ETV Bharat / sports

ಧೋನಿ ಸ್ಥಾನದಲ್ಲಿ ಬೇರೊಬ್ಬ ಗೇಮ್ ಫಿನಿಶರ್ ಬರಬೇಕು: ಲಾರಾ - ಬ್ರಿಯಾನ್ ಲಾರಾ ಲೇಟೆಸ್ಟ್ ನ್ಯೂಸ್

ಎಂ.ಎಸ್. ಧೋನಿ ಒಬ್ಬ ಗ್ರೇಟ್ ಫಿನಿಶರ್ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಬ್ಯಾಟಿಂಗ್ ಕೆಲಸ ಆಗುತ್ತಿಲ್ಲ. ಹೀಗಾಗಿ ಧೋನಿ ಸ್ಥಾನದಲ್ಲಿ ಗೇಮ್ ಫಿನಿಶ್ ಮಾಡಲು ಮತ್ತೊಬ್ಬ ಆಟಗಾರನನ್ನು ಬೆಂಬಲಿಸುವ ಅಗತ್ಯವಿದೆ ಎಂದು ವಿಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.

MS Dhoni is a great finisher
ಧೋನಿ ಸ್ಥಾನದಲ್ಲಿ ಬೇರೊಬ್ಬ ಗೇಮ್ ಫಿನಿಶರ್ ಬರಬೇಕು
author img

By

Published : Oct 8, 2020, 11:40 AM IST

ಅಬುಧಾಬಿ: ತಮ್ಮ ತಂಡದ ಪರ ಗೇಮ್​ ಫಿನಿಶ್ ಮಾಡಲು ಎಂ.ಎಸ್. ಧೋನಿ ಮತ್ತೊಬ್ಬ ಆಟಗಾರನನ್ನು ಬೆಂಲಿಸುವ ಅಗತ್ಯವಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೇಳಿದ್ದಾರೆ.

ಎಂ.ಎಸ್. ಧೋನಿ ಒಬ್ಬ ಗ್ರೇಟ್ ಫಿನಿಶರ್. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಬ್ಯಾಟಿಂಗ್ ವರ್ಕ್ ಆಗುತ್ತಿಲ್ಲ. ಹೀಗಾಗಿ ಧೋನಿ ಸ್ಥಾನದಲ್ಲಿ ಗೇಮ್ ಫಿನಿಶ್ ಮಾಡಲು ಮತ್ತೊಬ್ಬ ಆಟಗಾರನನ್ನು ಬೆಂಬಲಿಸುವ ಅಗತ್ಯವಿದೆ ಎಂದಿದ್ದಾರೆ.

2020 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿಗೆ ಒಂದೇ ಒಂದು ಪಂದ್ಯವನ್ನು ಫಿನಿಶ್ ಮಾಡಲು ಸಾಧ್ಯವಾಗಲಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಕೇವಲ 12 ರನ್​ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ರು.

MS Dhoni is a great finisher
ಎಂ.ಎಸ್.ಧೋನಿ

ಸೂಪರ್ ಕಿಂಗ್ಸ್ ತಂಡ ಡ್ವೇನ್ ಬ್ರಾವೋಗೆ 4 ಅಥವಾ 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲು ಅವಕಾಶ ನೀಡಬೇಕು ಅಂತ ಲಾರಾ ಹೇಳಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಬ್ರಾವೋ ಮೂರು ವಿಕೆಟ್ ಪಡೆದರು. ಆದರೆ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ.

MS Dhoni is a great finisher
ಡ್ವೇನ್ ಬ್ರಾವೋ

ಗೇಮ್ ಫಿನಿಶ್ ಮಾಡಲು ಧೋನಿ ಪರದಾಡುತ್ತಿರುವುದು ಸ್ವಲ್ಪ ಗೊಂದಲಮಯವಾಗಿದೆ. ಅವರ ಸ್ಥಾನದಲ್ಲಿ ಬಹುಶಃ ಇತರ ಕೆಲವು ಆಟಗಾರರನ್ನು ಹುಡುಕಬೇಕಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಲಾರಾ.

ಧೋನಿ ಉತ್ತಮ ಫಿನಿಶರ್, ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವರ್ಕ್ ಆಗುತ್ತಿಲ್ಲ. ನಿನ್ನೆ ಜಡೇಜಾ ಅವರು ಹೇಗೆ ಬ್ಯಾಟಿಂಗ್ ಮಾಡಿದರು ಎಂಬುದನ್ನು ನೋಡಿ, ಅವರು ತುಂಬಾ ಕಡಿಮೆ ಅವಕಾಶಗಳಿರುವಾಗ ಮೈದಾನಕ್ಕೆ ಬಂದರು. ಹೀಗಾಗಿ ಧೋನಿ ಈ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.