ಶಾರ್ಜಾ: ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ಇಯಾನ್ ಮಾರ್ಗನ್ ಹೇಳಿದ್ದಾರೆ.
ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ತಂಡ 18 ರನ್‌ಗಳಿಂದ ಸೋಲು ಕಂಡಿದೆ. ಪಂದ್ಯ ಮುಗಿದ ನಂತರ ಮಾತನಾಡಿರುವ ಮಾರ್ಗನ್, ನಾನು ತಡವಾಗಿ ಮೈದಾನಕ್ಕೆ ಬಂದೆ ಎಂದು ನನಗನ್ನಿಸುವುದಿಲ್ಲ. ನೀವು ನಮ್ಮ ಬ್ಯಾಟಿಂಗ್ ಲೈನಪ್ ನೋಡಿ, ನಮ್ಮ ತಂಡದಲ್ಲಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿರುವ ಹಲವು ಆಟಗಾರರಿದ್ದಾರೆ ಎಂದಿದ್ದಾರೆ.
ರಸೆಲ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬಡ್ತಿ ಪಡೆದು ಮೈದಾನಕ್ಕೆ ಇಳಿದರು, ಹೀಗಾಗಿ ನಾವೆಲ್ಲ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕಾಯ್ತು. ಬಹುಶಃ ನಮಗೆ ಎಂಟು ಎಸೆತಗಳ ಅವ್ಯಕತೆ ಇತ್ತು. ಡೆಲ್ಲಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ರು. ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದ ಮಾರ್ಗನ್ 18 ಎಸೆತಗಳಲ್ಲಿ 44 ರನ್ ಗಳಿಸಿ ಕೆಕೆಆರ್ಗೆ ಗೆಲುವಿನ ಆಸೆ ಚಿಗುರಿಸಿದ್ರು. ಆದರೆ 19ನೇ ಓವರ್ನಲ್ಲಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು.