ನವದೆಹಲಿ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೋವಿಡ್-19 ಕಾರಣದಿಂದಾಗಿ ಈ ವರ್ಷ ಹೇಗೆ ವಿಭಿನ್ನವಾಗಿದೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೇವಿನ್ ಪೀಟರ್ಸನ್ ಹೇಳಿದ್ದಾರೆ.
ಈ ಬಾರಿ ಐಪಿಎಲ್ ಖಚಿತವಾಗಿ ವಿಭಿನ್ನವಾಗಿರುತ್ತದೆ. ಅಭಿಮಾನಿಗಳಿಲ್ಲ, ಏನೂ ಇಲ್ಲ. ಎಲ್ಲರೂ ಬಯೋ ಬಬಲ್ನಲ್ಲಿರುತ್ತಾರೆ. ಇದು ಎಲ್ಲರಿಗೂ ಹೊಸ ಪ್ರದೇಶ ಎಂದು ಪೀಟರ್ಸನ್ ಹೇಳಿದ್ದಾರೆ.
ಪೀಟರ್ಸನ್ ಐಪಿಎಲ್‌ನಲ್ಲಿ ದೆಹಲಿ ಡೇರ್ ಡೆವಿಲ್ಸ್ ತಂಡ ಪ್ರತಿನಿಧಿಸಿದರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೈಸಿಂಗ್ ಪುಣೆ ಸೂಪರ್ಜೈಂಟ್ನಲ್ಲೂ ಆಡಿದ್ದರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂದಿದ್ದಾರೆ. ನಾನು ಈಗ ಏನನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ, ನಾನು ತಂಡ ಪ್ರೀತಿಸುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಬೇಕೆಂದು ನನ್ನ ಹೃದಯ ನಿಜವಾಗಿಯೂ ಬಯಸುತ್ತದೆ. ಆದಾಗ್ಯೂ, ನಾನು ಈಗ ಊಹಿಸಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಸಂಪೂರ್ಣ ಹೊಸ ಮತ್ತು ವಿಭಿನ್ನ ಋತುವಾಗಿದೆ.
ಮೊದಲ ಎರಡು ವಾರಗಳವರೆಗೆ ತಂಡಗಳನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ಮಾತ್ರ ನನ್ನ ವೃತ್ತಿಪರ ಮೆದುಳಿನ ಸಹಾಯದಿಂದ ಊಹಿಸಲು ಸಾಧ್ಯವಾಗುತ್ತದೆ ಎಂದು ಪೀಟರ್ಸನ್ ಹೇಳಿದರು. ನಾನು ಯುವ ಆಟಗಾರರನ್ನು ಪ್ರೀತಿಸುತ್ತೇನೆ. ನಾನು ರೋಮಾಂಚಕಾರಿ ಆಟಗಾರರನ್ನು ಪ್ರೀತಿಸುತ್ತೇನೆ. ರಿಸ್ಕ್ ತೆಗೆದುಕೊಳ್ಳುವ ಆಟಗಾರರನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.
ತಮ್ಮ ಐಪಿಎಲ್ ಜರ್ನಿ ಬಗ್ಗೆ ಮಾತನಾಡಿದ ಅವರು, ನಾನು ಆರ್ಥಿಕವಾಗಿ ಲಾಭ ಪಡೆದಿದ್ದೇನೆ, ಭಾರತದಲ್ಲಿ ನನಗೆ ಭಾವನಾತ್ಮಕವಾಗಿ ಲಾಭವಾಗಿದೆ. ನಾನು ಭಾರತಕ್ಕೆ ಸಾಕಷ್ಟು ಋಣಿಯಾಗಿದ್ದೇನೆ ಎಂದಿದ್ದಾರೆ.