ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುರುವಾರ ಗೆಲುವು ಸಾಧಿಸಿದ್ದು, ಆಟಗಾರರಲ್ಲಿ ಸ್ವಲ್ಪ ವಿಶ್ವಾಸ ಮೂಡಿಸಲು ಸಹಾಯ ಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ನಾವು ಕೆಳಗಿದ್ದೇವೆ. ಆದರೆ ನಮ್ಮ ಸ್ಥಾನ ಇದಲ್ಲ ಎಂಬುದು ತಿಳಿದಿದೆ ಎಂದು ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, "ನಾವು ಪಾಯಿಂಟ್ ಪಟ್ಟಿಯಲ್ಲಿಈಗಿರುವ ಸ್ಥಾನಕ್ಕಿಂತ ನಮ್ಮ ತಂಡ ಉತ್ತಮವಾಗಿದೆ. ಸಾಲು ಸೋಲುಗಳ ಗಡಿ ದಾಟಿದ್ದು ಸಂತೋಷ ತರಿಸಿದೆ" ಎಂದಿದ್ದಾರೆ.
![Chris Gayle](https://etvbharatimages.akamaized.net/etvbharat/prod-images/m31dm_1169_1610newsroom_1602810523_70.jpg)
ಕ್ರಿಸ್ ಗೇಲ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರಾಹುಲ್, "ಸಿಂಹವನ್ನು ಹಸಿವಿನಿಂದ ಇಡುವುದು ಮುಖ್ಯ. ಯಾವ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದರು ಅವರು ಅಪಾಯಕಾರಿ ಆಟಗಾರ. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸುವುದನ್ನು ಒಂದು ಸವಾಲಾಗಿ ತೆಗೆದುಕೊಂಡಿದ್ದಾರೆ. ಅವರು 3ನೇ ಸ್ಥಾನದಲ್ಲಿ ಕಣಕ್ಕಿಳಿದಾಗ ಆದೇ ಅಪಾಯಕಾರಿ ಆಟಗಾರನಾಗಿದ್ದರು. ಅವರು ನೀಡಿದ ಪ್ರದರ್ಶನ ಆಶಾದಾಯಕವಾಗಿದ್ದು, ಇದನ್ನೇ ಮುಂದುವರೆಸುತ್ತೇವೆ" ಎಂದಿದ್ದಾರೆ.
ಈ ಸೀಸನ್ನಲ್ಲಿ ಮೊದಲ ಬಾರಿಗೆ ಕ್ರಿಸ್ ಗೇಲ್ ಮೈದಾನಕ್ಕಿಳಿದಿದ್ದರು. ಎಂದಿನಂತೆ ಆರಂಭಿಕನಾಕಿ ಮೈದಾನಕ್ಕಿಳಿಯದೆ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದ ಗೇಲ್ 45 ಎಸೆತಗಳಲ್ಲಿ 53 ರನ್ ಸಿಡಿಸಿದ್ರು. 3ನೇ ವಿಕೆಟ್ಗೆ ರಾಹುಲ್ ಜೊತೆ 93 ರನ್ಗಳ ಜೊತೆಯಾಟವಾಡಿದ್ರು.