ಹೈದರಾಬಾದ್ : ನಾಯಕತ್ವದಿಂದ ಕೆಳಗಿಳಿದ ಮತ್ತು ಅಸ್ಥಿರ ಪ್ರದರ್ಶನ ತೋರಿದ ದಿನೇಶ್ ಕಾರ್ತಿಕ್ ಅವರನ್ನು ಮುಂದಿನ ಆವೃತ್ತಿಯಲ್ಲಿ ಕೈಬಿಡುವ ಸಾಧ್ಯತೆಯಿದೆ ಎಂಬ ಹುಸಿ ಮಾತುಗಳಿಗೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ರೇಕ್ ಹಾಕಿದೆ. ಅಲ್ಲದೆ, ತೀರಾ ಕಳಪೆ ಪ್ರದರ್ಶನ ತೋರಿದ್ದ ಆ್ಯಂಡ್ರೆ ರಸೆಲ್‌ರನ್ನು ಉಳಿಸಿಕೊಳ್ಳುವ ಮೂಲಕ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ...16 ಆಟಗಾರರನ್ನು ಉಳಿಸಿಕೊಂಡ ಪಂಜಾಬ್: ಮ್ಯಾಕ್ಸ್ವೆಲ್, ಕರುಣ್ ನಾಯರ್ಗೆ ಗೇಟ್ಪಾಸ್
ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್ ಸೇರಿ 17 ಸದಸ್ಯರ ತಂಡವನ್ನು ಉಳಿಸಿಕೊಂಡಿದ್ದು, ಕೇವಲ ಐದು ಆಟಗಾರರನ್ನು ಬಿಡುಗಡೆ ಮಾಡಿದೆ. ಎರಡು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್, ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್ (ವಿದೇಶಿಯರು) ಮತ್ತು ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ಧಾರ್ಥ್ ಅವರನ್ನು (ಭಾರತೀಯರು) ಬಿಡುಗಡೆ ಮಾಡಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಇಬ್ಬರು ನಾಯಕರು ಮುನ್ನಡೆಸಿದ್ದರು. ಮೊದಲಾರ್ಧದಲ್ಲಿ ದಿನೇಶ್ ಕಾರ್ತಿಕ್, ದ್ವಿತಿಯಾರ್ಧದಲ್ಲಿ ಇಯಾನ್ ಮಾರ್ಗನ್ಗೆ ನಾಯಕತ್ವ ಕೊಟ್ಟಿದ್ದರು. 14 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿ, 7 ಪಂದ್ಯಗಳಲ್ಲಿ ಸೋಲನಭವಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು.
-
📣 Meet the Retained Knights for #IPL2021#KKR #Cricket pic.twitter.com/dkW857CWX8
— KolkataKnightRiders (@KKRiders) January 20, 2021 " class="align-text-top noRightClick twitterSection" data="
">📣 Meet the Retained Knights for #IPL2021#KKR #Cricket pic.twitter.com/dkW857CWX8
— KolkataKnightRiders (@KKRiders) January 20, 2021📣 Meet the Retained Knights for #IPL2021#KKR #Cricket pic.twitter.com/dkW857CWX8
— KolkataKnightRiders (@KKRiders) January 20, 2021
ಇದನ್ನೂ ಓದಿ...ಜೇಸನ್ ರಾಯ್, ಅಲೆಕ್ಸ್ ಕ್ಯಾರಿ ಔಟ್: ಡೆಲ್ಲಿ ಉಳಿಸಿಕೊಂಡ ಯುವ ಆಟಗಾರರ ಪಟ್ಟಿ ಹೀಗಿದೆ
ಕೆಕೆಆರ್ ಉಳಿಸಿಕೊಂಡ ತಂಡ : ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲೂಕಿ ಫರ್ಗ್ಯುಸನ್, ನಿತೀಶ್ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಮ್ ಮಾವಿ, ಶುಭಮನ್ ಗಿಲ್, ಸುನಿಲ್ ನಾರಾಯಣ್, ಇಯಾನ್ ಮೋರ್ಗಾನ್ (ನಾಯಕ), ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ, ಅಲಿ ಖಾನ್, ಟಿಮ್ ಸೀಫರ್ಟ್.
ಫ್ರಾಂಚೈಸಿ ಉಳಿಸಿಕೊಂಡ ಮೊತ್ತ: ₹10.85 ಕೋಟಿ