎರಡು ಓವರ್‌ ಬೌಲಿಂಗ್ ನಡೆಸಿದ್ರು ಮತ್ತು 19ನೇ ಓವರ್​ ಉತ್ತಮ ಸ್ಪೆಲ್ ಮಾಡಿದ್ರು. ಪ್ರತೀ ಬಾರಿಯೂ ಯಾರ್ಕರ್ ಎಸೆಯಲು ಪ್ರಯತ್ನಿಸಿದ್ರು. ಇದು ನಮ್ಮ ಬೌಲರ್​ಗಳ ಪರಿಶ್ರಮವನ್ನು ತೋರಿಸುತ್ತದೆ" ಎಂದು ಬೌಲರ್​ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಶಿಖರ್ ಧವನ್​​​(106) ಸಿಡಿಸಿದ ಅದ್ಭುತ ಶತಕದ ನೆರವಿನಿಂದ 20 ಓವರ್​ಗಳಲ್ಲಿ 164 ರನ್​ ಗಳಿಸಿತ್ತು. 165 ರನ್​ಗಳ ಗುರಿ ಪಡೆದಿದ್ದ ಪಂಜಾಬ್ 20 ಓವರ್​ಗಳಲ್ಲಿ ಇನ್ನು ಒಂದು ಓವರ್​ ಬಾಕಿ ಉಳಿದಿರುವಂತೆ 5 ವಿಕೆಟ್​ ಕಳೆಂದುಕೊಂಡು ಗುರಿ ತಲುಪಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.